Advertisement

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಪುನರಾರಂಭ

10:21 AM May 27, 2020 | sudhir |

ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮ ಮೇ 19ರಿಂದ ಬಸ್‌ ಸೇವೆ ಪುನರಾರಂಭಿಸಿದ್ದು, ಜನದಟ್ಟಣೆಗೆ ಅನುಗುಣವಾಗಿ ಕಾರ್ಯಾಚರಣೆ ಮಾಡಲು ಉದ್ದೇಶಿಸಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ ಪ್ರಯಾಣದ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಬೆಳಗ್ಗೆ 7 ರಿಂದ ಬಸ್‌ ಸೇವೆ ಆರಂಭಿಸಿ ಸಂಜೆ 7ರೊಳಗೆ ನಿಗದಿತ ಸ್ಥಳ ತಲುಪುವಂತೆ ಸಮಯವನ್ನು
ನಿಯೋಜಿಸಲಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣದ ಅವಧಿ 7 ಗಂಟೆ ಆಗಿದ್ದು, ಬೆ. 7 ರಿಂದ 12ರವರೆಗೆ ನಿರ್ಗಮಿಸುತ್ತವೆ. ಮೈಸೂರಿಗೆ ಪ್ರಯಾಣದ ಅವಧಿ 6 ಗಂಟೆ ಆಗಿದ್ದು, ಬೆಳಗ್ಗೆ 7 ರಿಂದ ಮ. 1 ರವರೆಗೆ ನಿರ್ಗಮಿಸುತ್ತವೆ. ಅರಸೀಕರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿಕಾರಿಪುರ ಮತ್ತು ಸೊರಬ ಕಡೆಗೆ 2.15 ಗಂಟೆ ಪ್ರಯಾಣದ ಅವಧಿಯಾಗಿದ್ದು, ಸಂಜೆ 4.30ರವರೆಗೆ ನಿರ್ಗಮಿಸುತ್ತವೆ. ಹರಿಹರ, ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರಗಳಿಗೆ ಪ್ರಯಾಣದ ಅವಧಿ 1.30 ಗಂಟೆ
ಆಗಿದ್ದು, ಸಂಜೆ 5.30ರ ವರೆಗೆ ನಿರ್ಗಮಿಸುತ್ತವೆ.

Advertisement

ಹುಬ್ಬಳ್ಳಿಗೆ ಪ್ರಯಾಣದ ಅವಧಿ 4.30 ಗಂಟೆ ಆಗಿದ್ದು, ಸಂಜೆ 2.30ರವರೆಗೆ ನಿರ್ಗಮಿಸುತ್ತವೆ. ಕಂಟೇನ್ಮೆಂಟ್‌ ಝೋನ್‌ಗಳಿಗೆ ಯಾವುದೇ ಬಸ್‌ಗಳಿರುವುದಿಲ್ಲ. ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದು ಬಸ್‌ನಲ್ಲಿ ಗರಿಷ್ಠ 30 ಜನ ಪ್ರಯಾಣಕರಿಗೆ ಮಾತ್ರ ಅವಕಾಶ. ಬಸ್‌ ನಿಲ್ದಾಣದಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಥರ್ಮಲ್‌
ಸ್ಕ್ರೀನಿಂಗ್‌ಗೆ ಒಳಪಡಬೇಕು. ವೆಬ್‌ಸೈಟ್‌ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next