Advertisement

ಕೃಷಿ ಯೋಜನೆಗಳ ಮಾಹಿತಿ ತೆರೆದಿಟ್ಟ “ಕೃಷಿ ಮಹೋತ್ಸವ’

09:01 PM Oct 08, 2021 | Team Udayavani |

ಕೋಟ: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದಲ್ಲಿ ಪ್ರತೀ ವರ್ಷ ಕೃಷಿ ಮೇಳ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತಿತ್ತು ಹಾಗೂ ಸ್ಥಳೀಯ ಕೃಷಿಕರಿಗೆ ಇದೊಂದು ಕೃಷಿ ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು. ಯುವ ಜನಾಂಗವನ್ನು ಕೃಷಿ ಕಡೆಗೆ ಸೆಳೆಯಲು ಕೃಷಿಮೇಳ ಸಹಾಯಕವಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಕೃಷಿ ಮೇಳ ಸ್ಥಗಿತವಾಗಿದೆ. ಹೀಗಾಗಿ ಕೃಷಿ ಮಹೋತ್ಸವ ಎನ್ನುವ ಸರಳ ಆಚರಣೆಯ ಮೂಲಕ ರೈತರಿಗೆ ಕೃಷಿ ಮಾಹಿತಿ ನೀಡಲು ಇಲಾಖೆ ಮುಂದಾಗಿದ್ದು, ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅ. 8ರಂದು ಈ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಮತ್ತು ಸರಕಾರಿ ಇಲಾಖೆಗಳ 14 ಕೃಷಿ ವಸ್ತು ಪ್ರದರ್ಶನದ ಮಳಿಗೆಗಳ ಮೂಲಕ ತಾಂತ್ರಿಕ ಮಾಹಿತಿ, ಕೃಷಿ ಸಂಬಂಧಿಸಿತ ಇಲಾಖೆಗಳ ಮಾಹಿತಿಗಳನ್ನು ರೈತರಿಗೆ ನೀಡಲಾಯಿತು ಹಾಗೂ ಕೃಷಿ ಸಂವಾದ, ತಾಂತ್ರಿಕ ಸಮಾವೇಶ ನಡೆಯಿತು.
ಇತರ ಮಾಹಿತಿಗಳು

ಪಶು ವೈದ್ಯ ಇಲಾಖೆ, ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯ ಹಾಗೂ ಯೋಜನೆಗಳ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ಸಸ್ಯಾಗಾರ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ, ಅಣಬೆ, ಕೃಷಿ, ಮೀನುಗಾರಿಕೆ, ಕೃಷಿ ಯಂತ್ರೋಪಕರಣಗಳು, ಸಾವಯವ ಕೃಷಿ, ಆಡು, ಕುರಿ, ಮೊಲ, ಕೋಳಿ ಸಾಕಾಣಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಲಾಯಿತು.

ನೈಸರ್ಗಿಕ ಕೃಷಿ, ಗೇರು ಕೃಷಿ, ಭತ್ತ ಮತ್ತು ನೆಲಗಡಲೆ ಬೆಳೆಗಳಲ್ಲಿ ಯಾಂತ್ರೀಕರಣ, ತೆಂಗು ಮತ್ತು ಅಡಿಕೆ ಕೃಷಿ ಕುರಿತಾಗಿ ಹಾಗೂ ಕಲ್ಪರಸದ ಕುರಿತು ಮಾಹಿತಿ ಸಂಕಿರಣಗಳು ನಡೆಯಿತು.

ಇದನ್ನೂ ಓದಿ:ಚೀನಾದ ಕಾರನ್ನ ನಮ್ಮಲ್ಲಿ ಮಾರಬೇಡಿ: ಟೆಸ್ಲಾಗೆ ಕೇಂದ್ರದ ಸೂಚನೆ

Advertisement

ಭತ್ತದ ತಳಿಗಳ ಪರಿಚಯ
ರೈತರಿಗೆ ಕೇಂದ್ರದಿಂದ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿರುವ ಭತ್ತದ ತಳಿಗಳಾದ ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖೀ ಮತ್ತು ವಿಶೇಷ ಸ್ಥಳೀಯ ತಳಿಯಾದ ಕಜೆ ಜಯ ತಳಿ, ಪ್ರಸ್ತುತ ಪ್ರಯೋಗಗಳಲ್ಲಿ ತೊಡಗಿಸಲಾದ ಇತರ ಭತ್ತದ ತಳಿಗಳನ್ನು ಕ್ಷೇತ್ರೋತ್ಸವದಲ್ಲಿ ಪರಿಚಯಿಸಲಾಯಿತು ಹಾಗೂ ವಲಯ ಕೃಷಿ , ತೋಟಗಾರಿಕೆ ಸಂಶೋಧನ ಕೇಂದ್ರ, ಬ್ರಹ್ಮಾವರದಿಂದ ಬಿಡುಗಡೆ ಮಾಡಿರುವ ಕೃಷಿ ಯಂತ್ರೋಪಕರಣಗಳಾದ ಪವರ್‌ ಟಿಲ್ಲರ್‌ ಚಾಲಿತ ಧಾನ್ಯ ಬಿತ್ತನೆ ಮಾಡುವ ಕೂರಿಗೆ, ಸುಧಾರಿತ ಕೊನೋ ವೀಡರ್‌, ಭತ್ತದಲ್ಲಿ ಕಳೆ ತೆಗೆಯುವ ಯಂತ್ರ, ಪವರ್‌ ಟಿಲ್ಲರ್‌ ಚಾಲಿತ ಮಣ್ಣು ದಬ್ಬುವ ಯಂತ್ರ ಹಾಗೂ ಸಂಶೋಧನ ಹಂತದಲ್ಲಿರುವ ತೆಂಗಿನ ಮರ ಹತ್ತುವ ಯಂತ್ರ, ಕಡಿಮೆ ವೆಚ್ಚದಲ್ಲಿ ಆಡು ಸಾಕಾಣಿಕೆ ಘಟಕ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸಲಾಯಿತು. ತೋಟಗಾರಿಕೆಗೆ ಸಂಬಂಧಿಸಿದ ಸ್ಟಾಲ್‌ಗ‌ಳಲ್ಲಿ ರೈತರು ಹೆಚ್ಚು-ಹೆಚ್ಚು ಮಾಹಿತಿಗಳನ್ನು ಪಡೆಯುತ್ತಿರುವುದು ಕಂಡು ಬಂತು.

ಕೃಷಿ ಮೇಳದ ಕಲ್ಪನೆಯಲ್ಲಿ ಬಂದವರಿಗೆ ನಿರಾಸೆ
ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯ ರೈತರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು ಹಾಗೂ ಹೆಚ್ಚಿನ ಜನದಟ್ಟಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಪರಿಶೀಲಿಸಿ, ಆಹ್ವಾನಿತರಿಗೆ ಮಾತ್ರ ಒಳ ಪ್ರವೇಶಿಸಲುಅವಕಾಶ ನೀಡಲಾಗಿತ್ತು. ಸೀಮಿತ ಸಂಖ್ಯೆಯ ರೈತರಿದ್ದ ಕಾರಣ ಆರಾಮವಾಗಿ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದರು. ಆದರೆ ಕೃಷಿ ಮೇಳದ ಕಲ್ಪನೆಯನ್ನಿಟ್ಟುಕೊಂಡು ಕಾರ್ಯ ಕ್ರಮಕ್ಕೆ ಆಗಮಿಸಿದ ರೈತರಿಗೆ ಸಾಕಷ್ಟು ನಿರಾಸೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next