Advertisement

ಕೆಎಸ್‌ಆರ್‌ಟಿಸಿ: ಅಂತರ ನಿಗಮ ವರ್ಗಾವಣೆ ಪಟ್ಟಿ  ಪ್ರಕಟ

12:34 PM Aug 27, 2017 | |

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳ ಸಿಬಂದಿಗೆ ಗೌರಿ-ಗಣೇಶ ಹಬ್ಬಕ್ಕೆ ಸರಕಾರ ಬಂಪರ್‌ ಕೊಡುಗೆ ನೀಡಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಹಿತ ನಾಲ್ಕೂ ನಿಗಮಗಳ ನೌಕರರ ಬಹುನಿರೀಕ್ಷಿತ ಅಂತರ ನಿಗಮಗಳ ವರ್ಗಾವಣೆ  ಪಟ್ಟಿ ಕೊನೆಗೂ ಪ್ರಕಟಗೊಂಡಿದ್ದು, ಚಾಲಕರು-ನಿರ್ವಾಹಕರು ಒಳಗೊಂಡಂತೆ 3,718 ಸಿಬಂದಿಗೆ ಮೊದಲ ಹಂತದಲ್ಲಿ ವರ್ಗಾವಣೆ ಭಾಗ್ಯ ಸಿಕ್ಕಿದೆ. ಆದರೆ, ಒಟ್ಟಾರೆ ಸಲ್ಲಿಕೆ ಯಾದ 14,604 ಅರ್ಜಿಗಳಲ್ಲಿ ಶೇ. 25ರಷ್ಟು ಮಂದಿಗೆ  ಮಾತ್ರ ಈ ಭಾಗ್ಯ ದಕ್ಕಿದೆ!

Advertisement

ವರ್ಗಾವಣೆ ಬಯಸಿ ನಾಲ್ಕೂ ನಿಗಮಗಳಿಂದ ಸಲ್ಲಿಕೆಯಾದ 18,978 ಅರ್ಜಿಗಳಲ್ಲಿ 14,604 ಅರ್ಜಿಗಳು ಊರ್ಜಿತಗೊಂಡಿದ್ದು, ಈ ಪೈಕಿ 3,718 ನೌಕರರು ವರ್ಗಾವಣೆಗೊಳ್ಳಲಿದ್ದಾರೆ. ಅದರಲ್ಲೂ ಒಟ್ಟಾರೆ 3,718ರಲ್ಲಿ ಬಿಎಂಟಿಸಿಯಿಂದಲೇ 2,298 ಜನ ವಿವಿಧ ನಿಗಮಗಳಿಗೆ ವರ್ಗಾವಣೆ ಹೊಂದುತ್ತಿದ್ದಾರೆ.

ತಾಂತ್ರಿಕ ಸಿಬಂದಿಯೇ ಹೆಚ್ಚು: 3,178 ನೌಕರರಲ್ಲಿ 1,956 ಜನ ತಾಂತ್ರಿಕ ಸಿಬಂದಿಯೇ ಆಗಿದ್ದಾರೆ. 1,308 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಇನ್ನು ಹೀಗೆ ವರ್ಗಾವಣೆಗೊಂಡವರ ಪೈಕಿ ಅರ್ಧಕ್ಕರ್ಧ ನೌಕರರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೋಗು ತ್ತಿದ್ದಾರೆ. ಅಂದರೆ, 1,525 ಜನರ ಈ ನಿಗಮಕ್ಕೆ ವರ್ಗಾವಣೆ ಆಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿಗೆ 1,287 ಸಿಬಂದಿ ತೆರಳಲಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕ್ರಮವಾಗಿ 124 ಹಾಗೂ 782 ನೌಕರರು ವರ್ಗಾವಣೆಯಾಗಿ ಬರಲಿದ್ದಾರೆ ಎಂದು ನಿಗಮದ ಪ್ರಕಟನೆ ತಿಳಿಸಿದೆ.

ವರ್ಗಾವಣೆಗೊಂಡವರ ಪಟ್ಟಿಯನ್ನು ನಿಗಮದ ವೆಬ್‌ಸೈಟ್‌ ಡಿಡಿಡಿ.ಠಿrಚnsfಛಿr.ksrಠಿc.ಜಿnನಲ್ಲಿ ಕಾಣ ಬಹುದು. ಈ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಆಕ್ಷೇಪಣೆಗಳಿದ್ದರೆ, ಆ. 31ರ ಒಳಗೆ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಆಡಳಿತ ಶಾಖೆಗೆ ಸಲ್ಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next