ಮುಂಬಯಿ, ನ. 23: ಕುಲಾಲ ಸಂಘ ಮುಂಬಯಿ ಇದರ 89ನೇ ವಾರ್ಷಿಕ ಮಹಾಸಭೆಯು ನ. 17ರಂದು ಬೆಳಗ್ಗೆ 9.30 ರಿಂದ ವಡಾಲದ ಇಂದುಲಾಲ್ ಭುವಾ ಮಾರ್ಗ್ ಸಮೀಪದ ಎನ್‌ಕೆಇಎಸ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಿತು.
ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಮಾಜದ ಹಿರಿಯ ಕಾರ್ಯಕರ್ತರಾದ ಚಂದ್ರಕಾಂತ್ ಎಸ್. ಬಾಳಾ ದಂಪತಿ ಮತ್ತು ಚಂದ್ರಹಾಸ್ ಕುಲಾಲ್ ದಂಪತಿಯನ್ನು ಸಮ್ಮಾನಿಸಲಾಯಿತು. ಹಿರಿಯ ಸಾಹಿತಿ, ಜಾನಪದ ತಜ್ಞ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಯಿತು. ಅಲ್ಲದೆ ಸಮಾಜದ ಹಿರಿಯ ಕಾರ್ಯಕರ್ತರನ್ನು ಸಮ್ಮಾನಿಸಲಾಯಿತು.
ಪ್ರತಿಭಾವಂತ ಮಕ್ಕಳ ಪೋಷಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಮೂಲ್ಯ 21ನೇ ಹುಟ್ಟುಹಬ್ಬ ಸಂಚಿಕೆ ಬಿಡುಗಡೆ ಹಾಗೂ ಸಮಾಜ ಬಾಂಧವರ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು. ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಶಾಂತಾ ಮೂಲ್ಯ, ಲಲಿತಾ ಮೂಲ್ಯ, ರೇವತಿ ಕುಲಾಲ್ ಅವರು ಪ್ರಾರ್ಥನೆಗೈದರು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು.
ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಸಂಘದ ಉಪಾಧ್ಯಕ್ಷ ರಘು ಎ. ಮೂಲ್ಯ,ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಜೊತೆ ಕಾರ್ಯದರ್ಶಿ ರಘು ಬಿ. ಮೂಲ್ಯ, ಗೌರವ ಕೋಶಾಧಿಕಾರಿ ಜಯ ಅಂಚನ್, ಜತೆ ಕೋಶಾಧಿಕಾರಿ ಸುನಿಲ್ ಕೆ. ಕುಲಾಲ್, ಉಪಸಮಿತಿಗಳ
ಪದಾಧಿಕಾರಿಗಳಾದ ಆನಂದ್ ಕೆ. ಮೂಲ್ಯ, ಪಿ. ಶೇಖರ ಮೂಲ್ಯ, ಉಮೇಶ್ ಬಿ. ಬಂಗೇರ, ಸುರೇಶ್ ಕೆ. ಕುಲಾಲ್, ಸೀನಾ ಜಿ. ಮೂಲ್ಯ, ಕೆ. ಗೋಪಾಲ್ ಬಂಗೇರ, ವಿವಿಧ ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರಾದ ಸುಂದರ್ ಮೂಲ್ಯ, ಡೊಂಬಯ್ಯ ಮೂಲ್ಯ, ವಾಸುಎಸ್. ಬಂಗೇರ, ಗಣೇಶ್ ಬಿ. ಸಾಲ್ಯಾನ್, ಶೇಖರ್ ಬಿ. ಮೂಲ್ಯ, ವಿಶ್ವನಾಥ್ ಬಂಗೇರ, ಅಮೂಲ್ಯದ ಸಂಪಾದಕ ಶಂಕರ್ ವೈ. ಮೂಲ್ಯ, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಸಭೆಯ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ