Advertisement

ಕುಕ್ಕೆ: ಟೆಂಪೋ-ಕಾರು ಢಿಕ್ಕಿ; ಐವರು ಗಂಭೀರ

06:00 AM Apr 23, 2018 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಜಾಲೂರು  ಮಾರ್ಗ ಮಧ್ಯೆ ಇಂಜಾಡಿ ಬಳಿ ಟೆಂಪೋ ಟ್ರಾವೆಲರ್‌ ಮತ್ತು ಇಂಡಿಕಾ ಕಾರು  ರವಿವಾರ ಪರಸ್ಪರ ಢಿಕ್ಕಿ ಹೊಡೆದು ಮಗು ಸಹಿತ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ  ದೇವರ ದರ್ಶನ ಪಡೆದು  ಸುಬ್ರ ಹ್ಮಣ್ಯ- ಜಾಲೂರು ಮಾರ್ಗವಾಗಿ ಬೆಂಗ ಳೂರು ಕಡೆಗೆ ಟೆಂಪೋ ಟ್ರಾವೆಲ್ಸ್‌ ನಲ್ಲಿ   ವಾಪಸಾಗುತ್ತಿದ್ದರು. ಆಗ  ಮೈಸೂರಿನಿಂದ ಕುಕ್ಕೆಗೆ  ಬರುತ್ತಿದ್ದ ಇಂಡಿಕಾ ಕಾರು  ಢಿಕ್ಕಿಯಾಗಿದೆ.

Advertisement

ಘಟನೆಯಲ್ಲಿ ಕಾರಿನಲ್ಲಿದ್ದ  ದಂಪತಿಗಳಾದ ಹರೀಶ್‌ (47), ರಶ್ಮಿ  (36)  ಮಕ್ಕಳಾದ  ರೋಹಿತ್‌ (7), ಸುಬ್ರಹ್ಮಣ್ಯ (11), ಕಿಶನ್‌ (13), ಪೂರ್ವಿ (13) ಅವರಿಗೆ ತೀವ್ರ ಗಾಯಗಳಾಗಿವೆ. ರಕ್ತದ ಮಡು ವಿನಲ್ಲಿ  ಚಿಂತಾಜನಕ  ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು  ಸ್ಥಳೀಯರು  1ಂ8 ಅಂಬುಲೆನ್ಸ್‌ ಮೂಲಕ  ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅವರಲ್ಲಿ  ಪೂರ್ವಿಯ ಸ್ಥಿತಿ ಚಿಂತಾನಕವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಆ್ಯಂಬುಲೆನ್ಸ್‌ಗೆ ಪರದಾಟ
ಘಟನೆ ನಡೆದ ತತ್‌ಕ್ಷಣಕ್ಕೆ ಆ್ಯಂಬುಲೆನ್ಸ್‌ ಸಿಗದೆ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬ ವಾಯಿತು.  ಆಗ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ 108  ಆ್ಯಂಬುಲೆನ್ಸ್‌ ಇರಲಿಲ್ಲ. ಸ್ಥಳೀಯರು ಕರೆ ಮಾಡಿದಾಗ ಕಡಬದಿಂದ ಆ್ಯಂಬುಲೆನ್ಸ್‌ ಬರಬೇಕಾಗಿದೆ ಎಂಬ ಉತ್ತರ ಸಿಕ್ಕಿತು. ಬಳಿಕ ಸ್ಥಳೀಯರು ದೇಗುಲಕ್ಕೆ ವಿಷಯ ತಿಳಿಸಿ ದೇಗುಲದ ಆ್ಯಂಬುಲೆನ್ಸ್‌ ತರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.  

ವಾಹನ ದಟ್ಟಣೆ  ಕಾರಣ
ಬೆಂಗಳೂರು-ಮಂಗಳೂರು ರಾ.ಹೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ. ಆದ್ದರಿಂದ ಮೈಸೂರು- ಮಡಿಕೇರಿ – ಸುಳ್ಯ- ಜಾಲೂರು-ಸುಬ್ರಹ್ಮಣ್ಯ  ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ದಟ್ಟಣೆ ಹೆಚ್ಚುತ್ತಿದೆ.  ಆದ್ದರಿಂದ ಇಲ್ಲಿ ಆಗಾಗ ಅವಘಡಗಳು   ಸಂಭವಿಸುತ್ತಿರುತ್ತವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ  ಮಡಿಕೇರಿ ಭಾಗದಿಂದ ಹತ್ತಿರವಾಗಿ ಸಂಪರ್ಕಿಸಲು ಇರುವ ಗಾಳಿಬೀಡು-ಕಡಮಕಲ್ಲು- ಕಲ್ಮಕಾರು-ಸುಬ್ರಹ್ಮಣ್ಯ ಕಚ್ಚಾ ರಸ್ತೆಯ ತೊಡಕು ನಿವಾರಿಸಿ ಅದನ್ನು ಅಭಿವೃದ್ಧಿ ಪಡಿಸಿದಲ್ಲಿ ಈ ಮಾರ್ಗದ ದಟ್ಟಣೆ ತಗ್ಗಿಸಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next