Advertisement

ಕೆಎಸ್‌ಆರ್‌ಟಿಸಿ ಬಸ್‌ನ ಒಡಲಾಳ

12:08 PM Apr 17, 2021 | Team Udayavani |

ಬೆಂಗಳೂರು: “ಸಾಮಾನ್ಯವಾಗಿ ಪ್ರತಿ ಬಾರಿಪ್ರತಿಭಟನೆಗಳಲ್ಲಿ ನನ್ನ ಶರೀರ ಮಾತ್ರ ಸುಡುತ್ತಿತ್ತು.ಆದರೆ, ಇಂದು ನನ್ನ ಆತ್ಮವೂ ಸುಡುತ್ತಿದೆ.ಯಾಕೆಂದರೆ, ನನ್ನ ಆರೈಕೆ ಮಾಡುವ ದೇವರುಗಳೇ(ಸಾರಿಗೆ ನೌಕರರು) ನನಗೆ ಕೊಳ್ಳಿ ಇಡುತ್ತಿದ್ದಾರೆ.

Advertisement

‘- ಇದು “ಸಂಚಾರ ನಾಡಿ’ಯಿಂದ ದೂರಉಳಿದಿದ್ದಲ್ಲದೆ, ಅದಕ್ಕೆ ಹಾನಿಉಂಟುಮಾಡುತ್ತಿರುವ ಸಾರಿಗೆ ನೌಕರರಿಗೆ ಸ್ವತಃಬಸ್‌ಗಳು ಆಡಿದ ಒಡಲಾಳದ ನುಡಿ!ಸಾರಿಗೆ ನೌಕರರು ತಮ್ಮ ಜೀವನದಬಹುಪಾಲು ಸಮಯವನ್ನು ಈ ಬಸ್‌ಗಳೊಂದಿಗೆ ಕಳೆದಿದ್ದಾರೆ.

ಆಗಾಗ್ಗೆ ಸೆಡುವು-ಸಿಟ್ಟುಮಾಡಿಕೊಂಡು ಮೂರ್‍ನಾಲ್ಕು ದಿನಗಟ್ಟಲೆ ದೂರಉಳಿದಿದ್ದೂ ಇದೆ. ಆದರೆ, ಈ ಸಲ ಸುದೀರ್ಘ‌ಅವಧಿಗೆ ನೌಕರರು ಬೆನ್ನುತೋರಿಸಿದ್ದಾರೆ. ಅಷ್ಟೇಅಲ್ಲ, 80ಕ್ಕೂ ಅಧಿಕ ಬಸ್‌ಗಳ ಮೇಲೆ ಕಲ್ಲುತೂರಾಟ ಕೂಡ ನಡೆದಿದೆ.ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಖುದ್ದುಬಸ್‌ಗಳ ದನಿಯಾಗಿ ನೌಕರರಿಗೆ “ಒಲವಿನ ಓಲೆ’ಯೊಂದನ್ನು ಬರೆದಿದ್ದಾರೆ.

ಅದರ ಸಾರ ಇಲ್ಲಿದೆ.ಪ್ರತಿಯೊಂದು ಪ್ರತಿಭಟನೆ ಸಂದರ್ಭದಲ್ಲೂಕಿಡಿಗೇಡಿಗಳು ನನ್ನನ್ನು ಗುರಿಯಾಗಿಸಿ ಬೆಂಕಿಹಚ್ಚುತ್ತಿದ್ದರು ಅಥವಾ ಕಲ್ಲು ಹೊಡೆಯುತ್ತಿದ್ದರು.ಇದರಿಂದ ನಾನು ನೋಯುತ್ತಿದ್ದೆ, ಬೇಯುತ್ತಿದ್ದೆ.ಆಗ ನನ್ನ ಶರೀರ ಮಾತ್ರ ನೋಯುತ್ತಿತ್ತು. ಆದರೆ,ನನ್ನ ಪಾಲಿನ ದೇವರುಗಳಾದ ನನ್ನ ನೌಕರರು ನನಗೆ ಕಲ್ಲೇಟು ನೀಡುತ್ತಿರುವುದರಿಂದ ಇಂದು ನನ್ನ ಆತ್ಮಸಾಯುತ್ತಿದೆ.

ನಾನು ನಿಮ್ಮನ್ನು ನೋಡಲು ಪ್ರತಿದಿನಕಾತುರದಿಂದ ಕಾಯುತ್ತಿದ್ದೆ. ನಿತ್ಯ ನೀವು ನನ್ನ ಹತ್ತಿರಬಂದೊಡನೆ, ಕೈಮುಗಿದು ಬಸ್‌ ಚಾಲನೆಗೆಸಿದ್ಧಗೊಂಡಾಗ, ನನಗೆ ಎಲ್ಲಿಲ್ಲದ ಸಂತೋಷ…ನಿಮ್ಮ ಸಾರಥಿ ನಾನು…ಎಂಬ ಹೆಮ್ಮೆ, ಗೌರವ!ಆದರೆ, ಇಂದು ನಾನು ಚಾಲನೆಗೆಸಿದ್ಧಗೊಂಡು ನಿಂತರೆ, ನನಗೆ ಭಯ, ಆತಂಕ ಆಗುತ್ತಿದೆ.

Advertisement

ಕಲ್ಲೇಟಿಗೆ ಅಲ್ಲ. ಬದಲಿಗೆ ನನ್ನಒಡೆಯ ಹೊಡೆಯುತ್ತಿರುವ ಕಲ್ಲೇಟು ನನ್ನಹೃದಯಕ್ಕೆ ನೀಡುತ್ತಿರುವ ನೋವಿಗಾಗಿ…ನಿಮಗಾಗಿ ನಾನು ಹಗಲಿರುಳು ಸಲ್ಲಿಸಿದನಿಸ್ವಾರ್ಥ ಸೇವೆಗೆ ಈ ಶಿಕ್ಷೆಯೇ? ಈ ಕಲ್ಲೇಟಾ?ನಾನು ನಿಮ್ಮವನು, ನಿಮ್ಮ ಒಡನಾಡಿ, ನಿಮ್ಮಆವೇಶಕ್ಕೆ ನನ್ನ ಬಲಿ ಕೊಡದಿರಿ. ನನ್ನ ಕನಸಿನಪಯಣವನ್ನು ಮತ್ತೂಮ್ಮೆ ನಿಮ್ಮೊಂದಿಗೆಪ್ರಾರಂಭಿಸಲು ಕಾತುರದಿಂದ ಕಾದಿರುವೆ.871 ಬಿಎಂಟಿಸಿ ಬಸ್‌ಗಳ ಸಂಚಾರಸಾರಿಗೆ ಸಂಸ್ಥೆಯ ಬಸ್‌ ಮುಷ್ಕರದ ನಡುವೆಯೂ ಶುಕ್ರವಾರ ನಗರದ ವಿವಿಧ ಕಡೆಗಳಿಗೆ 871 ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗಿದವು.

ಯಲಹಂಕ, ಕೆ.ಆರ್‌.ಪುರ, ಚಂದ್ರಾಲೇಔಟ್‌,ವಿಜಯನಗರ, ಮೈಸೂರು ರಸ್ತೆ.ಕೆಂಗೇರಿ, ಮಲತ್ತಹಳ್ಳಿ, ಅಂಬೇಡ್ಕರ್‌ ಕಾಲೇಜು, ಸುಜಾತ ಕೊಟ್ಟಿಗೆಪಾಳ್ಯ ಸೇರಿದಂತೆ ಮತ್ತಿತರರ ಕಡೆಗಳಿಗೆ ಬಿಎಂಟಿಸಿ ಬಸ್‌ಗಳು ಪ್ರಯಾಣಿಕಕರನ್ನು ಹೊತ್ತು ಸಾಗಿದವು.ಹಾಗೆಯೇ ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ, ಚಂದ್ರಾಲೇಔಟ್‌, ವಿಜಯನಗರ , ಕೆಂಗೇರಿಸೇರಿದಂತೆ ಮತ್ತಿತರ ಮಾರ್ಗಗಳಿಗೆ ಕೆ.ಆರ್‌.ಮಾರುಕಟ್ಟೆ ಪ್ರದೇಶದಿಂದ ಬಿಎಂಟಿಸಿ ಬಸ್‌ಗಳುಕಾರ್ಯಾಚರಣೆ ನಡೆಸಿದವು. ಗುರುವಾರ ನಗರದ ವಿವಿಧ ಕಡೆಗಳಿಗೆ 707 ಬಸ್‌ಗಳು ಸಂಚರಿಸಿದ್ದವು.

ಈ ವೇಳೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಬಿಎಂಟಿಸಿ ಚಾಲಕ, ಬೆಂಗಳೂರಿನಲ್ಲಿಸಂಬಳವಿಲ್ಲದೆ ಸಂಸಾರ ನಡೆಸುವುದು ಕಷ್ಟ. ನನ್ನ ನಂಬಿಕೊಂಡು ನನ್ನ ಸಂಸಾರವಿದೆ. ಸಂಸ್ಥೆ ಸಂಬಳಕೊಟ್ಟರೆ ಮಾತ್ರ ಸಂಸಾರ ನಡೆಯುತ್ತೆ.ಆ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next