Advertisement

ಕುಕ್ಕೆಯಲ್ಲಿ ಸಂಭ್ರಮೋಲ್ಲಾಸ: ನೂತನ ಬ್ರಹ್ಮರಥ ಇಂದು ಸಮರ್ಪಣೆ

11:05 PM Dec 01, 2019 | Sriram |

ಸುಬ್ರಹ್ಮಣ್ಯ : ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್‌. ಮುತ್ತಪ್ಪ ರೈ ದೇರ್ಲ ಹಾಗೂ ಉದ್ಯಮಿ ಅಜಿತ್‌ ಶೆಟ್ಟಿ 2.5 ಕೋಟಿ ರೂ. ವೆಚ್ಚದಲ್ಲಿ ಕುಕ್ಕೆ ದೇವಸ್ಥಾನಕ್ಕೆ ಕೊಡಮಾಡಿದ ಬ್ರಹ್ಮರಥವನ್ನು ಚಂಪಾಷಷ್ಠಿ ದಿನ ಸೋಮವಾರ ಶುಭ ಮುಹೂರ್ತದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಲಿದ್ದಾರೆ.

Advertisement

ಕೊಟೇಶ್ವರದಲ್ಲಿ ಹಳೆ ರಥದ ರೂಪವನ್ನು ಹೋಲುವ ಅದ್ಭುತ ಕೆತ್ತನೆಗಳಿಂದ ಕೂಡಿದ ಬ್ರಹ್ಮರಥವು ನಿರ್ಮಾಣಗೊಂಡಿತ್ತು. ರಥದ ಮೆರವಣಿಗೆ ಕೋಟೇಶ್ವರದಿಂದ ಹೊರಟು ಸಾಲಿಗ್ರಾಮ, ಬ್ರಹ್ಮಾವರ, ಉಡುಪಿ ಮಾರ್ಗವಾಗಿ ಕಾಪು, ಪಡುಬಿದ್ರಿ, ಬಪ್ಪನಾಡು, ಮೂಲ್ಕಿ, ಸುರತ್ಕಲ್‌ ಮೂಲಕ ಸಾಗಿ ಕದ್ರಿ, ಬಿ.ಸಿ.ರೋಡ್‌, ಉಪ್ಪಿನಂಗಡಿ, ಅಲಂಕಾರು, ಕಡಬ, ಮರ್ದಾಳ, ಬಿಳಿನೆಲೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಹಿಂದೆ ತಲುಪಿತ್ತು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದ್ದರು. ಅದ್ದೂರಿ ಮೆರವಣಿಗೆ ಮೂಲಕ ರಥಕ್ಕೆ ಮಾರ್ಗದುದ್ದಕ್ಕೂ ಸ್ವಾಗತ ಕೋರಲಾಗಿತ್ತು. ಕುಕ್ಕೆ ಪುರಪ್ರವೇಶಿಸಿದ ಬ್ರಹ್ಮರಥಕ್ಕೆ ಕಾರ್ತಿಕ ಬಹುಳ ಪೌರ್ಣಮಿ ಅನಂತರದಲ್ಲಿ ವೈದಿಕ ವಿಧಾನಗಳನ್ನು ದೇವಸ್ಥಾನದ ಅರ್ಚಕರು ನಡೆಸಿದ್ದರು.

ಕಾರ್ಯಕರ್ತರ ಆಗಮನ
ಕುಕ್ಕೆಯ ಬ್ರಹ್ಮರಥ ಬಹಳ ಹಳೆಯದಾಗಿದ್ದು, ಜೀರ್ಣಾವಸ್ಥೆಗೆ ತಲುಪಿತ್ತು. ಹೀಗಾಗಿ ದೇವಸ್ಥಾನ ಸಮಿತಿ ನೂತನ ರಥ ರಚನೆ ಮಾಡಬೇಕೆಂದು ತೀರ್ಮಾನಿಸಿತ್ತು. ಅದರಂತೆ ಉದ್ಯಮಿಗಳಿಬ್ಬರು ಕಾಣಿಕೆ ರೂಪದಲ್ಲಿ ರಥವನ್ನು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಮರ್ಪಿಸುತ್ತಿದ್ದಾರೆ. ರಥ ಸಮರ್ಪಣೆ ವೇಳೆ ದಾನಿಗಳಾದ ಮುತ್ತಪ್ಪ ರೈ ಹಾಗೂ ಅಜಿತ್‌ ಕುಟುಂಬಸ್ಥರು, ಜಯಕರ್ನಾಟಕದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿರುವರು. ಸಂಘಟನೆಯ ನೂರೈವತ್ತಕ್ಕೂ ಅಧಿಕ ಮಂದಿ ಕುಕ್ಕೆಗೆ ಆಗಮಿಸಿ ತಂಗಿದ್ದು ಸೋಮವಾರ ನಡೆಯುವ ರಥ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಅಭೂತಪೂರ್ವ ಕೆತ್ತನೆ
2018ರ ಮಾ. 15ರಂದು ಬ್ರಹ್ಮರಥದ ಕೆತ್ತನೆ ಕೆಲಸ ಆರಂಭಿಸಲಾಗಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷಿ¾àನಾರಾಯಣ ಆಚಾರ್ಯ ಅವರು ರಥವನ್ನು ನಿರ್ಮಿಸಿದ್ದಾರೆ. ಮಹಾಭಾರತ ಹಾಗೂ ರಾಮಾಯಣದಂತಹ ಅಭೂತ ಪೂರ್ವ ಕಲಾಕೃತಿಯನ್ನು ರಥದಲ್ಲಿ ಕೆತ್ತಲಾಗಿದೆ. ಉದ್ಯಮಿ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್‌ ಶೆಟ್ಟಿಯವರು ತಾವು ರಥ ನಿರ್ಮಾಣ ಮಾಡಿಕೊಡುವುದಾಗಿ ನೀಡಿದ್ದ ಭರವಸೆಯಂತೆ ಉಡುಪಿಯ ಕೋಟೇಶ್ವರದ ಶಿಲ್ಪಗುರು, ಲಕ್ಷಿ ¾àನಾರಾಯಣ ಆಚಾರ್ಯ ನೇತೃತ್ವದ ತಂಡ ಒಂದೂವರೆ ವರ್ಷದಲ್ಲಿ ಕೆತ್ತನೆ ಕೆಲಸ ಮಾಡಿ ರಥ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಪಂಚಮಿ ದಿನ ಮಳೆಯ ಸಿಂಚನ
ಪಂಚಮಿ ರಥೋತ್ಸವ ನಡೆಯುವ ರವಿವಾರ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆ ಮಳೆಯ ಸಿಂಚನವಾಗಿದೆ. ಇದರಿಂದ ಜಾತ್ರೆ ಸಂತೆ ವ್ಯಾಪಾರಸ್ಥರು ತುಸು ದಂಗಾದರು. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೆ ಬಿಸಿಲಿನಿಂದ ರಕ್ಷಣೆ ಸಿಕ್ಕಿತ್ತಾದರೂ ದಿಢೀರನೆ ಸುರಿದ ಮಳೆಯಿಂದ ಜನಜೀವನ, ಜಾತ್ರೆ ಸಿದ್ಧತೆಗಳಿಗೆ ತುಸು ಅಡ್ಡಿಯುಂಟಾಯಿತು.

Advertisement

ಭಕ್ತರಿಂದ 50 ಸಾವಿರ ಮಂದಿಗೆ ಅನ್ನದಾನ
ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಅನ್ನ ಪ್ರಸಾದ ಪ್ರಧಾನವಾಗಿದ್ದು ಚಂಪಾಷಷ್ಠಿ ನಡೆಯುವ ಸೋಮವಾರ ಬೆಂಗಳೂರಿನ ಉದ್ಯಮಿ ವೆಂಕಟೇಶ್‌ 50 ಸಾವಿರ ಮಂದಿಗೆ 10 ಲಕ್ಷ ರೂ. ವೆಚ್ಚದಲ್ಲಿ ಅನ್ನಪ್ರಸಾದ ವಿತರಣೆ ಮಾಡಲಿರುವರು. ದೇವಸ್ಥಾನದಿಂದ ಚೌತಿ, ಪಂಚಮಿ, ಷಷ್ಠಿ ಈ ಮೂರು ದಿನಗಳು ಎರಡು ಹೊತ್ತು ಅನ್ನಭೋಜನ ವ್ಯವಸ್ಥೆ ಇರುತ್ತದೆ. ಪಂಚಮಿ ದಿನ ಕೂಡ ದೇವಸ್ಥಾನದಲ್ಲಿ ಎಡೆಸ್ನಾನ ನೆರವೇರಿತು. ಅಧಿಕ ಪ್ರಮಾಣದ ಭಕ್ತರು ಎಡೆಸ್ನಾನ ನೆರವೇರಿಸಿದರು.

ಅನ್ನಪ್ರಭುವಿಗೆ ಪಲ್ಲ ಪೂಜೆ
ಸ್ಕಂದ ಪಂಚಮಿಯ ದಿನ ರವಿವಾರ ಶ್ರೀ ದೇಗುಲದಲ್ಲಿ ತೈಲಾಭ್ಯಂಜನ ನೆರವೇರಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹಾಯಕ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ದೇವಸ್ಥಾನದ ಹೆಬ್ಟಾರ್‌ ಪ್ರಸನ್ನ ತೈಲವನ್ನು ಹಚ್ಚಿದರು. ಈ ಮೂಲಕ ತೈಲಾಭ್ಯಂಜನ ನೆರವೇರಿತು. ಮಧ್ಯಾಹ್ನದ ಸುಮುಹೂರ್ತದಲ್ಲಿ ದೇಗುಲದ ಒಳಾಂಗಣದಲ್ಲಿ ಮತ್ತು ಅಂಗಡಿ ಗುಡ್ಡೆಯ ಅನ್ನಛತ್ರದಲ್ಲಿ ಅನ್ನ ಪ್ರಸಾದಕ್ಕೆ ಪಲ್ಲಪೂಜೆ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕರು ಒಳಾಂಗಣದಲ್ಲಿ ಪಲ್ಲ ಪೂಜೆ ನೆರವೇರಿಸಿದರು. ಬಳಿಕ ಅಕ್ಷಯ ಪಾತ್ರೆಗೆ ಪೂಜೆ ಮಾಡಿದರು. ಅಂಗಡಿ ಗುಡ್ಡೆಯ ಅನ್ನಛತ್ರದಲ್ಲಿ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು. ಭಕ್ತರು ಪಂಚಮಿ ದಿನ ಮಧ್ಯಾಹ್ನ ಅಂಗಡಿಗುಡ್ಡೆ ಹಾಗೂ ಷಣ್ಮುಖ ಭೋಜನ ಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು.

ಇಲಾಖೆಯ ಶೈವಾಗಮ ಪಂಡಿತರು, ಕುಕ್ಕೆ ಸಿಇಒ ಡಾ| ಯತೀಶ್‌ ಉಳ್ಳಾಲ್‌, ಸಹಾಯಕ ಇಒ ಚಂದ್ರ ಶೇಖರ ಪೇರಾಲ್‌ ಉಪಸ್ಥಿತರಿದ್ದರು.

ಇಂದು ಬ್ರಹ್ಮರಥೋತ್ಸವ
ಸೋಮವಾರ ನೂತನ ಬ್ರಹ್ಮರಥದ ಸಮರ್ಪಣೆ ಬಳಿಕ ಶ್ರೀ ಸುಬ್ರಹ್ಮಣ್ಯ ದೇವರು ನೂತನ ರಥದಲ್ಲಿ ವಿರಾಜಮಾನರಾಗುವರು. ಬ್ರಹ್ಮರಥಾರೋಹಣದ ಬಳಿಕ ಐತಿಹಾಸಿಕ ಮಹಾರಥೋತ್ಸವವು ಬೆಳಗ್ಗೆ 8.14ರ ಧನುರ್‌ ಲಗ್ನದ ಶುಭ ಮುಹೂರ್ತದಲ್ಲಿ ನೆರವೇರಲಿದೆ. ಈ ಕ್ಷಣಕ್ಕೆ ಲಕ್ಷಾಂತರ ಮಂದಿ ಸಾಕ್ಷಿಗಳಾಗಲಿರುವರು. ಸುಮಾರು 400 ವರ್ಷಗಳ ಬಳಿಕ ಬ್ರಹ್ಮರಥವು ಈ ಬಾರಿ ಸಮ ರ್ಪಣೆಯಾಗುತ್ತಿರುವುದು ವಿಶೇಷ ವಾಗಿದ್ದು, ರಥೋತ್ಸವದ ವೇಳೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next