Advertisement
ಕೋವಿಡ್-19 ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಇಂಧನ, ಇನ್ನಿತರೆ ಖರ್ಚುಗಳನ್ನು ನಿರ್ವಹಿಸುವುದು ದುಸ್ತರವಾಗಿದ್ದ ಸಂದರ್ಭದಲ್ಲಿ ಸರಕಾರ ದೊಡ್ಡ ಮನಸ್ಸು ಮಾಡಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ಬಸ್ ಪಾಸ್‌ಗಳಿಗೆ ಸರಕಾರ ತನ್ನ ವಂತಿಗೆಯನ್ನು ಮುಂಗಡವಾಗಿ ನೀಡಿ ವೇತನಕ್ಕೆ ಪಾವತಿಗೆ ನೆರವಾಗಿತ್ತು. 2020 ಡಿಸೆಂಬರ್ ತಿಂಗಳಅಂತ್ಯದವರೆಗೂ ಶೇ.50 ವೇತನ ನೀಡುವುದಾಗಿ ಭರವಸೆ ನೀಡಿತ್ತಾದರೂ ಅದು ಸಾಧ್ಯವಾಗಿಲ್ಲ.
Related Articles
Advertisement
3-4 ಸಾವಿರ ರೂ. ವೇತನದಲ್ಲಿ ಮನೆ ಬಾಡಿಗೆ ಕೊಡಲು ಸಾಧ್ಯವಿಲ್ಲ. ಮಡದಿ, ಮಕ್ಕಳ ಹೊಟ್ಟೆಗೆ ಹಿಟ್ಟಿನ ಗತಿ ಏನು? ಎನ್ನುವ ಚಿಂತೆ ನೌಕರರಲ್ಲಿ ಮೂಡಿದೆ. ಈ ಸಂಕಷ್ಟ ಇನ್ನೆಷ್ಟು ತಿಂಗಳು ಮುಂದುವರಿಯಲಿದೆ ಎನ್ನುವ ಆತಂಕವೂ ಶುರುವಾಗಿದೆ.ಸರಕಾರ ಮಾತು ತಪ್ಪಿತೆ?: 2020 ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಸಾರಿಗೆ ಆದಾಯ ಸಹಜ ಸ್ಥಿತಿಗೆ ಆಗಮಿಸದ ಹಿನ್ನೆಲೆಯಲ್ಲಿ ಸರಕಾರ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿಗೆ ಶೇ.50 ರಷ್ಟು ವೇತನ ಸರಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿತ್ತು. ನಾಲ್ಕು ಸಂಸ್ಥೆಗಳಿಗೆ ಪ್ರತಿ ತಿಂಗಳು ವೇತನಕ್ಕೆ ಬೇಕಾಗುವ 364 ಕೋಟಿ ರೂ. ಶೇ.50 ನೀಡುವುದಾಗಿ ಘೋಷಣೆ ಮಾಡಿತ್ತು. ಸಾರಿಗೆ ಸಂಸ್ಥೆಗಳ ಆದಾಯ ಸಹಜ ಸ್ಥಿತಿಗೆ ಬರುತ್ತಿದ್ದು, ನೀವೇ ವೇತನ ಪಾವತಿ ಮಾಡಿ ಎಂದು ಕೈ ಎತ್ತಿದೆ. ಡಿಸೆಂಬರ್ ತಿಂಗಳಿಗೂ ಅರ್ಧದಷ್ಟು ವೇತನ ನೀಡುವುದಾಗಿ ಮಾತು ನೀಡಿದ್ದ ಸರಕಾರ ಮಾತು ತಪ್ಪಿದೆ ಎನ್ನುವುದು ಸಾರಿಗೆ ನೌಕರರ
ಅಸಮಾಧಾನವಾಗಿದೆ. ತರಬೇತಿ ನೌಕರರ ಸಂಕಷ್ಟ ಒಂದೆಡೆಯಾದರೆ ಇನ್ನೂ ಸಣ್ಣ ವೇತನದವರು ಬ್ಯಾಂಕ್ ಸಾಲ, ಮನೆ ಬಾಡಿಗೆ, ಮಕ್ಕಳ ಓದಿನ ಖರ್ಚು, ಕುಟುಂಬ ನಿರ್ವಹಣೆ, ಆರೋಗ್ಯ ಸೇರಿದಂತೆ ಇನ್ನಿತರೆ ಖರ್ಚು ವೆಚ್ಚ ಹೇಗೆ ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವಂತಾಗಿದೆ. ಇನ್ನಷ್ಟು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ಖಾಸಗಿದಾರರ ಬಳಿ ಸಾಲ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಸಂಸ್ಥೆ ನೌಕರರು. ಕನಿಷ್ಠ ಮಾರ್ಚ್ ತಿಂಗಳವರೆಗಾದರೂ ವೇತನಕ್ಕೆ ಆರ್ಥಿಕ ನೆರವು ನೀಡಬೇಕು ಎನ್ನುವುದು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಬೇಡಿಕೆಯಾಗಿದೆ. ಆದರೆ ಡಿಸೆಂಬರ್ ಅಂತ್ಯಕ್ಕೆ ಸಾರಿಗೆ ಆದಾಯ ಉತ್ತಮವಾಗಿದ್ದು, ನೀವೇ ಪಾವತಿಸಿಕೊಳ್ಳಿ ಎಂದು ಹಣಕಾಸು ಇಲಾಖೆ ಸಾರಿಗೆ ಸಂಸ್ಥೆಯ ಕಡತ ಮರಳಿಸಿದೆ ಎನ್ನಲಾಗಿದೆ. – ಹೇಮರಡ್ಡಿ ಸೈದಾಪುರ