Advertisement
ಸಿಎಂ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಕೆಲವು ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ತೆಗೆದು ಹಾಕಿದ್ದಾರೆ. ಅದಕ್ಕಿಂತ ಮುಂಚೆ ಒಬ್ಬ ಎಸ್ ಡಿಪಿಐ ಕಾರ್ಯಕರ್ತ ಆತನ ಪತ್ನಿ ಕಾರ್ಪೊರೇಟರ್ ಆತ ಸಹ ಸಾವರ್ಕರ್ ಫೋಟೋ ತೆಗೆದು ಹಾಕಿದ್ದಾನೆ. ಮತ್ತೊಮ್ಮೆ ಸಾವರ್ಕರ್ ಗೆ ಅವಮಾನ ಹಿನ್ನೆಲೆ ಶಿವಮೊಗ್ಗ ಪ್ರಕ್ಷುಬ್ಧವಾಯ್ತು. ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ ಎಂದು ಹೇಳಿದರು.
Related Articles
Advertisement
ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡುವುದಿಲ್ಲ. ಆದರೆ ಹಿಂದೂಗಳು ಅಶಕ್ತರಲ್ಲ. ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ. ಇದು ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯವಾಗಿಲ್ಲ. ಪದೇಪದೇ ಈ ರೀತಿಯ ಘಟನೆಯಾಗುತ್ತಿದ್ದರೂ ವೈಫಲ್ಯವಾಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೆದುಕೊಂಡಿದೆ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ ಎಂದು ಆರೋಪಿಸಿದರು.
ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ನಮ್‌ಹಬ್ಬದ ತಂಟೆಗೆ ಬರಬೇಡಿ ಎಂದರು.