Advertisement

ಕೆಟಿಎಂ ಪ್ರಿಯರಿಗೆ ಶುಭಸುದ್ದಿ: ನೂತನ MY21 KTM 125 DUKE ಬಿಡುಗಡೆ, ವೈಶಿಷ್ಟ್ಯಗಳೇನು ?

08:00 PM Dec 07, 2020 | Mithun PG |

ನವದೆಹಲಿ: ಜಗತ್ತಿನ ನಂಬರ್ -1 ಮತ್ತು ಅತೀ ವೇಗವಾಗಿ ಬೆಳವಣಿಗೆ ಕಾಣುತ್ತಿರುವ  ಮೋಟಾರ್‌ ಸೈಕಲ್‌ ತಯಾರಕ ಸಂಸ್ಥೆ ಕೆಟಿಎಂ,  ಇದೀಗ ನೂತನ ಮಾದರಿಯ ಬೈಕ್ ಒಂದನ್ನು ಬಿಡುಗಡೆ ಮಾಡಿದೆ. ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಇದೀಗ ಬೈಕ್ ಮಾರಾಟದಲ್ಲಿ ಸಂಚಲನವೆಂಬಂತೆ  ನೂತನ MY21 KTM 125 DUKE ಬೈಕ್ ಲೋಕಾರ್ಪಣೆಗೊಳಿಸಿದೆ.

Advertisement

ಭಾರತೀಯ ಮಾರುಕಟ್ಟೆಯಲ್ಲೂ ಈ ಬೈಕ್ ಲಭ್ಯವಿದ್ದು, ಕೆಟಿಎಂ ಸಂಸ್ಥೆಯು ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆಯುವ ತವಕದಲ್ಲಿದೆ. ಕೆಟಿಎಂ ಸಂಸ್ಥೆಯೂ ವಿದೇಶಿ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಆರ್ ಬಿಡುಗಡೆ ಮಾಡಿದ್ದು, ಅದೇ ವಿನ್ಯಾಸದ ಪ್ರೇರಣೆಯಿಂದ MY21 KTM 125 DUKE ಬೈಕ್ ಹೊರತರಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಡ್ಯೂಕ್ 200 ಬೈಕಿನಂತೆಯೇ ಬಹುತೇಕ ಹೋಲಿಕೆಯನ್ನೇ ಹೊಂದಿರುವ ಹೊಸ MY21 KTM 125 DUKE ಬೈಕ್ ಮಾದರಿಯು, ಎಂಜಿನ್ ವಿಭಾಗದ ರಕ್ಷಣೆಗಾಗಿ ಅಲ್ಯುಮಿನಿಯಂ ಸ್ವಿಂಗರ್ಮ್ ಸೌಲಭ್ಯವನ್ನು ಪಡೆದುಕೊಂಡಿದೆ. ಎಂಜಿನ್ ಸಾಮರ್ಥ್ಯ 125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಇದನ್ನೂ ಓದಿ:  ಶಿವಮೊಗ್ಗ: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Advertisement

ಇದರಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದ್ದು, 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೊಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದೆ. ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. 13.5 ಲೀಟರ್ ಸಂಗ್ರಹಣೆ ಸಾಮರ್ಥ್ಯದ ಫ್ಯುಯೇಲ್ ಟ್ಯಾಂಕ್ ಹೊಂದಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.50,010 ರೂ. ಬೆಲೆಯನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಆರೆಂಜ್ ಮತ್ತು ಸೆರಾಮಿಕ್ ವೈಟ್ ಕಲರ್ ನಲ್ಲಿ ಲಭ್ಯವಿದೆ.ರೂ

ಪರ್ಫಾಮೆನ್ಸ್ ಬೈಕ್ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಸಾಧ್ಯತೆಗಳಿದ್ದು, MY21 KTM 125 DUKE ಬೈಕ್‌ಗಳು ಯುವಕರ ಪಾಲಿನ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 2012ರಲ್ಲಿ ಕೆಟಿಎಂ ಭಾರತಕ್ಕೆ ಲಗ್ಗೆಯಿಟ್ಟಾಗಿನಿಂದ ಇದುವರೆಗೂ 365 ನಗರಗಳಲ್ಲಿ 460 ಸ್ಟೋರ್ ಗಳನ್ನು ಒಳಗೊಂಡು ಗ್ರಾಹಕರ ಮನಸೆಳೆಯುತ್ತಿದೆ.

ಇದನ್ನೂ ಓದಿ: ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ಘರ್ಷಣೆ; ಬಿಜೆಪಿ ಕಾರ್ಯಕರ್ತ ಸಾವು, 12 ಗಂಟೆ ಬಂದ್ ಗೆ ಕರೆ

Advertisement

Udayavani is now on Telegram. Click here to join our channel and stay updated with the latest news.

Next