Advertisement
ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು, ಅ.9ರಂದು ಬೆಳಗ್ಗೆ 10.30ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನಿಸುವರು ಎಂದರು.
ಸಾಮಾಜಿಕ ಕ್ಷೇತ್ರದಲ್ಲಿ ಬೆಂಗಳೂರು ಕೇಂದ್ರ ವಿಭಾಗದಿಂದ ಎಲ್. ಮುನಿಸ್ವಾಮಿ, ಮೈಸೂರು ವಿಭಾಗದಿಂದ ಎಸ್.ಎಚ್. ಸುಭಾಷ್, ಇತರ ಕ್ಷೇತ್ರದಲ್ಲಿ ಬೆಂಗಳೂರು ವಿಭಾಗದಿಂದ ಎನ್. ನಾಗಪ್ಪ, ಬೆಳಗಾವಿ ವಿಭಾಗದಿಂದ ನಾಗಪ್ಪ ಎಚ್. ಕೋಣಿ, ಕಲಾ ಕ್ಷೇತ್ರದಲ್ಲಿ ಕಲಬುರಗಿ ವಿಭಾಗದಿಂದ ಶ್ರೀಮತಿ ಪಿ. ಪದ್ಮಾ (ಪದ್ಮಾವತಿ), ಕಲಾ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಲಬುರಗಿ ವಿಭಾಗದಿಂದ ಉಷಾರಾಣಿ ಅವರನ್ನು 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿ ಫಲಕ, 20 ಗ್ರಾಂ ಚಿನ್ನದ ಪದಕ ಹಾಗೂ ತಲಾ 5 ಲಕ್ಷ ರೂ. ನಗದು ಮೊತ್ತ ನೀಡಿ ಗೌರವಿಸಲಾಗುವುದು ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದರು.