Advertisement
ಶುಕ್ರವಾರ ಮುಂಜಾನೆ ದೇಗುಲದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಆ ಬಳಿಕ ರಾಜಬೀದಿಯಲ್ಲಿ ವೈಭವದ ಬೃಹ್ಮರಥೋತ್ಸವ ನಡೆಯಿತು. 86 ಮಂದಿ ಭಕ್ತರು ಬ್ರಹ್ಮರಥ ಸೇವೆ ಸಲ್ಲಿಸಿದರು.
Related Articles
ಜಾತ್ರೆ ಪ್ರಯುಕ್ತ ದೇಗುಲ ಹಾಗೂ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಾಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು. ಕೃಷಿ ಮೇಳದಲ್ಲಿ ವಿವಿಧ ಬಗೆಯ ಬಿತ್ತನೆ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಗಳು, ಕೃಷಿ ಉತ್ಪನ್ನಗಳು, ಹಾಲು ಕರೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ವಿವಿಧ ಜಾತಿಯ ಗಿಡಗಳು ಇತ್ಯಾದಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಜಾತಿಯ ಕಾಡುತ್ಪತ್ತಿ ಗಿಡಗಳ ಪ್ರದರ್ಶನ, ವಿವಿಧ ಭತ್ತದ ತಳಿಗಳು, ಹಾಗೂ ನಾಟಿ ಪದ್ಧತಿಯ ಪ್ರಾತ್ಯಕ್ಷಿತೆ ಪುಸ್ತಕ ಮಳಿಗೆ ಹಾಗೂ ಪ್ರಾಚೀನ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಗಳು ಭರದಿಂದ ನಡೆದವು. ಸುಳ್ಯದ ಕೆವಿಜಿ ಆಯುರ್ವೇದಿಕ್ ವಿಭಾಗದ ವತಿಯಿಂದ ಉಚಿತ ಆರೋಗ್ಯ ತಪಾಸನೆ ಹಮ್ಮಿಕೊಳ್ಳಲಾಗಿತ್ತು.
Advertisement
ಕೃಷಿ ಮೇಳದಲ್ಲಿ ಸುಳ್ಯ ಕೃಷಿ ಇಲಾಖೆ, ಅರಣ್ಯ ಇಲಾಖೆ, ಮಂಗಳೂರಿನ ಕೃಷಿ ಪ್ರಾಧಿಕಾರ, ಪುತ್ತೂರು ಗೇರು ಸಂಶೋಧನ ಕೇಂದ್ರ, ಜೇನು ಸಹಕಾರ ಸಂಘ, ಪಶುಸಂಗೋಪನ ಇಲಾಖೆ ಸುಳ್ಯ, ಬಿಳಿನೆಲೆ ಕಿದುವಿನ ಸಿಪಿಸಿಆರ್‌ಐ, ಕ್ಷೀರಾ ಸಾಮಗ್ರಿಗಳ ವಿತರಣ ಸಂಸ್ಥೆ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಜೇಸಿಐ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಜಲಾನಯನ ಸಮಿತಿಗಳು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದವು.
ಜಾತ್ರೆ ಸಂದರ್ಭ ಹೆಚ್ಚಿನ ಸಂಖ್ಯೆ ಯಲ್ಲಿ ಸಂತೆಮಾರುಕಟ್ಟೆಗಳು ಆಗಮಿಸಿ ಮಾರಾಟ ಕಾರ್ಯದಲ್ಲಿ ತೊಡಗಿದ್ದರು. ಕುಮಾರಧಾರಾ-ಕಾಶಿಕಟ್ಟೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರಿಂದ ಇಕ್ಕಟ್ಟಾಗಿದ್ದ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಶುಕ್ರವಾರ ಉಂಟಾಗಿತ್ತು. ಬ್ರಹ್ಮರಥ ಎಳೆಯುವ ವೇಳೆ ನೂಕು ನುಗ್ಗಲು ಏರ್ಪಟ್ಟಿತ್ತು. ರಥೋತ್ಸವ ನಡೆದ ರಥಬೀದಿಯ ಎರಡು ಬದಿ ಪೊಲೀಸರು ಹಗ್ಗ ಬಳಸಿ ಭಕ್ತರ ನೂಕುನುಗ್ಗಲು ತಡೆ ಯುವ ಯತ್ನ ನಡೆಸಿದರಾದರೂ ಅಪಾರ ಪ್ರಮಾಣದಲ್ಲಿದ್ದ ಭಕ್ತರು ಮುನ್ನುಗ್ಗಿದ್ದರ ಪರಿಣಾಮ ನೂಕುನುಗ್ಗಲು ಉಂಟಾಯಿತು.
ಇಂದು ನೌಕವಿಹಾರನ. 25ರಂದು ಶ್ರೀ ಸುಬ್ರಹ್ಮಣ್ಯ ದೇವರ ಅವಭೃಥ ಉತ್ಸವ ಮತ್ತು ನೌಕವಿಹಾರ ಕುಮಾರಧಾರಾ ನದಿಯಲ್ಲಿ ನಡೆಯಲಿದೆ. ಈ ವೇಳೆ ದೇಗುಲದ ಯಶಸ್ವಿ ಆನೆಯ ಜಲಕ್ರೀಡೆಯಲ್ಲಿ ಸಂಭ್ರಮಿಸುವುದು ಮನಸೆಳೆಯುತ್ತದೆ.