Advertisement

ಕುಲಾಲ ಸಂಘ ನವಿಮುಂಬಯಿ : ಯಕ್ಷಗಾನ ತಾಳಮದ್ದಳೆ

03:33 PM Oct 31, 2018 | Team Udayavani |

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ಪ್ರಾಯೋಜಕತ್ವದಲ್ಲಿ 15ನೇ ವಾರ್ಷಿಕ ಸ್ನೇಹ ಸಮ್ಮಿಲನದ ಪ್ರಯುಕ್ತ ರಂಗಭೂಮಿ ಫೈನ್‌ಆರ್ಟ್ಸ್  ನವಿಮುಂಬಯಿ ಇದರ ಶೇಣಿ ಶತ ಸ್ಮರಣೆ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಅಂಗವಾಗಿ  ಗಿರಿಜಾ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಅ. 26ರಂದು ನೆರೂಲ್‌ನ ಶ್ರೀ ಶನೀಶ್ವರ ಮಂದಿರದಲ್ಲಿ ಜರಗಿತು. ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ. ದೇವದಾಸ್‌ ಎಲ್‌ ಕುಲಾಲ್‌ ವಹಿಸಿದ್ದರು.

Advertisement

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಘು ಎ. ಮೂಲ್ಯ, ಗೌರವ  ಕೋಶಾಧಿಕಾರಿ ಜಯ ಎಸ್‌. ಅಂಚನ್‌, ಮಂಗಳೂರು ಕುಲಾಲ ಭವನದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾದ  ಗಿರೀಶ್‌ ಬಿ. ಸಾಲ್ಯಾನ್‌,  ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ವಾಸು ಎಸ್‌. ಬಂಗೇರ, ಕಾರ್ಯದರ್ಶಿ ಎಲ್‌. ಆರ್‌. ಮೂಲ್ಯ, ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಮೂಲ್ಯ, ರಂಗಭೂಮಿ ಫೈನ್‌ಆರ್ಟ್ಸ್

ಅಧ್ಯಕ್ಷರಾದ ತಾರಾನಾಥ್‌ ಶೆಟ್ಟಿ ಪುತ್ತೂರು, ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಬಾಲಚಂದ್ರ ರಾವ್‌, ಶ್ರೀ ಶನೀಶ್ವರ ಮಂದಿರದ ಜೊತೆ ಕೋಶಾಧಿಕಾರಿ ಕರುಣಾಕರ್‌ ಆಳ್ವ ಮತ್ತು  ರಂಗಭೂಮಿ ಫೈನ್‌ಆರ್ಟ್ಸ್

ಕೋಶಾಧಿಕಾರಿ ಹಾಗೂ ಬಂಟ್ಸ್‌ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಕೆ. ಕೆ. ಶೆಟ್ಟಿ ಇವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಕೆ. ಕೆ. ಶೆಟ್ಟಿ ಅವರು, ನನಗೆ ಯಾವುದೇ ಪೂರ್ವ ಸೂಚನೆ ನೀಡದೆ ಈ ಸ್ಥಳೀಯ ಸಮಿತಿ ನನ್ನನ್ನು ಸತ್ಕರಿಸಿದೆ. ನಾನು ಇವರಿಗೆ ಚಿರಋಣಿ. ಅಪಾರ ಸಂಖ್ಯೆಯಲ್ಲಿ ಇಂದಿನ ತಾಳಮದ್ದಳೆಯಲ್ಲಿ ಯಕ್ಷಗಾನ ಪ್ರೇಮಿಗಳನ್ನು ಒಟ್ಟು ಸೇರಿಸಿದ ಈ ಸ್ಥಳೀಯ ಸಮಿತಿಯ ಕಾರ್ಯ ಅಭಿನಂದನೀಯ. ಯಕ್ಷಗಾನ ರಂಗದಲ್ಲಿ ಮತ್ತು ನಾಟಕ ರಂಗದಲ್ಲಿ  ಕುಲಾಲ ಸಮಾಜದ ಕಲಾವಿದರು ತುಂಬಾ ಮಂದಿ ಇ¨ªಾರೆ. ಕಲಾಸೇವೆಯಲ್ಲಿ ಕುಲಾಲ ಸಮಾಜ ಮುಂಚೂಣಿಯಲ್ಲಿದೆ. ಕುಲಾಲ ಸಂಘದ ಎÇÉಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ನುಡಿದು  ಶುಭಹಾರೈಸಿದರು.

Advertisement

ಅಧ್ಯಕ್ಷತೆ  ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ದೇವದಾಸ್‌ ಕುಲಾಲ್‌ ಅವರು ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಅಪಾರ. ಶೇಣಿಯವರ ಶತ ಸ್ಮರಣೆಯ ಈ ತಾಳಮದ್ದಳೆ ಸಪ್ತಾಹ ನಿಜವಾಗಿಯೂ ಶೇಣಿಯವರ ಕಲಾ ಸೇವೆಗೆ ಸಲ್ಲಿಸುವ ಗೌರವ. ಇಂದಿನ ಈ ಆಧುನಿಕ ಯುಗದಲ್ಲಿ ಯಕ್ಷಗಾನವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಎÇÉಾ ಕಲಾವಿದರಿಗೆ ನಮ್ಮ ನಮನ ಎಂದು ನುಡಿದರು.

ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಎÇÉಾ ಕಲಾವಿದರನ್ನು ಗೌರವಿಸ ಲಾಯಿತು. ರಂಗಭೂಮಿ ಫೈನ್‌ಆರ್ಟ್ಸ್ ವತಿಯಿಂದ ಕಾರ್ಯಕ್ರಮದ ಪ್ರಾಯೋ
ಜಕತ್ವ  ವಹಿಸಿದ್ದ  ಕುಲಾಲ ಸಂಘ ನವಿ ಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ ವಾಸು ಎಸ್‌. ಬಂಗೇರ ಇವರನ್ನು ಸತ್ಕರಿಸಲಾಯಿತು.  ಕಾರ್ಯಕ್ರಮ ವನ್ನು ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ನಿರೂಪಿಸಿ, ವಂದಿಸಿದರು. ಸ್ಥಳೀಯ ಸಮಿತಿಯ ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಮೂಲ್ಯ, ಜೊತೆ ಕೋಶಾಧಿಕಾರಿ ಕೃಪೇಶ್‌ ಕುಲಾಲ…, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶಶಿಕುಮಾರ್‌ ವಿ. ಕುಲಾಲ…, ಸಮಿತಿಯ ಸದಸ್ಯರಾದ ಭೋಜ ಬಿ. ಬಂಗೇರ,  ಕೃಷ್ಣ ಸಿ. ಕುಕ್ಯಾನ್‌, ಬಿ. ಜಿ. ಅಂಚನ್‌, ರಾಜೇಶ್‌ ಕುಲಾಲ್‌, ಕೃಷ್ಣ ಕೆ. ಮೂಲ್ಯ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next