Advertisement
ಸುಮಾರು 35 ವರ್ಷಗಳ ಹಿಂದೆ ಪಂಚಾಯತ್ ರಸ್ತೆಯಾಗಿ ನಿರ್ಮಾಣ ಗೊಂಡ ಈ ರಸ್ತೆ ಅನಂತರದ ದಿನಗಳಲ್ಲಿ ಅಭಿವೃದ್ಧಿ ಕಂಡಿಲ್ಲ. ಮಣ್ಣಿನರಸ್ತೆಯಾಗಿರುವುದರಿಂದ ಮಳೆಗಾಲ ದಲ್ಲಿ ರಸ್ತೆಯುದ್ದಕ್ಕೂ ಹೊಂಡ ಗುಂಡಿ
ನಿರ್ಮಾಣವಾಗಿ ನೀರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.
ಡಾಮರು ಮಾಡುವಂತೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ
ಬಂದಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 4 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆ ಮುಖಾಂತರ ಖಾರಕಟ್ಟೆ, ದೆಮ್ಮಾರು, ಪಡುಬೈಂತ್ಲ ಭಾಗದ ಜನತೆ ಪ್ರತಿದಿನ ಸಂಚರಿಸಬೇಕಾಗಿದೆ. ಈ ಭಾಗದ ವಿದ್ಯಾರ್ಥಿಗಳು ಕುಕ್ಕುಜೆ ಶಾಲೆಗೆ ತೆರಳಬೇಕಾಗಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಸಂಕಟ ಪಡುವಂತಾಗಿದೆ. ಕಳೆದ ಕೆಲ ವರ್ಷಗಳಿಂದ ರಸ್ತೆ ನಿರ್ವಹಣೆ ನಡೆಯದೇ ಇರುವುದರಿಂದ ಸಂಚಾರ ಅಸಾಧ್ಯವಾಗಿದೆ. ಕೆಲ ಸ್ಥಳೀಯರು ಬೃಹತ್ ಹೊಂಡಗಳಿಗೆ ಹೊಗೆ ಕಲ್ಲನ್ನು ತುಂಬಿಸಿ ಸ್ವಲ್ಪಮಟ್ಟಿಗೆ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ.
Related Articles
ಪಡುಬೈಂತ್ಲ ರಸ್ತೆಗೆ ಈಗಾಗಲೇ ಅನುದಾನ ಮಂಜೂರುಗೊಂಡು ಸರ್ವೆಕಾರ್ಯ ಮುಗಿದಿದ್ದು ಅಂದಾಜು ಪಟ್ಟಿ ಸಲ್ಲಿಸಲಾಗಿದೆ.
-ಮಧು ಕುಮಾರ್ , ಎಂಜಿನಿಯರ್, ಪಂಚಾಯತ್‌ರಾಜ್ ಕಾರ್ಕಳ
Advertisement
ಶೀಘ್ರ ಕಾಮಗಾರಿಖಾರಕಟ್ಟೆ ಪಡುಬೈಂತ್ಲ ರಸ್ತೆಗೆ ಶಾಸಕ ಸುನಿಲ್ ಕುಮಾರ್ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಶೀಘ್ರ ಕಾಮಗಾರಿ ನಡೆಸಲಾಗುವುದು.
-ಅರುಣ್ ಕುಮಾರ್ ಹೆಗ್ಡೆ,, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಡ್ತಲ ಜನಪ್ರತಿನಿಧಿಗೆ ಮನವಿ ಮಾಡಲಾಗಿದೆ
ಕಳೆದ 20 ವರ್ಷಗಳಿಂದ ರಸ್ತೆ ದುಃಸ್ಥಿತಿ ಬಗ್ಗೆ ಶಾಸಕರಿಗೆ, ಇತರ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದ್ದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ
-ಸುಭಾಶ್ಚಂದ್ರ ಪೂಜಾರಿ, ಕುಕ್ಕುಜೆ ದೊಂಡೇರಂಗಡಿ, ಸ್ಥಳೀಯರು