Advertisement

ಕುಕ್ಕೆ: ಆ್ಯಂಬುಲೆನ್ಸ್  ದುರಸ್ತಿ, ಮರಳಿ ಸೇವೆಗೆ 

11:28 AM Nov 09, 2018 | |

ಸುಬ್ರಹ್ಮಣ್ಯ: ಟೈರ್‌ ಸಮಸ್ಯೆಯಿಂದ ಕೆಟ್ಟು ಗ್ಯಾರೇಜು ಸೇರಿದ್ದ ಕುಕ್ಕೆ ಸುಬ್ರಹ್ಮಣ್ಯದ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ವಾಹನ ಕೊನೆಗೂ ಮರಳಿ ಸೇವೆಗೆ ಲಭ್ಯವಾಗಿದೆ. ಆ್ಯಂಬುಲೆನ್ಸ್‌ಗೆ ಹೊಸ ಟೈರ್‌ ಅಳವಡಿಸಲಾಗಿದ್ದು, ಬುಧವಾರದಿಂದ ಸೇವೆಗೆ ಲಭ್ಯವಾಗಿದೆ. ಗುರುವಾರ ವಾಹನಕ್ಕೆ ಪೂಜೆಯನ್ನೂ ನೆರವೇರಿಸಲಾಗಿದೆ.

Advertisement

ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಿದ್ದ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ಟೈರ್‌ ಗಳು ಸವೆದಿದ್ದವು. ಅವು ಆಗಾಗ ಕೆಟ್ಟು ನಿಲ್ಲುತ್ತಿದ್ದ ಕಾರಣ ರೋಗಿಗಳು ತೊಂದರೆಗೆ ಒಳಗಾಗುತ್ತಿದ್ದರು. ಕ್ಷೇತ್ರಕ್ಕೆ ಬಂದು ಅನಾರೋಗ್ಯಕ್ಕೆ ಒಳಗಾಗುವ ಭಕ್ತರು ಹಾಗೂ ಸ್ಥಳೀಯರಿಗೆ ಸೂಕ್ತ ಆರೋಗ್ಯ ಸೇವೆ ಸಿಗಲು ತೊಡಕಾಗುತ್ತಿತ್ತು. ಅದು ಗ್ಯಾರೇಜ್‌ ಸೇರಿ ಹಲವು ದಿನಗಳಾದರೂ ಸೇವೆಗೆ ಮರಳಿರಲಿಲ್ಲ. ಈ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇಲ್ಲಿ ಆ್ಯಂಬುಲೆನ್ಸ್‌ನ ಆವಶ್ಯಕತೆ ಕುರಿತು ಉದಯವಾಣಿ ಸುದಿನದಲ್ಲಿ ಅ. 31ರಂದು ಸಚಿತ್ರ ವರದಿ ಪ್ರಕಟಗೊಂಡಿತ್ತು. ಆಗ ಪ್ರತಿಕ್ರಿಯಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ. ರಾಮಕೃಷ್ಣ ರಾವ್‌, ಶೀಘ್ರದಲ್ಲೇ ಆ್ಯಂಬುಲೆನ್ಸ್‌ ಒದಗಿಸುವ ಭರವಸೆ ನೀಡಿದ್ದರು. ಇತ್ತೀಚೆಗೆ ದೇವಸ್ಥಾನದಲ್ಲಿ ನಡೆದ ಚಂಪಾ ಷಷ್ಠಿ ಪೂರ್ವಭಾವಿ ಸಭೆಯಲ್ಲಿಯೂ ಸುಬ್ರಹ್ಮಣ್ಯದಲ್ಲಿ ಆ್ಯಂಬುಲೆನ್ಸ್‌ ಇಲ್ಲದಿರುವ ವಿಚಾರ ಪ್ರಸ್ತಾವವಾಗಿತ್ತು. ಈ ಕುರಿತು ಗಮನ ಹರಿಸುವುದಾಗಿ ಸಹಾಯಕ ಆಯುಕ್ತ ಡಾ| ಕೃಷ್ಣಮೂರ್ತಿ ಭರವಸೆ ನೀಡಿದ್ದರು. ಇದರ ಫ‌ಲಶ್ರುತಿ ಎಂಬಂತೆ ನಾಲ್ಕು ಹೊಸ ಟೈರ್‌ ಗಳನ್ನು ಅಳವಡಿಸಿಕೊಂಡು, ದುರಸ್ತಿಯನ್ನೂ ಕಂಡು ಆರೋಗ್ಯ ಕವಚ ಆ್ಯಂಬುಲೆನ್ಸ್‌ ಕುಕ್ಕೆಯಲ್ಲಿ ಸೇವೆಗೆ ಸಿದ್ಧವಾಗಿದೆ.

ಕುವೆತ್ತಡ್ಕಕ್ಕೆ ಹೊಸ ವಿದ್ಯುತ್‌ ಪರಿವರ್ತಕ
ಸುಳ್ಯ : ಪೆರುವಾಜೆ ಗ್ರಾಮದ ಕುವೆತ್ತಡ್ಕದಲ್ಲಿ ಹೊಸ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಈ ಹಿಂದಿನ ಟಿ.ಸಿ. ಹಾಳಾಗಿ ಮೂರು ತಿಂಗಳಿನಿಂದ ತ್ರಿಫೇಸ್‌ ಸಂಪರ್ಕ ಇಲ್ಲದಿರುವ ಬಗ್ಗೆ ಅ. 14ರಂದು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಳೆ ಟಿ.ಸಿ. ತೆಗೆದು ಹೊಸ ಟಿ.ಸಿ.ಅಳವಡಿಸಿದ್ದಾರೆ.

ಹಲವು ದಲಿತ ಕುಟುಂಬಗಳು ಸಹಿತ 20 ಮನೆಗಳಿಗೆ ತ್ರಿಫೇಸ್‌ ಸಂಪರ್ಕ ಇಲ್ಲದೆ ಕುಡಿಯುವ ನೀರಿಗೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಬಳಕೆದಾರರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಮೆಸ್ಕಾಂ ಹೊಸ ಟಿ.ಸಿ.ಅಳವಡಿಸಿ ಜನರ ಬೇಡಿಕೆಗೆ ಸ್ಪಂದಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next