ನವದೆಹಲಿ: ಬೆಂಗಳೂರಿನ ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್ ಅವರು 2021ನೇ ಸಾಲಿನ ವೈಲ್ಡ್ ಇನ್ನೋವೇಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನಲ್ಲಿ (ಸಿಡಬ್ಲ್ಯುಎಸ್) ಪ್ರಧಾನ ಹುದ್ದೆಯಲ್ಲಿರುವ ಇವರಿಗೆ ವೈಲ್ಡ್ ಎಲಿಮೆಂಟ್ಸ್ ಫೌಂಡೇಶನ್ ಈ ಪ್ರಶಸ್ತಿ ನೀಡುತ್ತಿದೆ.
ಜಾಗತಿಕ ಸುಸ್ಥಿರತೆ, ವನ್ಯಜೀವಿ ಸಂರಕ್ಷಣೆಗೆ ನೀಡಿದ ಪರಿಹಾರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿಡಬ್ಲ್ಯುಎಸ್ ತಿಳಿಸಿದೆ. ಈ ಗೌರವದ ಮೊತ್ತ 1 ಲಕ್ಷ ಡಾಲರ್‌ಗಳಾಗಿದೆ.
“ವೈಲ್ಡ್ ಇನ್ನೋವೇಟರ್ ಆಗಿ ನನ್ನನ್ನು ಆರಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಮ್ಮ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಶಾಲೆ ಮತ್ತು ವನ್ಯಜೀವಿ ಸೇವೆಯಂಥ ಯೋಜನೆಗಳನ್ನು ಇನ್ನಷ್ಟು ಹಮ್ಮಿಕೊಳ್ಳಲು ಪ್ರಶಸ್ತಿ ಅನುವು ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ :ವಿಶ್ವ ಆ್ಯತ್ಲೆಟಿಕ್ಸ್ ರಿಲೇ : ಹಿಮಾ ದಾಸ್, ದ್ಯುತಿ ಚಂದ್ ಪ್ರಯಾಣಕ್ಕೆ ಚ್ಯುತಿ
ಸಂರಕ್ಷಣಾ ಪ್ರಾಣಿಶಾಸ್ತ್ರಜ್ಞ ಡಾ. ಉಲ್ಲಾಸ್ ಕಾರಂತ್ ಪುತ್ರಿಯಾಗಿರುವ ಕೃತಿ, ಖ್ಯಾತ ಸಾಹಿತಿ ಕೆ. ಶಿವರಾಮ ಕಾರಂತರ ಮೊಮ್ಮಗಳೂ ಹೌದು.