Advertisement

KSRTC: “8 ಸಾವಿರ ಹೊಸ ಬಸ್‌ ಖರೀದಿ; 8 ಸಾವಿರ ಸಿಬಂದಿ ನೇಮಕ”: ರಾಮಲಿಂಗಾರೆಡ್ಡಿ

11:55 PM Oct 31, 2023 | Team Udayavani |

ವಿಜಯಪುರ: ರಾಜ್ಯದ ಮಹಿಳೆಯರಿಗೆ ಸರಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆಯಿಂದ ಅನುಕೂಲ ಆಗಿದೆ. ಆದರೂ ಬಿಜೆಪಿ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಿಳೆಯರ ಉಚಿತ ಪ್ರಯಾಣ ಸೇವೆ ನೀಡಿದರೂ ಸಾರಿಗೆ ಸಂಸ್ಥೆ ಸಿಬಂದಿಗೆ ನಾವು ಸರಿಯಾಗಿ ವೇತನ ನೀಡುತ್ತಿದ್ದೇವೆ. ಬರುವ 4-5 ತಿಂಗಳಲ್ಲಿ ರಾಜ್ಯದಲ್ಲಿ ಹೊಸ ಬಸ್‌ ಓಡಾಟ ನಡೆಸಲಿವೆ. 8 ಸಾವಿರ ಸಿಬಂದಿ ನೇಮಕಾತಿ ಆಗಲಿದೆ. ರದ್ದಾಗಿರುವ ಸಾರಿಗೆ ಸಂಚಾರ ಶೆಡ್ನೂಲ್‌ ಪುನರಾರಂಭ ಆಗಲಿವೆ. ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರಕಾರ ಇದ್ದಾಗ ಒಂದೂ ಹೊಸ ಬಸ್‌ ಖರೀದಿ ಮಾಡಲಿಲ್ಲ. ಅ ಧಿಕಾರದ ಕೊನೆಯಲ್ಲಿ ಹೊಸ ಬಸ್‌ ಖರೀದಿಗೆ ತೀರ್ಮಾನಿಸಿದರೂ ಅನುಷ್ಠಾನಕ್ಕೆ ತರಲಿಲ್ಲ. ನಮ್ಮ ಸರಕಾರದಲ್ಲಿ ಹೊಸ ಬಸ್‌ ಬರುತ್ತಿವೆ ಎಂದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿ 3800 ಶೆಡ್ನೂಲ್‌ ರದ್ದು ಮಾಡಲಾಗಿತ್ತು. ಹೀಗಾಗಿ ಚಾಲಕರ ಕೊರತೆ ಆಗುತ್ತದೆ. ಹಳೆ ಬಸ್‌ ಗುಜರಿಗೆ ಹಾಕುತ್ತೇವೆ, ಹೊಸ ಬಸ್‌ ಬಂದಿಲ್ಲ. 5500 ಹೊಸ ಬಸ್‌ ಖರೀದಿ ಮಾಡುತ್ತಿದ್ದೇವೆ. ಈಗಾಗಲೇ 13,800 ಹೊಸ ಬಸ್‌ ಖರೀದಿಗೆ ಅನುಮತಿ ಕೇಳಿದ್ದು, 8 ಸಾವಿರ ಬಸ್‌ ಖರೀದಿಗೆ ಅನುಮತಿ ದೊರಕಿದೆ. ಖರೀದಿ ಪ್ರಕ್ರಿಯೆ ಆರಂಭವಾಗಿದೆ. 13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರೋದು ಬಿಟ್ಟರೆ ಮತ್ತೆ ನೇಮಕಾತಿ ಆಗಿಲ್ಲ.

ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಾರಿಗೆ ಸಂಸ್ಥೆಯ ಸಿಬಂದಿಗೆ ಸರಿಯಾಗಿ ವೇತನ ಕೊಟ್ಟಿಲ್ಲ. ಮಹಿಳೆಯರ ಉಚಿತ ಪ್ರಯಾಣ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ 2800 ಕೋಟಿ ರೂ. ಘೋಷಿಸಿದ್ದಾರೆ. ಪ್ರತಿ ತಿಂಗಳು ಅಗತ್ಯ ಅನುದಾನ ನೀಡುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next