Advertisement

ಆರೋಗ್ಯ ಕೇಂದ್ರಕ್ಕೆ ನರ್ಸ್‌ ನಿಯೋಜಿಸಲು ಒತ್ತಾಯ

05:04 PM Nov 20, 2019 | Naveen |

ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ 10-12 ವರ್ಷಗಳಿಂದಲೂ ಆರೋಗ್ಯ ಉಪಕೇಂದ್ರ ಕಟ್ಟಡವಿದ್ದರೂ ನರ್ಸ್‌ ವಾಸಿಸುತ್ತಿಲ್ಲ. ಹಾಗಾಗಿ  ರೋಗ್ಯ ಉಪಕೇಂದ್ರ ಕಟ್ಟಡ ಇದ್ದೂ ಇಲ್ಲದಂತೆ ನಿರರ್ಥಕವಾಗಿದೆ. ಆರೋಗ್ಯ ಉಪಕೇಂದ್ರದಲ್ಲಿ ನರ್ಸ್‌ ಇರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು
ನೋಡಿಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

5 ಹಳ್ಳಿಗಳು ಬಣವಿಕಲ್ಲು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ರಾಷ್ಟ್ರೀಯ ಹೆದ್ದಾರಿ 50 ಸಹ ಈ ಗ್ರಾಮದ ಮೂಲಕವೇ ಹಾದು ಹೋಗಿದೆ. ಅಲ್ಲದೇ ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ಬಾಲಕಿಯರಿರುವ ಕಸ್ತೂರಿಬಾ ವಸತಿ ಶಾಲೆ ಇದೆ. ರಾತ್ರಿ ಸಮಯದಲ್ಲಿ ಆರೋಗ್ಯ ಸಮಸ್ಯೆ ಬಂದರೆ ಪ್ರಥಮ ಚಿಕಿತ್ಸೆಗೆ ನರ್ಸ್‌ ಇಲ್ಲ ಎಂದರೆ ಹೇಗೆ? ಪ್ರಥಮ ಚಿಕಿತ್ಸೆಗೂ 15ರಿಂದ 20 ಕಿಮೀ ದೂರದ ಕೂಡ್ಲಿಗಿ ಮತ್ತು ಹೊಸಹಳ್ಳಿಗೆ ಹೋಗಬೇಕಾಗುತ್ತದೆ. ಹಾಗಾಗಿ ಆರೋಗ್ಯ ಉಪಕೇಂದ್ರದಲ್ಲಿ ನರ್ಸ್‌ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ತರು ಆಗ್ರಹಿಸಿದರು.

ಬಣವಿಕಲ್ಲು ಗ್ರಾಮದಲ್ಲಿ 2 ಆರೋಗ್ಯ ಉಪಕೇಂದ್ರ ಕಟ್ಟಡಗಳಿದ್ದರೂ 4 ವರ್ಷಗಳಿಂದಲೂ ಒಬ್ಬ ನರ್ಸ್‌ ಇಲ್ಲ. ಆರೋಗ್ಯ ತೊಂದರೆಯಾದರೆ ಪ್ರಥಮಚಿಕಿತ್ಸೆಗೂ ಆರೋಗ್ಯ ಉಪಕೇಂದ್ರವಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಬಿ.ಚೌಡೇಶ, ಗ್ರಾಮದ ಯುವಕ

ಬಣವಿಕಲ್ಲು ಗ್ರಾಮದಲ್ಲಿ 2 ಆರೋಗ್ಯ ಉಪಕೇಂದ್ರಗಳಿವೆ. ಒಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ. ಇನ್ನೊಂದು ಊರ ಹೊರವಲಯದಲ್ಲಿದೆ. ಯಾಸ್ಮಿàನ್‌ ಬಾನುರನ್ನು ಬಣವಿಕಲ್ಲು ಗ್ರಾಮಕ್ಕೆ ನರ್ಸ್‌ ಆಗಿ ನಿಯೋಜಿಸಲಾಗಿದೆ. ಕೆಲ ಕಾರಣ ನೀಡಿ ನರ್ಸ್‌ ಅಲ್ಲಿ ವಾಸ ಮಾಡುತ್ತಿಲ್ಲ. ಈಗ ಆದಷ್ಟು ಬೇಗನೇ ನರ್ಸ್‌ ಬಣವಿಕಲ್ಲು ಗ್ರಾಮದಲ್ಲಿ ಇರುವಂತೆ ಕ್ರಮ ಕೈಗೊಳ್ಳುತ್ತೇನೆ.
ಡಾ| ಷಣ್ಮುಖನಾಯ್ಕ,
ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next