ಬಂಟ್ವಾಳ: ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬಂಟ್ವಾಳ ತಾಲೂಕಿನಲ್ಲೂ ಕೆಎಸ್ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ದಗೊಂಡಿದ್ದು, ಜನತೆ ಖಾಸಗಿ ಹಾಗೂ ಇತರ ವಾಹನಗಳ ಮೂಲಕ ತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳ ಓಡಾಟವಿದ್ದು, ಹೀಗಾಗಿ ಹೆಚ್ಚಿನ ತೊಂದರೆ ಕಂಡುಬಂದಿಲ್ಲ.
ಆದರೆ ಓಡಾಟ ನಡೆಸುವ ಬಸ್ಸುಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬಂದಿದೆ. ಪುತ್ತೂರು, ವಿಟ್ಲ, ಉಪ್ಪಿನಂಗಡಿ ಭಾಗಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳಿದ್ದರೆ, ಬಿ.ಸಿ.ರೋಡಿನಿಂದ ಧರ್ಮಸ್ಥಳ ರಸ್ತೆಯ ಪುಂಜಾಲಕಟ್ಟೆ, ಮಡ್ಯಂತಾರು ಭಾಗಕ್ಕೆ ಕಾರು, ಮ್ಯಾಕ್ಸಿಕ್ಯಾಬ್ ನಂತಹ ವಾಹನಗಳು ಓಡಾಡುತ್ತಿವೆ.
ಇದನ್ನೂ ಓದಿ:ಉಡುಪಿ: ಕರ್ತವ್ಯಕ್ಕೆ ಹಾಜರಾಗದ ಕೆಎಸ್ಆರ್ ಟಿಸಿ ನೌಕರರು, ದೂರದೂರಿನ ಪ್ರಯಾಣಿಕರ ಪರದಾಟ
ಕೆಎಸ್ಆರ್ ಟಿಸಿ ಬಿ.ಸಿ.ರೋಡು ಡಿಪೋದಿಂದ ಯಾವುದೇ ಬಸ್ಸುಗಳು ಓಡಾಟ ನಡೆಸಿಲ್ಲ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜನತೆ ನಿತ್ಯವೂ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಓಡಾಟ, ಪ್ರಯಾಣಿಕರ ಪರದಾಟ