Advertisement

ಅಭಿವೃದ್ಧಿಶೀಲ ದೇಶಕ್ಕೆ ವೈಜ್ಞಾನಿಕ ನಿಲುವು ಪೂರಕ

04:38 PM Sep 01, 2019 | Team Udayavani |

ಕೂಡ್ಲಿಗಿ: ದೇಶವು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಪ್ರಸುತ್ತ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ, ಅರ್ಥಿಕವಾಗಿ ಪ್ರಗತಿ ಕಾಣಬೇಕಿದೆ. ಹಾಗಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಸಂಶೋಧನೆ ವಿಚಾರಗಳ ಜೊತೆಯಲ್ಲಿ ಹೊಸ ಅವಿಷ್ಕಾರದತ್ತ ದಾಪುಗಾಲು ಇಡಬೇಕಿದೆ ಎಂದು ಧಾರವಾಡ ಪ್ರತಿಷ್ಠಿತ ಐಐಟಿ ಕೇಂದ್ರದ ಪ್ರಾಧ್ಯಾಪಕ ಪ್ರೊ.ನೀಲ್ ಕಮಲ್ ತಿಳಿಸಿದರು.

Advertisement

ಅವರು ಶನಿವಾರ ತಾಲೂಕಿನ ಚಿಕ್ಕಜೋಗಿಹಳ್ಳಿ ಕೇಂದ್ರೀಯ ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಶನಿವಾರ ಕ್ಲಸ್ಟರ್‌ ವಲಯದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಪ್ರಗತಿಗೆ ಸಾಮಾಜಿಕ ವಿಜ್ಞಾನ ಎಷ್ಟು ಮುಖ್ಯವೊ, ವೈಜ್ಞಾನಿಕ ನಿಲವು ಅಷ್ಟೆ ಮುಖ್ಯವಾಗಿರುತ್ತದೆ ಎಂಬುದನ್ನು ಮೊದಲು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಅಭಿವೃದ್ಧಿಶೀಲ ದೇಶವಾಗಿರುವ ಭಾರತದ ಮುಂದೆ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಕೊಡುಗೆ ಅನನ್ಯವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಸಮಯದಲ್ಲಿ ವ್ಯರ್ಥವಾಗಿ ಕಾಲಹರಣ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಜಗತ್ತು ಪರಿಸರ ಅಸಮತೋನದಿಂದ ನರಳುತ್ತಿದೆ. ಭಾರತವು ಸೇರಿದಂತೆ ಜಗತ್ತಿನ ಅನೇಕ ದೇಶಗಳು ಪ್ರಕೃತಿ ವಿಕೋಪದಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಾಗಾಗಿ ಪ್ರಕೃತಿಯಲ್ಲಿ ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆಂಬುದನ್ನು ಅರಿತು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಚಾರಗಳು, ಅಧ್ಯಯನ, ಸಂಶೋಧನೆ ಬಗ್ಗೆ ಕಾಳಜಿವಹಿಸಬೇಕು ಎಂದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬೀದರ್‌, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಗದಗ, ಬಾಗಲಕೋಟೆ ಸೇರಿದಂತೆ 10ಕ್ಕೂ ಹೆಚ್ಚು ನವೋದಯ ವಿದ್ಯಾಲಯಗಳ 65 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸ್ತು ಪ್ರದರ್ಶನದ ತೀರ್ಪುಗಾರರಾಗಿ ಡಾ| ಕಮಾನಿ, ಡಾ| ಪಾಲಾಕ್ಷಮೂರ್ತಿ, ಡಾ| ರತಗೇರಿ, ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರೊ. ಗುಡದೇಶಪ್ಪ ಕಾರ್ಯನಿರ್ವಹಿಸಿದರು.

Advertisement

ಕಾರ್ಯಕ್ರಮದಲ್ಲಿ ಕೂಡ್ಲಿಗಿ ಬಿಇಒ ಜಿ.ಉಮಾದೇವಿ, ಪ್ರಾಚಾರ್ಯ ಸುಂದರ್‌, ಎಸ್‌ ಬಿಐ ಬ್ಯಾಂಕ್‌ ವ್ಯವಸ್ಥಾಪಕ ರಸನಾನಂದ ಬೇಹರ, ಉಪಪ್ರಾಚಾರ್ಯ ಮಣಿಬೆನ್‌, ಉಪನ್ಯಾಸಕರಾದ ಮಲ್ಲಪ್ಪ, ಮನೋಹರ ಪಿಳ್ಳೆ, ಪದ್ಮಸಾಹು, ಗಬ್ಬೂರು ಬಸವರಾಜ್‌, ಚಿಕ್ಕಜೋಗಿಹಳ್ಳಿ ಸಿಆರ್‌ಪಿ ಮೋಹನ್‌ ಭಾಗಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next