Advertisement

ಕುಳಗೇರಿ ಕ್ರಾಸ್‌: ಕಾಲುವೆ ನೆಲಸಮ ಮಾಡಿ ನಿವೇಶನ ನಿರ್ಮಾಣ

05:52 PM Aug 23, 2024 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ನೀರಾವರಿ ಉದ್ಧೇಶಕ್ಕಾಗಿ ಸುಮಾರು 40 ವರ್ಷಗಳ ಹಿಂದೆ ರೈತರ ಅನುಕೂಲ ಕ್ಕಾಗಿ ನಿರ್ಮಿಸಲಾದ ಮಲಪ್ರಭಾ ಎಡದಂಡೆ ಮುಖ್ಯ ಕಾಲುವೆ ನೆಲಸಮ ಮಾಡಿ ಭೂಸ್ವಾಧಿಧೀನ ಮಾಡಿಕೊಂಡು ನಿವೇಶನ ನಿರ್ಮಿಸಿದ್ದಾರೆ. ಕಾಲುವೆ ಮುಚ್ಚಿ ಕಟ್ಟಡ ನಿರ್ಮಿಸುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

Advertisement

ಮಲಪ್ರಭಾ ಎಡದಂಡೆ 39ರ ಹಂಚು ಕಾಲುವೆ ಮುಚ್ಚಲಾಗಿದೆ. ಕಾಲುವೆ ದಿಕ್ಕು ಬದಲಿಸಿ ಕೆಲವರು ವೇಶನ ನಿರ್ಮಿಸಿದ್ದಾರೆ. 30 ಅಡಿ ರಸ್ತೆ ಸಮೇತ ಇದ್ದ ಮುಖ್ಯ ಕಾಲುವೆ ಮುಚ್ಚಿ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುವಂತೆ ಮಾಡಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಶಾಲಾ ಮಕ್ಕಳು ಎದ್ದು ಬಿದ್ದು ಸಾಗುತ್ತಿದ್ದಾರೆ.

ಗಂಭೀರ ಆರೋಪ: ಕಾಕನೂರ ನೀರಾವರಿ ವ್ಯಾಪ್ತಿಯಲ್ಲಿ ಬರುವ ಮಲಪ್ರಭಾ ಎಡದಂಡೆಯ ಹಲವಾರು ಕಾಲುವೆಗಳು ಸದ್ಯ ಮುಚ್ಚಿ ಹೋಗಿವೆ. ಸಣ್ಣಪುಟ್ಟ ಕಾಲುವೆಗಳು ಸದ್ಯ ಮುಚ್ಚಲಾಗಿದ್ದು ಹಾಗೂ ಮುಖ್ಯ ಕಾಲುವೆಗಳನ್ನು ಅಕ್ರಮವಾಗಿ
ಮುಚ್ಚಲಾಗುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ.

ಅಧಿಕಾರಿಗಳ ಆಶ್ವಾಸನೆ: ಈ ಕುರಿತು ನೀರಾವರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ರೈತರು ಲಿಖಿತವಾಗಿ ಮನವಿ ಕೊಟ್ಟಿದ್ದಾರೆ. ನೀರಾವರಿ ಅಧಿಕಾರಿಗಳು ಮಾತ್ರ ನೆಪ ಮಾತ್ರಕ್ಕೆ ಭೇಟಿ ನೀಡುತ್ತಾರೆ. ನಾಲ್ಕೈದು ವರ್ಷಗಳಿಂದ ಜನಪ್ರತಿನಿಧಿಗಳ ಹಾಗೆ ಆಶ್ವಾಸನೆ
ಕೊಡುತ್ತ ಕಾಲ ದೂಡುತ್ತಿದ್ದಾರೆ. ಕಾಲುವೆಗಳನ್ನು ನೆಲಸಮ ಮಾಡಲಾಗಿದೆ.

ನಿವೇಶನಗಳು ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು, ರೈತರು ಆರೋಪಿಸುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ.

Advertisement

■ ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next