ಗದಗ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜಾತಿ, ದುಡ್ಡು, ಗೂಂಡಾ ರಾಜಕಾರಣ ಇದ್ಯಾವುದು ನಡೆಯೊದಿಲ್ಲ. ಬದಲಾಗಿ ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಜನರು ಮೆಚ್ಚುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾವು ಗೆಲ್ಲುತೇವೆ, ಚುನಾವಣೆ ನಂತರ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಅಂತ ಸುಳ್ಳು ಹೇಳ್ತಾ ಬಂದರು. ಹಿಂದಿನಿಂದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಾ ಬಂದಿದೆ. ಇನ್ನೂ ಮುಂದಾದರು ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಬೇಕು. ನಾವು ಮಾಡಿದ್ದು ತಪ್ಪು ಅಂತ ಜನರಲ್ಲಿ ಕ್ಷೇಮ ಕೇಳಬೇಕು ಎಂದರು.
ನಾನು ಸಿಎಂ ಎಂದು ಹೇಳಿಕೊಳ್ಳುವ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಇದು ತಕ್ಕ ಪಾಠವಾಗಿದೆ. ಇವರು ಸೋತರು ಪಾಠ ಕಲಿಯಲ್ಲ, ಜನ್ರೇ ಇವರನ್ನ ಮೂಲೆಗೆ ತಳ್ಳತಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಚುನಾವಣೆ ಎದುರಿಸಲಾಗಲಿಲ್ಲ. ಮರ್ಯಾದೆಗೆಟ್ಟವರಿಗೆ ಏನು ಹೇಳೋಕೆ ಬರೋಲ್ಲ. ದುಡ್ಡು, ಜಾತಿ ಎಲ್ಲಾ ವ್ಯವಸ್ಥೆ ಮಾಡಿದ್ರು ಸೋಲಾದ ನಂತರವೂ ಧೃತಿಗೆಡುವ ಅವಶ್ಯಕತೆ ಇಲ್ಲಾ ಅಂತ ಹೇಳ್ತಿದಾರೆ.
ಇದನ್ನೂ ಓದಿ:ನಾನಂತೂ ಸಚಿವನಾಗೋದಿಲ್ಲ, ನ.25 ವರೆಗೆ ಕಾಯಿರಿ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಕೇಂದ್ರ ನಾಯಕರಿಗೆ ಬಿಟ್ಟ ವಿಚಾರವಾಗಿದೆ. ಕೇಂದ್ರದ ನಾಯಕರು ತೆಗೆದುಕೊಂಡು ನಿರ್ಮಾಣಕ್ಕೆ ರಾಜ್ಯದ ಎಲ್ಲಾ ಶಾಸಕರು ಬದ್ಧರಾಗಿರುತ್ತೆವೆ ಎಂದರು.