ಮಂಗಳೂರು : ಕುಲಶೇಖರ-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಯನ್ನು ಪ್ರಾರಂಭಿಸಲು ಸಾಣೂರು ಬಿಕರ್ನಕಟ್ಟೆ ಹೈವೇಸ್ ಲಿ. ಸಂಸ್ಥೆಯನ್ನು ನೇಮಕಗೊಳಿಸಿ ಭಾರತೀಯ ಹೆದ್ದಾರಿ ಪ್ರಾಧಿಕಾರ ಕಾರ್ಯಾದೇಶ ನೀಡಿದೆ.
ಭೂಸ್ವಾಧೀನ ವೆಚ್ಚ ಹೊರತುಪಡಿಸಿ 1,137 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಮುಂದಿನ 2 ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಒಟ್ಟು 45 ಕಿ.ಮೀ. ಉದ್ದದ ಚತುಷ್ಪಥ ರಸ್ತೆಯು 45 ಮೀ. ಅಗಲದಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಗುರುಪುರ (5.5 ಕಿ.ಮೀ.) ಹಾಗೂ ಮೂಡುಬಿದಿರೆಯಲ್ಲಿ (7 ಕಿ.ಮೀ.) ಬೈಪಾಸ್ ಇರಲಿದೆ. ಹಲವು ಕೆಳಸೇತುವೆಗಳು ನಿರ್ಮಾಣವಾಗಲಿವೆ. ಬಡಗುಳಿಪಾಡಿಯಲ್ಲಿ ಟೋಲ್ ಪ್ಲಾಜಾ ಇರುವ ಸಾಧ್ಯತೆಯಿದೆ.
ಹೆದ್ದಾರಿ ಹಾದುಹೋಗುವ ದ.ಕ. ಜಿಲ್ಲೆಯ 18 ಗ್ರಾಮ ಹಾಗೂ ಉಡುಪಿಯ ಎರಡು ಗ್ರಾಮ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾದ ಕಾರಣ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾಗಿರಲಿಲ್ಲ. ಇನ್ನೂ ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಇದನ್ನೂ ಓದಿ : ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರಕಾರ ಜಾಗ ಕಲ್ಪಿಸಿಕೊಡಬೇಕು : ಜೋಶಿ