ಬೆಳಿಗ್ಗೆ 2,04,200 ಕ್ಯೂಸೆಕ್ ಇದ್ದ ಒಳ ಹರಿವು 1,48,366 ಕ್ಯೂಸೆಕ್ ಗೆ ಕುಸಿತಗೊಂಡಿದೆ, ಒಳ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೊರ ಹರಿವನ್ನು ಇಳಿಸಲಾಗಿದೆ.
Advertisement
ಪ್ರಸ್ತುತ 1,63,924 ಕ್ಯೂಸೆಕ್ ಇರುವ ಹೊರ ಹರಿವು. ಸಂಜೆ ವೇಳೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿದ್ದ ಪ್ರವಾಹ ಭೀತಿ ದೂರವಾಗಿದೆಜಲಾಶಯದ ಗರಿಷ್ಠ ಮಟ್ಟ 124.80ಅಡಿ ಇದ್ದು ಈಗಿನ ಮಟ್ಟ 122.00ಅಡಿಗಳಷ್ಟಿದೆ ಜಲಾಶಯದ ಒಳ ಹರಿವು 1,48,366ಕ್ಯೂಸೆಕ್. ಹಾಗೂ ಹೊರ ಹರಿವು 1,63,924ಕ್ಯೂಸೆಕ್, ಡ್ಯಾಂನಲ್ಲಿ 45.631 TMC. ಸಂಗ್ರಹವಾಗಿದೆ.
KRS ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಕ್ಷಣ ಕ್ಷಣವೂ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ಹರಿವನ್ನು 50 ಸಾವಿರ ಕ್ಯೂಸೆಕ್ ಗೆ ಇಳಿಕೆ ಮಾಡಿದ ಅಧಿಕಾರಿಗಳು. ಬೆಳಿಗ್ಗೆಯಿಂದ 1 ಲಕ್ಷದ 64 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ತಗ್ಗಿದಂತಾಗಿದೆ.