Advertisement

Kukke ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ದಟ್ಟನೆ

01:03 AM Mar 10, 2024 | Team Udayavani |

ಸುಬ್ರಹ್ಮಣ್ಯ: ಮಹಾಶಿವರಾತ್ರಿ ಹಾಗೂ ವಾರಾಂತ್ಯ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಶನಿವಾರ ಅಧಿಕ ಭಕ್ತರ ದಟ್ಟಣೆ ಕಂಡುಬಂತು.

Advertisement

ಸಾಮಾನ್ಯವಾಗಿ ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಅದರಂತೆ ಶನಿವಾರ ಹೆಚ್ಚಿನ ಭಕ್ತರ ಆಗಮನವಾಗಿದೆ. ಸರಕಾರಿ ಬಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ವಾರಾಂತ್ಯ ಆಗಿದ್ದರಿಂದಲೂ ಹೆಚ್ಚಿನ ಭಕ್ತರ ದಟ್ಟನೆ ಕಂಡುಬಂತು.

ಈ ಹಿನ್ನೆಲೆಯಲ್ಲಿ ಷಣ್ಮುಖ ಭೋಜನ ಶಾಲೆ ಹಾಗೂ ಆದಿಸುಬ್ರಹ್ಮಣ್ಯದಲ್ಲೂ ಭೋಜನ ಪ್ರಸಾದ ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next