Advertisement
ಇಂಜಾಡಿ ಸಮೀಪದ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆನೆ ಯಶಸ್ವಿಗೆ ಗುತ್ತಿಗಾರು ಪಶುವೈದ್ಯ ಕೇಂದ್ರದ ಡಾ| ವೆಂಕಟಾಚಲಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಆಹಾರ ಸೇವಿಸದೇ ಇರುವುದು ಮತ್ತು ಪೂರ್ಣ ಪ್ರಮಾಣದ ಲದ್ದಿಯನ್ನು ಹಾಕದೇ ಇರುವುದು ಆನೆಯ ಆರೋಗ್ಯದ ಬಗ್ಗೆ ಆತಂಕ ಉಳಿಸಿದೆ. ದೇಹಾರೋಗ್ಯ ಸಮತೋಲನ ಕಾಯ್ದುಕೊಳ್ಳಲು ಗ್ಲೂಕೋಸ್, ಕ್ಯಾಲ್ಸಿಯಂ, ಎಳನೀರು, ಗರಿಕೆ ಹುಲ್ಲು ನಿರಂತರ ನೀಡಲಾಗುತ್ತಿದೆ. ಜೀರ್ಣ ಪ್ರಕ್ರಿಯೆ ಸುಧಾರಿಸಲು ಚಿಕಿತ್ಸೆ ನೀಡಲಾಗುತ್ತಿದೆ. ಆನೆಯ ಮೂತ್ರಕೋಶ ದಲ್ಲಿ ದೋಷವಿರುವುದು ತಪಾಸಣೆ ವೇಳೆ ವೈದ್ಯರ ಗಮನಕ್ಕೆ ಬಂದಿದ್ದು, ಅದಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನೆಯು ನಿತ್ರಾಣ ಹಾಗೂ ಬಳಲಿಕೆಯಿಂದ ಕೂಡಿದೆ.
ಆನೆಯ ಆರೋಗ್ಯದ ಕುರಿತಂತೆ ದೇವಸ್ಥಾನದ ಆಡಳಿತ ಮಂಡಳಿ ತೀವ್ರ ನಿಗಾ ವಹಿಸಿದ್ದು, ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನಿತ್ಯವೂ 2 ಬಾರಿ ಭೇಟಿ ನೀಡಿ ಆನೆಯ ಆರೋಗ್ಯ ವಿಚಾರಿಸಿ, ಅಗತ್ಯಗಳ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಮಂಗಳವಾರ ಸಂಜೆ ಮೈಸೂರಿನ ಪಶು ವೈದ್ಯ ಡಾ| ಶ್ರೀನಿವಾಸ್ ಆಗಮಿಸಿ ಚಿಕಿತ್ಸೆ ನೀಡಿ ದರು. ಶೆಡ್‌ನಿಂದ ಹೊರಗಡೆ ಓಡಾಡಿಸಿದರು.