Advertisement

ಕೂಡ್ಲಿಗಿ-ಕೊಟ್ಟೂರಲ್ಲಿ ಭಾರೀ ಮಳೆ

01:20 PM Oct 11, 2019 | Naveen |

ಕೂಡ್ಲಿಗಿ: ಕೂಡ್ಲಿಗಿ, ಹೊಸಹಳ್ಳಿ, ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ. ಮೂರು ದಿನ ಸುರಿದ ಮಳೆಗೆ ಗುಡೇಕೋಟೆ ಹೋಬಳಿ ವ್ಯಾಪ್ತಿಯು ಹುರುಳಿಹಾಳ್‌ ಗ್ರಾಮದಲ್ಲಿ 6 ಮನೆಗಳು, ಕಡೇಕೊಳ್ಳ, ಸಿದ್ದಾಪುರ ವಡ್ಡರಹಟ್ಟಿ, ಎ.ದಿಬ್ಬದಹಳ್ಳಿ ತಲಾ ಒಂದು ಮನೆಗಳು ಸೇರಿದಂತೆ ಒಟ್ಟು 9 ಮನೆ ಜಖಂ ಆಗಿದೆ.

Advertisement

ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಲೋಕಿಕೆರೆ ಗ್ರಾಮದಲ್ಲಿ 2 ಮನೆಗಳು, ಕಾತ್ರಿಕಟ್ಟೆ, ಗುಣಸಾಗರದಲ್ಲಿ ತಲಾ 1 ಮನೆಗಳು ರಭಸದ ಮಳೆಗೆ ಭಾಗಶಃ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಡೇಕೋಟೆ ಮತ್ತು ಹೊಸಹಳ್ಳಿ ಭಾಗದಲ್ಲಿ ಹಳ್ಳಗಳು ತುಂಬಿ ಹರಿಯುವಂತಹ ಮೊದಲ ಮಳೆ ಇದಾಗಿದ್ದು, ಹಳ್ಳ, ಗೋಕಟ್ಟೆ ತುಂಬಿ ಹರಿದಿದೆ. ತಾಲೂಕಿನ ಜೀವನಾಡಿಯಾಗಿರುವ ಚಿನ್ನಹಗರಿ ಉಪನದಿಗೆ ಸ್ವಲ್ಪ ಪ್ರಮಾಣದ ನೀರು ಹರಿದು ಬರುತ್ತಿದೆ. ರಾಮದುರ್ಗ, ಗಂಡಬೊಮ್ಮನಹಳ್ಳಿ ಕೆರೆಗೆ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.

ಹಬ್ಬದ ಸಡಗರದಲ್ಲಿದ್ದ ಗುಡೇಕೋಟೆ, ಚಿಕ್ಕಜೋಗಿಹಳ್ಳಿ, ಹೊಸಹಳ್ಳಿ, ಹುಡೇಂ ಭಾಗದಲ್ಲಿ ಸಂಪೂರ್ಣ ವಿದ್ಯುತ್‌ ಕೈಕೊಟ್ಟಿದೆ. ವಿದ್ಯುತ್‌ ಇಲ್ಲದೆ ಕಾರಣ ರಾತ್ರಿ ವೇಳೆಯಲ್ಲಿ ಕಡೇಕೊಳ್ಳ, ಭೀಮಸಮುದ್ರ, ಗುಂಡುಮುಣುಗು ಗ್ರಾಮಗಳ ಹತ್ತಿರ ಕರಡಿಗಳು ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸಿತು. ಮಳೆಯಿಂದ ಕಂಗಾಲಾಗಿದ್ದ ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಭಾಗದ ಜನತೆ ಸಂತಸಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next