Advertisement
ನ. 5ರಂದು ವಡಾಲದ ಎನ್‌ಕೆಇಎಸ್ ಶಾಲಾ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ ಇದರ ಸಿಎಸ್‌ಟಿ-ಮುಲುಂಡ್-ಮಾನ್‌ಖುರ್ಡ್ ಸ್ಥಳೀಯ ಸಮಿತಿಯ 4 ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಘದ ಕಾರ್ಯಕ್ರಮಗಳಲ್ಲಿ ಯುವಪೀಳಿಗೆಯನ್ನು ಆಕರ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಅಮೂಲ್ಯದ ತ್ತೈಮಾಸಿಕ ಉಪ ಸಂಪಾದಕ ಶಂಕರ ವೈ. ಮೂಲ್ಯ ಮಾತನಾಡಿ, 19 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ ಅಮೂಲ್ಯ ಪತ್ರಿಕೆ, ಸಮಾಜದ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ಇನ್ನಷ್ಟು ಪ್ರಗತಿಗೊಳಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಸಮಾಜದ ಬೆಳವಣಿಗೆಯಲ್ಲಿ ಪರಿವರ್ತನೆ ಆಗಬೇಕಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಪಿ. ಶೇಖರ್ ಮೂಲ್ಯ, ಥಾಣೆ-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಣೇಶ್ ಸಾಲ್ಯಾನ್, ಮೀರಾ-ವಿರಾರ್ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಮೋಹನ್ ಬಂಜನ್, ಹಾಗೂ ಸಿಎಸ್‌ಟಿ-ಮಾನ್‌ಖುರ್ಡ್ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಶೇಖರ್ ಬಿ. ಮೂಲ್ಯ, ಸುಂದರ ತೊಕ್ಕೊಟ್ಟು, ಸುರೇಶ್ ಬಂಜನ್, ಜಗದೀಶ್ ಬಂಟ್ವಾಳ, ಮಹೇಶ್ ಸಾಲ್ಯಾನ್, ಸೂರಜ್ ಎಸ್. ಹಾಂಡೆಲ್, ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಇಂದಿರಾ ಆರ್. ಬಂಜನ್, ಧನಲಕ್ಷ್ಮೀ ಬಂಜನ್, ಮಲ್ಲಿಕಾ ಎಸ್. ಮೂಲ್ಯ, ಜ್ಯೋತಿ ಎಸ್. ಹಾಂಡೆಲ್, ಶಾಂತಾ ಮೂಲ್ಯ, ಪ್ರಿಯಾ ಡಿ. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಶೇಖರ್ ಬಿ. ಮೂಲ್ಯ ಮತ್ತು ಮಮತಾ ಗುಜರಾನ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಲ್ಯಾಣಿ ಬಂಜನ್, ಗೀತಾ ಸುಂದರ್ ಕರ್ಮರನ್ ಹಾಗೂ ಮಹಾಬಲ ಮೂಲ್ಯ ದಂಪತಿಯನ್ನು ಸಮ್ಮಾನಿಸಲಾಯಿತು. ಸುರೇಶ್ ಕೆ. ಬಂಜನ್ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಮೂಲ್ಯ, ಸುಂದರ ಮೂಲ್ಯ, ಜಗದೀಶ್ ಬಂಟ್ವಾಳ್ ಅವರು ಸಮ್ಮಾನಿತರನ್ನು ಪರಿಚಯಿಸಿದರು. ದಾನಿಗಳ ಯಾದಿಯನ್ನು ಸುನೀಲ್ ಕುಲಾಲ್ ವಾಚಿಸಿದರು. ಪ್ರಾರಂಭದಲ್ಲಿ ಭಜನೆ, ನೃತ್ಯ ವೈವಿಧ್ಯ ಹಾಗೂ ಸ್ಥಳೀಯ ಸಮಿತಿಯ ಸದಸ್ಯರಿಂದ ರುಕ್ಮಯ ಕುಲಾಲ್ ರಚಿಸಿದ ಕರುಣೆದ ಕಣ್ಣು ನಾಟಕ ಪ್ರದರ್ಶನಗೊಂಡಿತು.ಗೌರೀಶ್ ಬಂಜನ್, ದುರ್ಗಾಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಿಸಿದರು.