Advertisement

ಎತ್ತರ ಜಿಗಿತದಲ್ಲಿ ಸಾಧನೆ ಮಾಡಿದ ಕುಕ್ಕುಜೆಯ ಅಭಿನಯಾ ಶೆಟ್ಟಿ

06:05 AM Jun 11, 2018 | Team Udayavani |

ಅಜೆಕಾರು: ಬಡ ರೈತ ಕುಟುಂಬದಲ್ಲಿ ಬೆಳೆದು ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಮೆಟ್ಟಿ ಲೇರುತ್ತಿರುವ ಗ್ರಾಮೀಣ ಪ್ರತಿಭೆ ಕುಕ್ಕುಜೆಯ ಅಭಿನಯಾ ಶೆಟ್ಟಿ ಕಾರ್ಕಳ ತಾಲೂಕಿನ ಕಡ್ತಲ ಗ್ರಾ.ಪಂ. ವ್ಯಾಪ್ತಿಯ ದೊಂಡೇರಂಗಡಿ ಕುಕ್ಕುಜೆಯ ಕೃಷಿಕ ಸುಧಾಕರ ಶೆಟ್ಟಿ ಹಾಗೂ ಸಂಜೀವಿ ಶೆಟ್ಟಿ ದಂಪತಿಯ ಪುತ್ರಿ .

Advertisement

ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಕುಟುಂಬದಿಂದ ಬಂದ  ಇವರು ಎಳವೆ ಯಲ್ಲಿಯೇ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ತನ್ನ ಪ್ರಾಥಮಿಕ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರ,ಪ್ರೌಢ ಶಿಕ್ಷಣ ಸಂದರ್ಭ ಕ್ರೀಡಾ ಕೂಟದಲ್ಲಿ ಉಚಿತ ಶಿಕ್ಷಣದ ಅವಕಾಶ ಪಡೆದ ಪ್ರತಿಭೆ. 


1ರಿಂದ 5ನೇ ತರಗತಿಯವರೆಗೆ ಕುಕ್ಕುಜೆ ಮೂಡಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು 
5ರಿಂದ 7ನೇ ತರಗತಿಯ ವರೆಗೆ ಕುಕ್ಕುಜೆ  ದೊಂಡೇರಂಗಡಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಯಲ್ಲಿ ಶಿಕ್ಷಣ ಪಡೆದರು. ಈ ಸಂದರ್ಭದಲ್ಲಿ ಶಾಲೆಯ  ದೈಹಿಕ ಶಿಕ್ಷಣ ಶಿಕ್ಷಕ ರಾದ ಶಂಕರ್‌ ನಾಯ್ಕ ಅವರು ಅಭಿನಯಾ ಶೆಟ್ಟಿ ಅವರಿಗೆ ಕ್ರೀಡೆಗೆ ಆವಶ್ಯಕವಾದ ಪೂರಕ ವಾತಾವರಣವನ್ನು ಕಲ್ಪಿಸಿ ಕ್ರೀಡೆಯಲ್ಲಿ ಗುರಿ ಸಾಧಿಸಲು ಅವಕಾಶ ಮಾಡಿಕೊಟ್ಟರು. ಅನಂತರ ಪ್ರೌಢ ಶಿಕ್ಷಣಕ್ಕಾಗಿ ಅಜೆಕಾರು ಚರ್ಚ್‌ ಶಾಲೆಗೆ ಸೇರಿದ ಸಂದರ್ಭ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದ ಸಾಧನೆ ಮಾಡಿದ್ದಾರೆ. 

ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ಇವರ ಪ್ರತಿಭೆಯನ್ನು ಗಮನಿಸಿದ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯು 2013-14ನೇ ಸಾಲಿ ನಿಂದ ಅಭಿನಯಾ ಶೆಟ್ಟಿಯವರಿಗೆ ಉಚಿತ  ಶಿಕ್ಷಣದ ಅವಕಾಶ ಕಲ್ಪಿಸಿ ಕ್ರೀಡೆ
ಯಲ್ಲಿ ಹೆಚ್ಚಿನ ಸಾಧನೆಗೈಯಲು ಅವಕಾಶ ಕಲ್ಪಿಸಿಕೊಟ್ಟಿದೆ.  ಪ್ರಸ್ತುತ ಪ್ರಥಮ ವರ್ಷದ ಪದವಿ ಮುಗಿಸಿರುವ ಇವರು ಇತ್ತೀಚೆಗೆ ಶ್ರೀಲಂಕಾ ದಲ್ಲಿ ನಡೆದ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. 

ಇವರು 2013-14ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕ್ರೀಡಾಕೂಟ ದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ 
ಗಳಿಸಿ ಝಾರ್ಖಂಡ್‌ನ‌ ರಾಂಚಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 2014-15, 2015-16, 2016-17ನೇ ಸಾಲಿನಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ  ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. 

2017-18ನೇ ಸಾಲಿನಲ್ಲಿ ಟ್ರಿವೇಂಡ್ರಂನಲ್ಲಿ ಜರಗಿದ ಸೌತ್‌ ಝೊàನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ ಇವರು ಆಂಧ್ರಪ್ರದೇಶದಲ್ಲಿ ನಡೆದ ಕ್ರೀಡಾಕೂಟ
ದಲ್ಲಿ ಕಂಚಿನ ಪದಕ ಪಡೆದಿದ್ದರು. 

Advertisement

2017-18ನೇ ಸಾಲಿನಲ್ಲಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಆಲ್‌  ಇಂಡಿಯಾ ಇಂಟರ್‌ ಯುನಿವರ್ಸಿಟಿ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 

2018-19ನೇ ಸಾಲಿನಲ್ಲಿ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಸಾಧನೆ ಇವರದ್ದು.ಅಭಿನಯಾ ಶೆಟ್ಟಿ ವಸಂತ್‌ ಜೋಗಿ ಅವರಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿದ್ದು, ಹುಟ್ಟೂರಿನ ಜನರ ನಿರಂತರ ಪ್ರೋತ್ಸಾಹ ಇವರ ಸಾಧನೆಗೆ ಬೆಂಬಲವಾಗಿ ನಿಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next