Advertisement

ಖಾಸಗಿ ಬಸ್‌ ಸಂಚಾರ ಆರಂಭ ನಿರೀಕ್ಷೆ ದೂರ

12:57 AM May 09, 2020 | Sriram |

ಉಡುಪಿ: ಖಾಸಗಿ ಬಸ್‌ಗಳ ಸಂಚಾರದ ಆರಂಭ ನಿರೀಕ್ಷೆ ಮತ್ತೆ ದೂರವಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಸಾರಿಗೆ ಆಯುಕ್ತರೊಂದಿಗೆ ಸಭೆ ನಡೆದಿದ್ದು, ರವಿವಾರ ಸಾರಿಗೆ ಸಚಿವರು ಬಸ್‌ ಮಾಲಕರ ಫೆಡರೇಷನ್‌ ಪದಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

ಲಾಕ್‌ಡೌನ್‌ಗೂ ಮುನ್ನ ಇದ್ದ ದರದಲ್ಲಿಯೇ ಬಸ್‌ಗಳು ಓಡಾಟ ನಡೆಸಬೇಕು. ಶೇ. 50ಕ್ಕಿಂತ ಅಧಿಕ ಪ್ರಯಾಣಿಕರು ಬಸ್ಸಿನಲ್ಲಿ ಇರಬಾರದು. ಸಾಮಾಜಿಕ ಅಂತರ ಕಾಪಾಡುವುದು ಸಹಿತ ಹಲ ವಾರು ವಿಚಾರಗಳನ್ನು ಪಾಲಿಸುವಂತೆ ಆಯುಕ್ತರು ಸೂಚಿಸಿ ದರು ಎನ್ನಲಾಗಿದೆ.

ಮಾಲಕರಿಂದ ನಿರಾಕರಣೆ
ಈ ಎಲ್ಲ ನಿಯಮಾವಳಿಗಳಂತೆ ಬಸ್‌ಗಳನ್ನು ಓಡಿಸುವುದರಿಂದ ನಷ್ಟ ಉಂಟಾಗುತ್ತದೆ. ಕನಿಷ್ಠ 3 ತಿಂಗಳ ತೆರಿಗೆ ಹಣ ರಿಯಾಯಿತಿ, ಟಿಕೆಟ್‌ ದರದಲ್ಲಿ ಶೇ. 50 ಹೆಚ್ಚಿಸುವ ಬೇಡಿಕೆ ಈಡೇರಿಸುವಂತೆ ಖಾಸಗಿ ಬಸ್‌ ಮಾಲಕರು ಮನವಿ ಮಾಡಿಕೊಂಡರು. ಬಸ್‌ ಟಿಕೆಟ್‌ ದರಗಳನ್ನು ಪರಿಷ್ಕರಿಸಿ ನೀಡಲಾಗುವುದು ಎಂದು ಸಾರಿಗೆ ಆಯುಕ್ತರು ತಿಳಿಸಿದರು.

ಮತ್ತೆ ವಿಳಂಬಬಸ್‌ ದರ ಪರಿಷ್ಕರಣೆ ಅಥವಾ ತೆರಿಗೆಯಲ್ಲಿ ವಿನಾಯಿತಿ ಕಲ್ಪಿಸಿದ್ದೇ ಆದಲ್ಲಿ ಮೇ 17ಕ್ಕೂ ಮುನ್ನ ಬಸ್‌ಗಳ ಓಡಾಟ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಎಲ್ಲ ವಿಚಾರಗಳು ರವಿವಾರ ಸಾರಿಗೆ ಸಚಿವರ ವೀಡಿಯೋ ಕಾನ್ಫರೆನ್ಸ್‌ ನಲ್ಲಿ ಮತ್ತೆ ಚರ್ಚೆಯಾಗುವ ಸಾಧ್ಯತೆ ಗಳಿರುವುದರಿಂದ ಸಚಿವರ ನಿರ್ಧಾರದ ಮೇಲೆ ಅವಲಂ ಬಿತವಾಗಿರುತ್ತದೆ ಎನ್ನಲಾಗಿದೆ.

ಉಡುಪಿ: ಶೀಘ್ರ ಕೆಎಸ್ಸಾರ್ಟಿಸಿ ಸೇವೆ?
ಉಡುಪಿ ಜಿಲ್ಲೆ ಹಸುರು ವಲಯದಲ್ಲಿದ್ದ ಕಾರಣ ಜಿಲ್ಲೆಯೊಳಗೆ ಯಾವ ಯಾವ ಊರುಗಳಿಗೆ ಬಸ್‌ ಸಂಚಾರ ಅಗತ್ಯ ಎಂಬ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮೇ 6ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆ ಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿ ದ್ದರು. ಅದರಂತೆ ಉಡುಪಿಯಿಂದ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಮಲ್ಪೆ, ಮಣಿಪಾಲ, ಅಲೆವೂರು ಭಾಗ ಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳ ಸೇವೆ ಸೋಮವಾರದಿಂದ ಲಭಿಸುವ ಸಾಧ್ಯತೆಗಳಿವೆ ಎನ್ನಲಾ ಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಕಚೇರಿ ಆರಂಭವಾಗುವ ಹೊತ್ತಿನಲ್ಲಿ ಪ್ರಾಯೋಗಿಕವಾಗಿ ಸಂಚಾರ ಆರಂಭವಾಗಿ ಬೇಡಿಕೆ ಹೆಚ್ಚಿಗೆ ಇದ್ದಲ್ಲಿ ಟ್ರಿಪ್‌ ಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

Advertisement

ಈ ಹಿಂದಿನ ದರದಂತೆ ಶೇ. 50 ಪ್ರಯಾಣಿಕರನ್ನು ಮೀರದಂತೆ ಬಸ್ಸುಗಳು ಓಡಾಟ ನಡೆಸಬೇಕು ಎಂದು ಆಯುಕ್ತರು ಸೂಚಿಸಿದರು. ನಾವು ನೀಡಿರುವ ಬೇಡಿಕೆ ಈಡೇರದಿದ್ದಲ್ಲಿ ಲಾಕ್‌ಡೌನ್‌ಅವಧಿ ಮುಗಿದ ಅನಂತರವೇ ಸಂಚಾರ ಆರಂಭಿ ಸಲಾಗುವುದು.
-ರಾಜವರ್ಮ ಬಲ್ಲಾಳ್‌
ಅಧ್ಯಕ್ಷರು, ಕೆನರಾ ಬಸ್‌ ಮಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next