ಕುಳಗೇರಿ ಕ್ರಾಸ್ /ಬಾಗಲಕೋಟೆ: ಸರ್ಕಾರ ಸಾಕಷ್ಟು ನಿಯಮಗಳನ್ನು ಹೇರಿ ಕರೊನಾ ನಿಯಂತ್ರಿಸಲು ಹರ ಸಾಹಸ ಮಾಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಗ್ರಾಮದಲ್ಲಿ ವೀಕೆಂಡ್ ಕರ್ಫ್ಯೂಗೆ ಜನ ಮಾತ್ರ ಡೋಂಡ್ ಕೇರ್ ಎನ್ನುತ್ತಿದ್ದಾರೆ. ಈ ಯಾವ ಕಾನೂನಿಗೆ ತಲೆಕೆಡಿಸಿಕೊಳ್ಳದ ಜನ ಮಾಸ್ಕ್ ಸಾಮಾಜಿಕ ಅಂತರ ಇಲ್ಲದೆ ವೀಕೆಂಡ್ ಕರ್ಫ್ಯೂಗೂ ನಮಗೂ ಯಾವ ಸಂಬಂಧ ಇಲ್ಲ ಎಂಬಂತೆ ಓಡಾಡುತ್ತಿರುವುದು ಸಾಮಾನ್ಯವಾಗಿತ್ತು.
ಹೆಸರಿಗಷ್ಟೇ ವೀಕೆಂಡ್ ಕರ್ಫೊ: ರವಿವಾರ ವೀಕೆಂಡ್ ಕರ್ಫ್ಯೂ ಎಂಬುದು ಹೆಸರಿಗಷ್ಟೆ ಎಂಬಂತೆ ಗ್ರಾಮದಲ್ಲಿ ಎಲ್ಲ ಅಂಗಡಿಗಳನ್ನ ಓಪನ್ ಮಾಡಲಾಗಿತ್ತು, ಎಂದಿನಂತೆ ವ್ಯಾಪಾರ ವಹಿವಾಟು ಸಹ ನಡೆಸಲಾಯಿತು. ಆದರೆ ಇವುಗಳಿಗೆ ನಮಗೂ ಯಾವ ಸಂಬಂಧ ಇಲ್ಲ ಎಂಬಂತೆ ಅಧಿಕಾರಿಗಳು ತಲೆ ಕೆಡಸಿಕೊಳ್ಳದೆ ಓಡಾಡುತ್ತಿದ್ದರು.
ನಿಯಮಗಳೇ ಗೊತ್ತಿಲ್ಲ: ವಾರಾಂತ್ಯ ಕರ್ಫ್ಯೂ ಹಿನ್ನಲೆ ಯಾವ ಅಂಗಡಿಗಳು ತೆರೆಯಬೇಕು ಯಾವುದು ತೆರೆಯ ಬಾರದು ಎಂಬುದಾಗಿ ಅಧಿಕಾರಿಗಳಿಗೆ ಗೊತ್ತಿಲ್ಲವಂತೆ. ಹಾಗಿದ್ದರೆ ಜನಸಾಮಾನ್ಯರಿಗೆ ಹೇಗೆ ಗೊತ್ತಾಗುತ್ತದೆ ಎಂಬುದೆ ಗ್ರಾಮಸ್ಥರ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿದೆ. ಕಳೆದ ವಾರದಿಂದ ಶುರುವಾದ ವಾರಾಂತ್ಯ ಕರ್ಫೊಗೆ ಜನ, ವ್ಯಾಪಾರಸ್ಥರು ಬೇಸತ್ತು ಹೋಗಿದ್ದರೆ.
ಒಟ್ಟಿನಲ್ಲಿ ಗ್ರಾಮದಲ್ಲಿ ವಾರಾಂತ್ಯ ಕರ್ಫ್ಯೂಗೆ ಕ್ಯಾರೆ ಎನ್ನದೆ ಮಾಸ್ಕ್ ಸಾಮಾಜೀಕ ಅಂತರ ಇಲ್ಲದೆ ಓಡಾಡುತ್ತಿದ್ದರು.
ಇದನ್ನೂ ಓದಿ : ನೀವು ಒಳ್ಳೆಯದನ್ನೇ ಮಾಡಿದ್ದೀರಿ: ಕೊಹ್ಲಿ ಕುರಿತಾಗಿ ಪತ್ನಿ ಅನುಷ್ಕಾ ಭಾವನಾತ್ಮಕ ಬರಹ