ದೆಹಲಿ: ಬೈಕ್ ಪ್ರಿಯರಿಗೆ ಸಂತಸದ ವಿಷಯ. ಬಹುನಿರೀಕ್ಷಿತ ಕೆಟಿಎಂ 790 ಡ್ಯೂಕ್ ಭಾರತೀಯ ಮಾರುಕಟ್ಟೆಗೆ ಇದೇ ಸೆಪ್ಟೆಂಬರ್ 5 ರಂದು ಲಗ್ಗೆಯಿಡಲಿದೆ.
ವಿದೇಶಿ ಮಾರುಕಟ್ಟೆಯಲ್ಲಿ ಈಗಾಗಲೇ ಡ್ಯೂಕ್ 1290 ಅವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆ ಭಾರತದಲ್ಲೂ ತನ್ನ ಜನಪ್ರಿಯ ಸೂಪರ್ ಬೈಕ್ ಗಳನ್ನು ಒಂದೊಂದಾಗಿ ಪರಿಚಯಿಸುತ್ತಿದೆ.
ಬಲಿಷ್ಟ ಎಂಜಿನ್ ಹಾಗೂ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿರುವ ಕೆಟಿಎಂ 790 ಡ್ಯೂಕ್ ಬೈಕ್ ನ ಬೆಲೆ 8 ರಿಂದ 8.5 ಲಕ್ಷ ರೂಪಾಯಿ (ಆನ್ ರೋಡ್) ಎಂದು ಅಂದಾಜಿಸಲಾಗಿದೆ.
ಡ್ಯೂಕ್ 790 ಸದ್ಯ ಸಿಕೆಡಿ ವಿಧಾನದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯವಾಗಲಿದ್ದು, ಅತ್ಯುತ್ತಮ ವಿನ್ಯಾಸವನ್ನು ಒಳಗೊಂಡಿದೆ. ಕೆಟಿಎಂ ಸಂಸ್ಥೆಯ ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೆಕೆಡ್ ರೋಡ್ ಸ್ಟರ್ ಬೈಕ್ ಮಾದರಿಯಲ್ಲಿ ಎಲ್ ಸಿ8ಸಿ, 799ಸಿಸಿ , ಲಿಕ್ವಿಡ್ ಕೂಲ್ಡ್, ಪ್ಯಾರೆಲರ್ ಟ್ವಿನ್ ಇಂಜಿನ್ ಜೋಡಣೆ ಮಾಡಿದ್ದು. ಈ ಬೈಕಿನಲ್ಲಿರುವ ಎಂಜಿನ್ 103-ಬಿ ಎಚ್ ಪಿ ಹಾಗೂ 86–ಎನ್ ಎಂ ಟಾರ್ಕ್ ಉತ್ಪಾದಿಸಲಿದೆ.
ಈ ಇಂಜಿನ್ ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಇರಲಿದ್ದು ಪಿಎಎಸ್ ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್ ಗಳನ್ನು ಒಳಗೊಂಡಿದೆ.
ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೋ ಮೋಡ್ ನೀಡಲಿದ್ದು, ಇದರಿಂದ ಚಾಲಕರು ಹಿಂದಿರುವ ವೀಲ್ ನಲ್ಲಿನ ಎಬಿಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತದೆ . ಡ್ಯೂಕ್ 390 ಬೈಕಿನ ರೀತಿಯಲ್ಲೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಲೈಟಿಂಗ್ ಸೆಟ್ ಅಪ್ , ಸ್ಮಾರ್ಟ್ ಪೋನ್ ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಕ್ಲಸ್ಟರ್ ಬ್ಲೂಟೂಟ್ ಕನೆಕ್ಟಿವಿಟಿಯನ್ನು ಹೊಂದಿದೆ.