Advertisement

Kudur: ನಾಡಿನ ವೈಭವ ಸಾರುವ ಗೊಂಬೆ ಪ್ರದರ್ಶನ

05:19 PM Oct 19, 2023 | Team Udayavani |

ಕುದೂರು: ವೈವಿದ್ಯಮಯ ಹಾಗೂ ವಿಶಿಷ್ಟವಾಗಿ ಆಚರಿಸುವ ನವರಾತ್ರಿ ಹಬ್ಬ. ನಮ್ಮ ನಾಡಿನ ಗತ ವೈಭವವನ್ನು ಸಾರುತ್ತದೆ. ನಾಡ ಹಬ್ಬ ದಸರಾ ಸಂದರ್ಭದಲ್ಲಿ ಗೊಂಬೆ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

Advertisement

ಕುದೂರಿನ ತುಮಕೂರು ರಸ್ತೆಯಲ್ಲಿರುವ ಲೇ ಮುನಿಶಾಮಪ್ಪ ಗಂಗಮ್ಮನವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಗೊಂಬೆಗಳ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ. ಗೊಂಬೆಗಳನ್ನು ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತರಾವರಿ ಗೊಂಬೆಗಳು: ಭಾರತೀಯ ಸಂಸ್ಕೃತಿ ಸಂಪ್ರದಾಯಕ ಶೈಲಿಗಳು. ಪುರಾಣ ಪ್ರಸಿದ್ಧ ದೇಗುಲ ರಾಜರ ಕಾಲದ ಆಳ್ವಿಕೆ, ಪುರಾತನ ಕಾಲದ ಸಂಸ್ಕೃತಿ, ಉಡುಗೆ-ತೊಡೆಗಗಳನ್ನು ಬಿಂಬಿಸುವ ಬೊಂಬೆಗಳು, ದೇವತೆಗಳು. ನಂದನವನದಲ್ಲಿ ಗೋಪಾಲಕೃಷ್ಣ, ಪಟ್ಟದ ಆನೆ, ಅಂಬಾರಿ ಮೇಲೆ ನಾಡದೇವತೆ ಚಾಮುಂಡೇಶ್ವರಿ ಜಂಬುಸವಾರಿ, ಸುಂದರ ಉದ್ಯಾನವನಗಳು, ರಾಷ್ಟ್ರಪ್ರೇಮ ಬಿಂಬಿಸುವ ಮಹಾಮಹಿಮರ ಪ್ರತಿಮೆಗಳು, ಮರದ ಗೊಂಬೆಗಳು, ಹೀಗೆ ವೈವಿಧಶ್ಯಮಯ ಗೊಂಬೆ, ಹಾಗೂ ಗತಕಾಲದ ಸಂಸ್ಕೃತಿ ಬಿಂಬಿಸುವ ರಾಜ ಮನೆತನದ ಇತಿಹಾಸ, ಸಂಪ್ರದಾಯಿಕ ಮದುವೆ, ಕೋಟಿಲೊಂಗೇಶ್ವರ ಇನ್ನೂ ಅನೇಕ ರೀತಿಯ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೂಲ ಸಂಸ್ಕೃತಿ ಮರೆಯಾಗಿ ಗೊಂಬೆ ಹಬ್ಬ ಎಂದರೇನು ಎನ್ನುವ ಸ್ಥಿತಿ ಎದುರಾಗಿದ್ದು, ಯುವಜನತೆಗೆ ನವರಾತ್ರಿ ವೇಳೆ ಗೊಂಬೆಯನ್ನಿಟ್ಟು 9 ದಿನಗಳ ಕಾಲ ಪೂಜೆ ಸಲ್ಲಿಸುವ ವಿಚಾರಕ್ಕೆ ಅಚ್ಚರಿ ವ್ಯಕ್ತಪಡಿಸುವುದಿದೆ. ಅಂಥವರಿಗೆ ಭಾರತೀಯ ಸಂಸ್ಕೃತಿ ತಿಳಿಸಿಕೊಡುವ ನಿಟ್ಟಿನಲ್ಲಿ ಕುದೂರಿನ ಲೇ.ಮುನಿಶಾಮಪ್ಪ ಗಂಗಮ್ಮನವರ ಕುಟುಂಬದವರು ಯಥವತ್ತಾಗಿ ಸಂಪ್ರದಾಯ ಗೊಂಬೆ ಇಡುವ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ಮನೆಮನೆಯಲ್ಲಿ ಗೊಂಬೆ: ಗೊಂಬೆ ಪ್ರದರ್ಶನ ವೀಕ್ಷಿಸಲು ಮನೆಗೆ ಬರುವವರ ಸಂಖ್ಯೆ ಅತಿ ಹೆಚ್ಚಾಗಿ ಇದ್ದರೂ ಸದಾ ಹಸನ್ಮುಖೀಯಾಗಿ ಎಲ್ಲರನ್ನು ಪ್ರೀತಿಯಿಂದ ಸತ್ಕರಿಸುವ ಲೇ.ಮುನಿಶಾಮಪ್ಪ ಗಂಗಮ್ಮ ಹೇಳುವ ಪ್ರಕಾರ ನಮ್ಮ ಪೂರ್ವಿಕರು ಹಿಂದಿನಿಂದಲೂ ನೆಡೆಸಿಕೊಂಡು ಬಂದಿರುವ ಸಂಪ್ರದಾಯ ಇದಾಗಿದ್ದು ಇದನ್ನು ಮುಂದುವರಿಸಿಕೊಂಡು ಬರಲಾಗಿದೆ. ನವರಾತ್ರಿ ದಿನದ ಮೊದಲ ದಿನ ಕಳಸ ಸ್ಥಾಪನೆಯೊಂದಿಗೆ ಹಚ್ಚಿದ ನಂದಾದೀಪ ಬನ್ನಿ ಮರ ಕಡಿಯುವವರೆಗೂ= ನಿರ್ವಹಣೆ ಹಾಗೂ ಪ್ರತಿನಿತ್ಯ ಮನೆಗೆ ಆಗಮಿಸುವ ಮುತೈದೆಯರಿಗೆ ಅರಿಶಿನ ಕುಂಕುಮ ಫಲತಾಂಬೂಲ ನೀಡುವುದು ವಾಡಿಕೆ.

Advertisement

50 ವರ್ಷಗಳಿಂದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದು, ನವರಾತ್ರಿ ಆರಂಭದ ದಿನದಿಂದ ಮುಂದಿನ 15 ದಿನಗಳ ವರೆಗೆ ಬೊಂಬೆಗಳ ಪ್ರದರ್ಶನ ಇರುತ್ತದೆ. ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಬೊಂಬೆಗಳನ್ನು ನೊಡಲು ಸಾರ್ವಜನಿಕರು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬೊಂಬೆಗಳ ವೀಕ್ಷಣೆ ಬರುವ ಪ್ರತಿಯೊಬ್ಬರಿಗೂ ಪ್ರಸಾದ ವಿತರಿಸಲಾಗುತ್ತದೆ. ಒಮ್ಮೆ ಗೊಂಬೆಗಳನ್ನು ನೋಡಲು ಮನೆ ಹೊಕ್ಕೆರೆ ಮತ್ತೆ ಬರಲು ಮನಸಾಗದು ಎನ್ನುತ್ತಾರೆ ಗೊಂಬೆ ಪ್ರಿಯರು

ಪ್ರತಿ ವರ್ಷ ದಸರಾ ಬೊಂಬೆಗಳ ಪ್ರದರ್ಶನ ಮಾಡುತ್ತಿದ್ದೇವೆ. ಜನರು ಮೈಸೂರಿಗೆ ಹೋಗಿ ದಸರ ನೊಡುತ್ತಾರೆ . ನಾವಿಲ್ಲಿ ದಸರಾ ಬಿಂಬಿಸುವ ಗೊಂಬೆಗಳನು ಇಟ್ಟಿದ್ದೇವೆ.-ಗಂಗಮ್ಮ, ಕುದೂರು

-ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next