ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ “ಕ್ಷೇಮಗಿರಿಯಲ್ಲಿ ಕರ್‌ನಾಟಕ’ ಚಿತ್ರ ಈ ವಾರ (ಡಿ. 9ಕ್ಕೆ)ತೆರೆಗೆ ಬರುತ್ತಿದೆ.
ನವನಟ ಜೆ. ಡಿ, ಶ್ರದ್ದಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿರುವ ಈಚಿತ್ರದಲ್ಲಿ ಬೇಬಿ ವಿನುತಾ, ನೀನಾಸಂ ಚೇತನ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಯೂರೋಪ್‌ನಲ್ಲಿ ಸಿನಿಮಾ ನಿರ್ದೇಶನ ತರಬೇತಿ ಪಡೆದಿರುವ ಜಾನ್ ಪೀಟರ್‌ರಾಜಣ್ಣ ನಿರ್ದೇಶನದಲ್ಲಿ ಮೂಡಿಬಂದಿರುವಈ ಚಿತ್ರವನ್ನು “ಕ್ರಿಮ್ಸಮ್‌ವಾರ್ಮ್ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಮೈಕಲ್ ರಾಣಿ ನಿರ್ಮಿಸಿದ್ದಾರೆ.
“ಕ್ಷೇಮಗಿರಿಯಲ್ಲಿ ಕರ್‌ನಾಟಕ’ ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.
“ಒಬ್ಬ ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸಿನಿಮಾದ ಕಥೆ ಹೇಳಿದ್ದೇವೆ. ನಾಗತಿಹಳ್ಳಿ ಚಂದ್ರಶೇಖರ್ ಅವರ “ಟೆಂಟ್ ಸಿನಿಮಾ ಶಾಲೆ’ಯ ಪ್ರತಿಭೆಗಳು ಸೇರಿದಂತೆ ಬಹುತೇಕ ಹೊಸಬರು ಈ ಸಿನಿಮಾದಲ್ಲಿ ನಟಿಸಿದ್ದಾರೆ.”ಕ್ಷೇಮಗಿರಿ’ ಎಂಬ ಕಾಲ್ಪನಿಕ ಊರಿನಲ್ಲಿ ಸಿನಿಮಾದ ಕಥೆ ಸಾಗುತ್ತದೆ’ ಎಂಬುದು ಚಿತ್ರದ ಬಗ್ಗೆ ನಿರ್ದೇಶಕ ಜಾನ್ ಪೀಟರ್ ರಾಜಣ್ಣ ವಿವರಣೆ.
“ಕ್ಷೇಮಗಿರಿಯಲ್ಲಿ ಕರ್‌ನಾಟಕ’ ಚಿತ್ರದಲ್ಲಿ ಬರೋಬ್ಬರಿ 10 ಹಾಡುಗಳಿದ್ದು, ರವಿಶಂಕರ್ ಗುಂಡ್ಮಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ವಿ. ಮನೋಹರ್ ಚಿತ್ರಕ್ಕೆ ಹಿನ್ನೆಲೆ
ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಗೋವಿಂದರಾಜುಛಾಯಾಗ್ರಹಣವಿದೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು.
ಅಂದಹಾಗೆ, “ಕ್ಷೇಮಗಿರಿಯಲ್ಲಿ ಕರ್‌ನಾಟಕ’ ಚಿತ್ರಡಿ. 9ರಂದು ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಅಧಿಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.