Advertisement

ಕೆಎಸ್ ನಿಸಾರ್ ಅಹಮದ್ ನೇರ ನಡೆನುಡಿಯ ತತ್ವಬದ್ಧ ನಿಷ್ಠೂರವಾದಿ: ಮನು ಬಳಿಗಾರ್

08:27 AM May 04, 2020 | Nagendra Trasi |

ಬೆಂಗಳೂರು: ಕೆಎಸ್ ನಿಸಾರ್ ಅಹಮದ್ ಕವಿಯಾಗುವುದರ ಜೊತೆಗೆ ಶ್ರೇಷ್ಠ ಮಾನವತಾವಾದಿ. ಮಾನವನ, ಸಮಾಜದ ಸ್ವಾಸ್ಥ್ಯಕ್ಕಾಗಿ ಸಾಹಿತ್ಯ ರಚಿಸಿದವರು. ಹಾಗಾಗಿ, ಅವರ ಬರಹಗಳು ಸೌಹಾರ್ದ ಮೂಡಿಸುತಿತ್ತು. ಅವರೊಬ್ಬ ನೇರ ನಡೆ ನುಡಿಯ, ತತ್ವ ಬದ್ಧ ನಿಷ್ಠೂರ ವಾದಿ.

Advertisement

ನಾನು 25 ವರ್ಷಗಳಿಂದ ಒಡನಾಟದಲ್ಲಿದ್ದೇನೆ. ಅವರಲ್ಲಿ ಯಾವ ಹಪಾಹಪಿ ಕೂಡ ಕಾಣಲಿಲ್ಲ. ನಿರ್ಲಿಪ್ತವಾಗಿ ಇದ್ದರು. ತಮ್ಮ ಪಾಡಿಗೆ ತಾವು ಸಾಹಿತ್ಯ ರಚಿಸಿಕೊಂಡು. ಪಂಪ ಪ್ರಶಸ್ತಿ ಶಿಫಾರಸ್ಸು ಕಮಿಟಿಯಲ್ಲಿ ನಾನಿದ್ದೆ. ಪದ್ಮಭೂಷಣ ಬಂದಾಗ ಡಿಪಾರ್ಟ್ ಮೆಂಟಲ್ಲೇ ಇದ್ದೆ.

ಪ್ರಶಸ್ತಿಗಳೆಲ್ಲವೂ ಅರ್ಹತೆಯನ್ನು ಅರಸಿಕೊಂಡೇ ಇವರ ಹತ್ತಿರ ಬಂದವು. ಯಾವುದಕ್ಕೂ ಅವರು ಆಸೆ ಪಡುತ್ತಿರಲಿಲ್ಲ. ಅವರ ಮನುಜ ಮತದ ಕಡೆ ತುಡಿಯುವ ಗುಣ ನನಗೆ ಬಹಳ ಇಷ್ಟ…ಇದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮನುಬಳಿಗಾರ್ ಅವರು ಕೆಎಸ್ ಎನ್ ಅವರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿತ್ಯೋತ್ಸವ ಕವಿ ಎಂದೇ ಜನಪ್ರಿಯರಾಗಿದ್ದ ಕೆಎಸ್ ನಿಸಾರ್ ಅಹಮದ್ ಅವರು ಭಾನುವಾರ ಪದ್ಮನಾಭನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next