ಪುತ್ತೂರು : ಸಾರಿಗೆ ನೌಕರರ ಮುಷ್ಕರದ ಪರಿಣಾಮ ಶನಿವಾರ ಪುತ್ತೂರಿನಲ್ಲೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಶುಕ್ರವಾರ ಸಹಜ ಸ್ಥಿತಿಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟವು ಶನಿವಾರ ನೌಕರರ ಮುಷ್ಕರ ಪರಿಣಾಮ ಸ್ಥಗಿತಗೊಂಡಿತು.
ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಪ್ರಯಾಣಿಕರು ತೊಂದರೆಗೆ ಒಳಗಾದ ಪರಿಸ್ಥಿತಿ ಕಂಡು ಬಂದಿದೆ.
ಮುಕ್ರಂಪಾಡಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಬಸ್‌ನಿಲ್ದಾಣಕ್ಕೆ ಬರಬೇಕಿದ್ದ ಬಸ್ ನೌಕರರ ಧಿಡೀರ್ ಮುಷ್ಕರದ ಪರಿಣಾಮ ಯಾವುದೇ ಬಸ್ ಗಳು ಬಾರದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ದಿಢೀರ್ ಮುಷ್ಕರದಿಂದ ಬೆಳ್ಳಂಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೊ ಮೆನೇಜರ್ ಬಸ್ ನಿಲ್ದಾಣಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ : ಪ್ರಯಾಣಿಕರ ಪರದಾಟ
ಬೆಂಗಳೂರಿನಿಂದ ಬಾರದ ಬಸ್ ರೈಲಿಗೆ ಹೆಚ್ಚಿದ ಬೇಡಿಕೆ
ಮುಷ್ಕರಕ್ಕೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಕೆ.ಎಸ್.ಆರ್.ಟಿ ಸಂಚಾರ ಇಲ್ಲದೆ ಬಹುತೇಕ ಮಂದಿ ಪ್ರಯಾಣಿಕರು ರೈಲು ಮೂಲಕ ಪುತ್ತೂರಿಗೆ ಆಗಮಿಸಿದ್ದಾರೆ.