Advertisement
ಕೆಎಸ್‌ಆರ್‌ಟಿಸಿಯ ಅಂಕಿ – ಅಂಶದ ಪ್ರಕಾರ 2013- 14ನೇ ಸಾಲಿನಲ್ಲಿ 1,266 ಅಪಘಾತವಾಗಿತ್ತು, 2014-15ನೇ ಸಾಲಿನಲ್ಲಿ 1,207, 2015-16ರಲ್ಲಿ 1,100, 2016-17ರಲ್ಲಿ 1,050 ಮತ್ತು 2017-18ನೇ ಸಾಲಿನಲ್ಲಿ 1,043ಕ್ಕೆ ಇಳಿಕೆಯಾಗಿದೆ. ಇದೇ ಇಳಿಕೆ ಮುಂದುವರಿದು 2018-19ನೇ ಸಾಲಿನಲ್ಲಿ 1010 ಅವಘಡಗಳಷ್ಟೇ ಆಗಿವೆ.ಸ್ಥಳೀಯ ಮಟ್ಟದಲ್ಲಿಯೇ ಅಪಘಾತ ವಲಯ “ಬ್ಲಾಕ್ ಸ್ಪಾಟ್’ ಗುರುತಿಸುವಿಕೆ ಇದಕ್ಕೆ ಪ್ರಮುಖ ಕಾರಣ. ಯಾವ ರಸ್ತೆಗಳಲ್ಲಿ ಹೆಚ್ಚು ಅವಘಡಗಳು ಸಂಭವಿಸುತ್ತವೆ ಎಂದು ಪ್ರತೀ ನಿಗಮದ ವತಿಯಿಂದ ಈಗಾಗಲೇ ಸರ್ವೇ ಮಾಡಲಾಗಿದೆ. ಅದರನ್ವಯ ಅಪಘಾತ ವಲಯಗಳು, ಶಾಲಾ ವಠಾರಗಳ ಸಮೀಪ ಸೂಚನ ಫಲಕ, ರಸ್ತೆ ಉಬ್ಬು ಅಳವಡಿಕೆ ಮಾಡಲಾಗಿದೆ.
ಸುರಕ್ಷತಾ ಸಪ್ತಾಹ ಆಯೋಜಿಸಲಾಗುತ್ತಿದೆ. ಇದರೊಡನೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬೀದಿ ನಾಟಕ, ಕರಪತ್ರಗಳ ಹಂಚಿಕೆ, ಮಾಹಿತಿ ಕೈಪಿಡಿ, ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ತಿಳಿವಳಿಕೆ, ಕಾಲ್ನಡಿಗೆ ಜಾಥಾ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕದ ಗೌರವವನ್ನು ನಿಗಮವು ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಐದು ವರ್ಷ, ನಗರದಲ್ಲಿ ಮೂರು ವರ್ಷ ಅಪಘಾತ ರಹಿತ ಬಸ್ ಚಾಲನೆ ಮಾಡಿದ ಚಾಲಕರಿಗೆ 32 ಗ್ರಾಂ ಬೆಳ್ಳಿ ಪದಕ ಮತ್ತು 150 ರೂ. ಮಾಸಿಕ ಭತ್ಯೆ ನೀಡಲಾಗುತ್ತಿದೆ. ಚಾಲಕ ಬೆಳ್ಳಿ ಪದಕ ಪಡೆದ ಅನಂತರ ಸತತವಾಗಿ 5 ವರ್ಷ ಅರ್ಹತಾ ಪುರಸ್ಕಾರಕ್ಕೆ ಅರ್ಹರಾದ್ದಲ್ಲಿ ಚಿನ್ನದ ಪದಕ ನೀಡಲಾಗುತ್ತಿದೆ. 2016-17ನೇ ಸಾಲಿನಲ್ಲಿ ನಾಲ್ವರು ಚಾಲಕರಿಗೆ ಬೆಳ್ಳಿ ಪದಕ ನೀಡಲಾಗಿತ್ತು. ಈ ಬಾರಿ ಮೂವರಿಗೆ ನೀಡಲಾಗಿದೆ.
Related Articles
ಸಿಮ್ಯುಲೇಟರ್ ತರಬೇತಿ
ಅಪಘಾತ ರಹಿತ ಬಸ್ ಚಾಲನೆಯ ಉದ್ದೇಶದಿಂದ ಕೆಎಸ್ಸಾರ್ಟಿಸಿಯು ತನ್ನ ಚಾಲಕರಿಗೆ ಕೆಲವು ವರ್ಷಗಳಿಂದ ಸಿಮ್ಯುಲೇಟರ್ ತರಬೇತಿಯನ್ನು ನೀಡುತ್ತಿದೆ. ಇದು ರಕ್ಷಣಾತ್ಮಕ ಚಾಲನ ಕೌಶಲದ ತರಬೇತಿ. ಈ ತರಬೇತಿಯಿಂದ ಅಪಘಾತ ಪ್ರಮಾಣ ಕಡಿಮೆಯಾಗಿದ್ದು, ಯಶಸ್ವೀ ಉಪಕ್ರಮವನ್ನು ನಿಗಮವು ಮುಂದುವರಿಸಿದೆ.
Advertisement
ಅಪಘಾತ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್ಸಾರ್ಟಿಸಿಯಿಂದ ಬಸ್ ಚಾಲಕರಿಗೆ ಅರಿವು ಕಾರ್ಯಾಗಾರವನ್ನು ಕೆಲವು ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿದೆ. ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಗೌರವಿಸಲಾಗುತ್ತಿದೆ. ಈಗಾಗಲೇ ಅಪಘಾತ ಪ್ರಮಾಣ ಇಳಿಮುಖಗೊಂಡಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಕಡಿಮೆ ಮಾಡುವತ್ತ ಗಮನಹರಿಸಲಾಗುವುದು.– ಶಿವಯೋಗಿ ಸಿ. ಕಳಸದ್
ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಪಘಾತ ಪ್ರಮಾಣ
ವರ್ಷ ಅಪಘಾತ
2013 -14 1,266
2014 -15 1,207
2015 -16 1,100
2016 -17 1,050
2017 -18 1,043
2018 -19 1,010