Advertisement

Kudroli: ನವರಾತ್ರಿ ಮಹೋತ್ಸವಕ್ಕೆ ಚಾಲನೆ

11:36 AM Oct 16, 2023 | Team Udayavani |

ಮಂಗಳೂರು: “ಮಂಗಳೂರು ದಸರಾ’ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವಕ್ಕೆ ರವಿವಾರ ಚಾಲನೆ ದೊರೆಯಿತು. ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರ ವಿಗ್ರಹ ವನ್ನು ಕಲಾತ್ಮಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಯಿತು.

Advertisement

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಚಾಲನೆ ನೀಡಿದರು. ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಮಾಲತಿ ಜೆ. ಪೂಜಾರಿ, ಶಾಸಕ ಡಿ.ವೇದವ್ಯಾಸ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ಗಳಾದ ಎಂ.ಶಶಿಧರ್‌ ಹೆಗ್ಡೆ, ಜಯಾನಂದ ಅಂಚನ್‌, ಕ್ಷೇತ್ರದ ಅಧ್ಯಕ್ಷ ಎಚ್‌. ಎಸ್‌. ಸಾಯಿರಾಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್‌, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ಶೇಖರ್‌ ಪೂಜಾರಿ, ರವಿಶಂಕರ ಮಿಜಾರು, ಜಗದೀಪ್‌ ಡಿ. ಸುವರ್ಣ, ಕೆ. ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ|ಅನಸೂಯ ಬಿ.ಟಿ. ಸಾಲ್ಯಾನ್‌, ಡಾ|ಬಿ.ಜಿ. ಸುವರ್ಣ, ಹರಿಕೃಷ್ಣ ಬಂಟ್ವಾಳ, ರಾಧಾಕೃಷ್ಣ, ಕಿಶೋರ್‌ ದಂಡಕೇರಿ, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್‌, ಗೌರವಿ ರಾಜಶೇಖರ್‌, ಮುಖಂಡರಾದ ಬ್ರಿಜೇಶ್‌ ಚೌಟ ಉಪಸ್ಥಿತರಿದ್ದರು.

ದಸರಾ ಶುಭ ತರಲಿ: ಜನಾರ್ದನ ಪೂಜಾರಿ:

ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸುದ್ದಿಗಾರರ ಜತೆಗೆ ಮಾತ ನಾಡಿ, ಮಂಗಳೂರು ದಸರಾ ಜನರ ದಸರಾ. ಗೋಕರ್ಣನಾಥ ದೇವರು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಗಳ ಅನುಗ್ರಹದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲರೂ ದಸರಾ ವೈಭವ ಕಣ್ತುಂಬಿಕೊಳ್ಳಿ ಎಂದು ಕೋರಿದರು.

ದಸರಾ ಸಡಗರದಿಂದ ಧನ್ಯತೆ: ಪ್ರದೀಪ್‌ ಕುಮಾರ್‌:

Advertisement

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌  ಮಾತನಾಡಿ, ಮಂಗಳೂರು ದಸರಾ ಸಂಭ್ರಮ ಸಡಗರದಿಂದ ಆರಂಭವಾಗಿದ್ದು ಇದನ್ನು ಕಂಡಾ ಗಲೇ ಧನ್ಯತೆ ಮೂಡುತ್ತದೆ. ಕರ್ಣಾಟಕ ಬ್ಯಾಂಕ್‌ನ ಹುಟ್ಟೂರಲ್ಲೇ ನಡೆಯುವ ಮಂಗಳೂರು ದಸರಾ ದೇಶ-ವಿದೇಶದಲ್ಲಿಯೂ ಪ್ರಖ್ಯಾತಿಯನ್ನು ಪಡೆದಿದೆ. ಇಂತಹ ಅತ್ಯಪೂರ್ವ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸಂತಸ ತಂದಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next