Advertisement

ಕುಲಾಲ ಸಂಘ ಮುಂಬಯಿ: ವಿಶಾಖಾ ಅವರಿಗೆ ಕಂಕಣ ಭಾಗ್ಯ

12:54 PM Jun 12, 2021 | Team Udayavani |

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಸಹೃದಯಿ ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದು ಳಿದ ಕಲಿನ ಪೈಪ್‌ಲೈನ್‌ ನಿವಾಸಿ ವಿಶಾಖಾ ಅವರ ವಿವಾಹವು ಮೇ 30ರಂದು ಗೋರೆಗಾವ್‌ ಪೂರ್ವದ ನಿತ್ಯಾನಂದ ಆಶ್ರಮದ ಸಭಾಗೃಹದಲ್ಲಿ ಜರಗಿತು.

Advertisement

ರಾಜ್ಯ ಸರಕಾರದ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಕಂಕಣ ಭಾಗ್ಯ ನೆರವೇರಿತು. ಸಂಘದ ಅಧ್ಯಕ್ಷ ದೇವದಾಸ್‌ ಕುಲಾಲ್, ಉಪ ಕಾರ್ಯಾಧ್ಯಕ್ಷ ರಘು ಮೂಲ್ಯ, ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌, ಕೋಶಾಧಿಕಾರಿ ಜಯ ಅಂಚನ್‌, ಜ್ಯೋತಿ ಸಹಕಾರಿ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಸಾಲ್ಯಾನ್‌, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ  ಡಿ. ಐ. ಮೂಲ್ಯ, ಕುಲಾಲ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್‌, ಮದುವೆಗೆ ದೊಡ್ಡ ಮಟ್ಟದ ದೇಣಿಗೆ ನೀಡಿದ ಸುನಿಲ್‌ ಸಾಲ್ಯಾನ್‌ ಮತ್ತು ದೇವಕಿ ಸಾಲ್ಯಾನ್‌, ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ರಘು ಮೂಲ್ಯ, ಸದಸ್ಯ ಜಯ ಬಂಗೇರ, ಮದುವೆಗೆ ಹೆಚ್ಚಿನ ಪ್ರೋತ್ಸಾಹವನ್ನಿತ್ತ ಪ್ರಮೀಳಾ ಬಂಗೇರ ಹಾಗೂ ಇತರ ಸಹೃದಯ ಬಂಧು ಮಿತ್ರರು ಉಪಸ್ಥಿತರಿದ್ದರು. ಡಿ. ಐ. ಮೂಲ್ಯ ಮತ್ತು ಕುಸುಮಾ ಡಿ. ಮೂಲ್ಯ ಅವರು ಕನ್ಯಾದಾನ ಮಾಡಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next