Advertisement

ಕೆಎಸ್‌ಆರ್‌ಟಿಸಿ ಆಯ್ಕೆ ಪಟ್ಟಿ ಪ್ರಕಟ

12:27 AM Feb 23, 2019 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಮೇಲ್ವಿಚಾರಕೇತರ ವರ್ಗದ ವಿವಿಧ ವೃಂದದ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.ದರ್ಜೆ-03 ಮೇಲ್ವಿಚಾರಕೇತರ ವರ್ಗದ ವಿವಿಧ ವೃಂದಗಳ ಪೈಕಿ ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಲೆಕ್ಕಿಗ, ಅಂಕಿ ಅಂಶ ಸಹಾಯಕ, ಸಹಾಯಕ ಉಗ್ರಾಣ ರಕ್ಷಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ಸಂಭವನೀಯ ಆಯ್ಕೆಪಟ್ಟಿಗಳನ್ನು ಹಾಗೂ ಹುದ್ದೆವಾರು ಕಟ್‌-ಆಫ್ ಪಟ್ಟಿಗಳನ್ನು ಸಂಸ್ಥೆಯ ಸೂಚನಾ ಫ‌ಲಕದಲ್ಲಿ ಹಾಗೂ ನಿಗಮದ ವೆಬ್‌ಸೈಟ್‌ www.ksrtcjobs.com ನಲ್ಲಿ ಪ್ರಕಟಿಸಲಾಗಿದ್ದು, ಕುಶಲಕರ್ಮಿ ಹುದ್ದೆಯ ಎಲ್ಲ ವೃತ್ತಿಗಳಿಗೆ ಸಂಭವನೀಯ ಆಯ್ಕೆಪಟ್ಟಿಯನ್ನುಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಈಗ ಬಿಡುಗಡೆಗೊಂಡಿರುವ ಆಯ್ಕೆಪಟ್ಟಿಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಫೆ.27ರೊಳಗಾಗಿ ಪೂರಕ ದಾಖಲಾತಿಗಳೊಂದಿಗೆ ಇಮೇಲ್‌ ಮೂಲಕ cpmrct@ksrtc.orgಟ್ಟಜ ಇಲ್ಲಿಗೆ ಸಲ್ಲಿಸಬಹುದುಎಂದು ಪ್ರಕಟ ಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next