Advertisement
ಕೃಷ್ಣರಾಜ ಸಾಗರ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು,ಶುಕ್ರವಾರ ಸಂಜೆ ವೇಳೆಗೆ ಜಲಾಶಯದಲ್ಲಿ ನೀರಿನ ಮಟ್ಟ 121.40 ಅಡಿಗೆ ಏರಿಕೆಯಾಗಿದೆ.
ಗುತ್ತಿದೆ. ನದಿಗೆ 1155 ಕ್ಯುಸೆಕ್ ಹಾಗೂ 2611 ಕ್ಯುಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 78.65 ಅಡಿ ನೀರು ಸಂಗ್ರಹ ವಾಗಿತ್ತು. ಕೃಷ್ಣರಾಜ ಸಾಗರ ಮೂರು ವರ್ಷಗಳ ನಂತರ ಈ ವರ್ಷ ನಿಗದಿತ ಅವಧಿಗೆ ಮುನ್ನವೇ ಭರ್ತಿಯಾಗುತ್ತಿದೆ. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜು.20ರಂದು ಕೆಆರ್‌ಎಸ್ ಜಲಾಶಯಕ್ಕೆ ಬಾಗೀನ ಸಮರ್ಪಿಸಲಿದ್ದಾರೆ.
Related Articles
Advertisement
ಭರ್ತಿಯತ್ತ ಹಾರಂಗಿ, ಗೊರೂರು ಜಲಾಶಯಗಳು: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ವರ್ಷಧಾ ರೆಯಿಂದ ಹಾರಂಗಿ ಜಲಾಶಯ ಭರ್ತಿಯಾಗಿದೆ.
ಜೊತೆಗೆ,ಹೇಮಾವತಿ ಜಲಾನಯನ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಗೊರೂರು ಅಣೆಕಟ್ಟೆಯೂ ಭರ್ತಿ ಹಂತದಲ್ಲಿದೆ. ಇವೆರಡೂ ಜಲಾಶಯಗಳಿಂದ ಮುಂದಿನ ದಿನಗಳಲ್ಲಿ ಕೆಆರ್ ಎಸ್‌ಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆಯಿದೆ.
ಮುನ್ನೆಚ್ಚರಿಕೆ: ಈಗಾಗಲೇ ಹೇಮಾವತಿ ಹಾಗೂ ಕೃಷ್ಣರಾಜ ಸಾಗರ ಜಲಾಶಯ ಭರ್ತಿ ಹಂತ ತಲುಪಿರುವುದರಿಂದ ನದಿ ಪಾತ್ರದಲ್ಲಿರುವ ಜನರು ಹಾಗೂ ಇಳಿಜಾರು ಪ್ರದೇಶಗಳಲ್ಲಿ ರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಕೆಆರ್ ಎಸ್ ಜಲಾಶಯದಿಂದ 1 ಲಕ್ಷ ಕ್ಯುಸೆಕ್‌ನಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿದು ಬಂದರೆ ಭಾರೀ ಪ್ರಮಾಣದ ಹಾನಿ ಸಂಭವಿಸಲಿದೆ.
ಸದ್ಯ ಹರಿದು ಬರುತ್ತಿರುವ 39 ಸಾವಿರ ಕ್ಯುಸೆಕ್ ಒಳಹರಿವಿ ನಿಂದ ಹಾನಿ ಸಂಭವಿಸುವ ಸಾಧ್ಯತೆಗಳು ಕಡಿಮೆ ಇದೆ.
ಮಹಾಮಳೆಗೆ ಮೈದುಂಬಿದ ಕೃಷ್ಣೆವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಇದೀಗ ಮತ್ತೆ ಜೀವಕಳೆ. ಜಲಾನಯನ ಪ್ರದೇಶದ ಕರ್ನಾಟಕಲ್ಲಿ ಮಳೆ ಮಾಯವಾಗಿದ್ದರೂ, ನದಿ ಮೇಲ್ಭಾಗದ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಕೃಷ್ಣೆಗೆ ಮೈದುಂಬಿ ಹರಿಯುವ ಸಂಭ್ರಮ.
ನ್ಯಾಯಾಧಿಕರಣ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ 173 ಟಿಎಂಸಿ ಅಡಿ ನೀರಿನ ಬಳಕೆಗೆ ಕೃಷ್ಣಾ ನದಿ ಪಾತ್ರದ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯ ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡು ಆಲಮಟ್ಟಿ ಬಳಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಹಾಗೂ ಯಾದಗಿರಿ-ರಾಯಚೂರು ಜಿಲ್ಲೆಗಳಿಗೆ ಮುದ್ದೇಬಿಹಾಳ ತಾಲೂಕಿನ ಹಳ್ಳಿಗಳಿಗೆ ಹೊಂದಿಕೊಂಡು ಜಿಲ್ಲೆಯ ಗಡಿಯಲ್ಲಿ ನಾರಾಯಣಪುರ ಬಳಿ ಬಸವಸಾಗರ ಜಲಾಶಯ ನಿರ್ಮಿಸಲಾಗಿದೆ. ಆಲಮಟ್ಟಿಯ ಶಾಸಿOಉ ಜಲಾಶಯಕ್ಕೆ 2002ರಲ್ಲಿ ನೀರು ಸಂಗ್ರಹ ಆರಂಭಿಸಿದ್ದು, 18 ವರ್ಷಗಳ ಅವಧಿಯಲ್ಲಿ 2015ರಲ್ಲಿ ಮಾತ್ರ ಸಂಪೂರ್ಣ ಭರ್ತಿಯಾಗಿರಲಿಲ್ಲ. 519.60 ಮೀಟರ್ ಎತ್ತರದ ಶಾಸ್ತ್ರಿ ಜಲಾಶಯದಲ್ಲಿ 123.081 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇದೆ. ಈ ವರೆಗೆ 72.985 ಟಿಎಂಸಿ ನೀರು ಸಂಗ್ರಹ ಇದ್ದು, ಸದ್ಯ 61,567 ಕ್ಯೂಸೆಕ್ಸ್ ಒಳ ಹರಿವು ಇದೆ. ಭರ್ತಿಯಾಗಲು ಇನ್ನು 3 ಮೀಟರ್ ಮಾತ್ರ ಬಾಕಿ ಇದ್ದು, ಬರುವ ಸೆಪ್ಟೆಂಬರ್ ಅಂತ್ಯದ ವೇಳೆಗೆ ಭರ್ತಿಯಾಗುವ ನಿರೀಕ್ಷೆ ಇದೆ. ಆಲಮಟ್ಟಿ
ಗರಿಷ್ಠ ಮಟ್ಟ 519.60ಮೀ.
ಇಂದಿನ ಮಟ್ಟ 516.00ಮೀ.
ಒಳಹರಿವು 61,567ಕ್ಯು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲ.ಆದರೂ, ಎಲ್ಲ ತಾಲೂಕುಗಳ ತಹಶೀಲ್ದಾರ್‌ರನ್ನು ಸನ್ನದ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ. ನದಿ ತೀರಗಳ ಹಳ್ಳಿಗಳಲ್ಲಿ ಅಗತ್ಯ ಜಾಗೃತಿ ಮೂಡಿಸಲಾಗಿದೆ.
– ಎಸ್.ಬಿ. ಶೆಟ್ಟೆಣ್ಣವರ,
ಜಿಲ್ಲಾಧಿಕಾರಿ, ವಿಜಯಪುರ ಈ ಬಾರಿ ತುಂಬುವುದೇ ಲಿಂಗನಮಕ್ಕಿ ಡ್ಯಾಂ?
ಶಿವಮೊಗ್ಗ: ರಾಜ್ಯಕ್ಕೆ ಅತಿ ಹೆಚ್ಚು ಜಲವಿದ್ಯುತ್ ಪೂರೈಕೆ ಮಾಡುವ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಳೆದ ಹತ್ತು ದಿನಗಳಿಂದ ಏರಿಕೆ ಹಾದಿಯಲ್ಲಿದೆ. ಹೀಗಾಗಿ, ಈ ಬಾರಿಯಾದರೂ ಜಲಾಶಯ ತುಂಬಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ. 150 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 68.77 ಟಿಎಂಸಿ (ಜುಲೈ 13) ನೀರಿದೆ. 1819 ಅಡಿ ಪೂರ್ಣಮಟ್ಟದ ಜಲಾಶಯವು 2014 ಸೆಪ್ಟೆಂಬರ್‌ನಲ್ಲಿ ಪೂರ್ಣ ತುಂಬಿದ್ದು ಬಿಟ್ಟರೆ ಈವರೆಗೂ ಪೂರ್ತಿ ತುಂಬಿಲ್ಲ. 2014ರಲ್ಲಿ ಪೂರ್ಣ ಪ್ರಮಾಣದಲ್ಲಿ ತುಂಬಿದ್ದ ಡ್ಯಾಂಗೆ ಜುಲೈ 15ರಿಂದ ಆಗಸ್ಟ್‌ರವರೆಗಿನ 15 ದಿನಗಳ ಅವಧಿಯಲ್ಲಿ 60 ಟಿಎಂಸಿ ನೀರು ಸಂಗ್ರಹವಾಗಿತ್ತು.
15 ಬಾರಿ ಮಾತ್ರ ಭರ್ತಿ: ಜಲಾಶಯದ 50 ವರ್ಷಗಳ ಇತಿಹಾಸದಲ್ಲಿ ಈವರೆಗೆ 18 ಬಾರಿ ಮಾತ್ರ ಎಲ್ಲ ಗೇಟ್‌ಗಳಿಂದ ನೀರು ಹೊರಬಿಡಲಾಗಿದೆ. 15 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿ ಅತಿ ಹೆಚ್ಚು ನೀರನ್ನು ಹೊರಬಿಟ್ಟಿರುವ ದಾಖಲೆ ಇರುವುದು 1970ರಲ್ಲಿ. ಜಲಾಶಯವು ಕನಿಷ್ಠ ಮಟ್ಟ ತಲುಪಿದ್ದು 2003ರಲ್ಲಿ. 1987ರಲ್ಲಿ 1781 ಅಡಿ ತಲುಪಿತ್ತು. 3 ವರ್ಷದಿಂದ ತುಂಬಿಲ್ಲ: 2015ರಲ್ಲಿ ನವೆಂಬರ್‌ವರೆಗೂ 80 ಟಿಎಂಸಿ (150 ಟಿಎಂಸಿ ಪೂರ್ಣ ಸಾಮರ್ಥ್ಯ) ಮಾತ್ರ ತುಂಬಿತ್ತು. 2016ರಲ್ಲಿ 88 ಟಿಎಂಸಿ, 2017ರಲ್ಲಿ 94 ಟಿಎಂಸಿ ಮಾತ್ರ ಭರ್ತಿಯಾಗಿದೆ. ಲಿಂಗನಮಕ್ಕಿ
ಗರಿಷ್ಠ ಮಟ್ಟ 1819ಅಡಿ
ಇಂದಿನ ಮಟ್ಟ 1787.75ಅಡಿ
ಒಳಹರಿವು 42487ಕ್ಯು ಈವರೆಗೆ ಶೇ.45ರಷ್ಟು ಮಾತ್ರ ಭರ್ತಿಯಾಗಿದೆ. ಮಳೆಗಾಲವಾಗಿರುವುದರಿಂದ ವಿದ್ಯುತ್ ಬೇಡಿಕೆ ಕಡಿಮೆ. ಅಕ್ಟೋಬರ್ ಒಳಗೆಡ್ಯಾಂ ತುಂಬಿದರೆ ಸರ್ಕಾರದ ಬೇಡಿಕೆಯಂತೆ ವಿದ್ಯುತ್ ಪೂರೈಸಬಹುದು.
– ಮೋಹನ್.ಎಚ್, ಚೀಫ್
ಎಂಜಿನಿಯರ್, ಲಿಂಗನಮಕ್ಕಿ ನಿರೀಕ್ಷೆಗೂ ಮೊದಲೇ ಹೇಮಾವತಿ ಭರ್ತಿ
ಹಾಸನ: ಹೇಮಾವತಿ ಜಲಾಶಯ 2014ರ ನಂತರ, ಅಂದರೆ 4 ವರ್ಷಗಳ ನಂತರ ಮೊದಲ ಬಾರಿಗೆ ಭರ್ತಿಯಾಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಬಿಡಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಗರಿಷ್ಠ 2922 ಎತ್ತರದ ಜಲಾಶಯದಲ್ಲಿ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ನೀರಿನ ಮಟ್ಟ 2918 ಅಡಿಗಳಿಗೆ ತಲುಪಿತ್ತು. ಒಳಹರಿವು 26,477 ಕ್ಯೂಸೆಕ್ ಇದ್ದು, ಶನಿವಾರ ಮುಂಜಾನೆಯ ವೇಳೆಗೆ ನೀರಿನ ಮಟ್ಟ 2919 ಅಡಿ ದಾಟಲಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಮಟ್ಟವನ್ನು 2919 ಅಡಿಗೆ ಕಾಯ್ದಿರಿಸಿಕೊಂಡು ಹೆಚ್ಚವರಿ ನೀರನ್ನು ಕ್ರಸ್ಟ್‌ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತದೆ. ಗರಿಷ್ಠ 37.10 ಟಿಎಂಸಿ ಸಂಗ್ರಹಣಾ ಸಾಮರ್ಥಯದ ಜಲಾಶಯದಲ್ಲಿ ಶುಕ್ರವಾರ ಸಂಜೆ ವೇಳೆಗೆ ನೀರಿನ ಸಂಗ್ರಹ 34 ಟಿಎಂಸಿ ಮೀರಿದೆ. ನಾಲೆಗಳಿಗೂ ಎರಡು ವಾರಗಳಿಂದ ನೀರು ಹರಿಸುತ್ತಿದ್ದು, ಮೂರು ನಾಲೆಗಳಲ್ಲಿ 3020 ಕ್ಯೂಸೆಕ್ ಹಾಗೂನದಿಗೆ 200 ಕ್ಯೂಸೆಕ್ ಸೇರಿ ಒಟ್ಟು 3220 ಕ್ಯೂಸೆಕ್ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಜೂ.20 ರಿಂದಲೇ ನಾಲೆಗಳಲ್ಲಿ ನೀರು ಹರಿಸಿ ಅಚ್ಚುಕಟ್ಟು ಪ್ರದೇಶದ ಕೆರೆ, ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಕಳೆದ 20 ದಿನಗಳಲ್ಲಿ ನಾಲೆಗಳಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ 3.15 ಟಿಎಂಸಿ ನೀರು ಹರಿದಿದೆ. ನದಿಯಲ್ಲಿ ಕೇವಲ 0.72 ಟಿಂಎಂಸಿ ನೀರು ಹರಿದಿದೆ ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಮೂಲಗಳು ತಿಳಿಸಿವೆ. ಈ ವರ್ಷ ದಾಖಲೆ ನಿರ್ಮಾಣ: ಹೇಮಾವತಿ ಜಲಾಶಯ ನಿರ್ಮಾಣದ ನಂತರ ಜು.15 ರೊಳಗೆ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಜಲಾಶಯದಲ್ಲಿ 1983ರಿಂದ ನೀರಿನ ಸಂಗ್ರಹಆರಂಭಿಸಿದ ನಂತರ ಜುಲೈನಲಿ ಒಂದು ಬಾರಿ ಮಾತ್ರ ಜಲಾಶಯ ಭರ್ತಿಯಾಗಿತ್ತು. 2013ರಲ್ಲಿ ಜು.26 ರಂದು ಜಲಾಶಯ ಪೂರ್ಣ ಮಟ್ಟ ತಲುಪಿತ್ತು. ವೈನಾಡಲ್ಲಿ ಮಳೆ,
ಮೈದುಂಬಿದ ಕಬಿನಿ
ಮೈಸೂರು: ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಮೈದುಂಬಿದೆ.
2284.00 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ 45 ಸಾವಿರ ಕ್ಯೂಸೆಕ್‌ಗಳಿಗೂ ಹೆಚ್ಚಿನ ಒಳ ಹರಿವಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟವನ್ನು 2282 ಅಡಿಗಳಿಗೆ ಕಾದಿರಿಸಿಕೊಳ್ಳಲಾಗಿದೆ. ನಾಲೆಗಳಿಗೆ ಒಂದು ಸಾವಿರ ಕ್ಯೂಸೆಕ್ ಹಾಗೂ ನದಿಗೆ 46250 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. 15.67 ಟಿಎಂಸಿಬಳಸಬಹುದಾದ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಸದ್ಯ 14.59 ಟಿಎಂಸಿ ಬಳಸಬಹುದಾದ ನೀರು ಸಂಗ್ರಹವಿದೆ. ಕಳೆದ ವರ್ಷ ಈ ದಿನಾಂಕಕ್ಕೆ ಜಲಾಶಯದ ನೀರಿನಮಟ್ಟ 2263 ಅಡಿಗಳಿದ್ದು, 4.91 ಟಿಎಂಸಿ ನೀರು ಸಂಗ್ರಹವಾಗಿತ್ತು. 20ಕ್ಕೆ ಸಿಎಂ ಬಾಗಿನ: ಮೈದುಂಬಿ ನಿಂತಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಅವರು ಜು.20ರಂದು ಬಾಗಿನ ಅರ್ಪಿಸಲಿದ್ದಾರೆ. ಕಬಿನಿ
ಗರಿಷ್ಠ ಮಟ್ಟ 2284ಅಡಿ
ಇಂದಿನ ಮಟ್ಟ 2282ಅಡಿ
ಒಳಹರಿವು 45000ಕ್ಯು
ಹೊರಹರಿವು 40000ಕ್ಯು ನಾಲ್ಕೂ ಕ್ರಸ್ಟ್‌ಗಳನ್ನು ಮುಚ್ಚಿದರೆ 24ಗಂಟೆಯಲ್ಲಿ ಜಲಾಶಯ ಭರ್ತಿಯಾಗುತ್ತದೆ. ಒಳ ಹರಿವು ಹೆಚ್ಚಿರುವುದರಿಂದ ಜಲಾಶಯದ ಮಟ್ಟವನ್ನು 2282 ಅಡಿಗೆ ಕಾದಿರಿಸಿಕೊಳ್ಳಲಾಗಿದೆ.
– ಪುಟ್ಟಶೇಷಗಿರಿ, ಸಹಾಯಕ
ಕಾರ್ಯಪಾಲಕ ಇಂಜಿನಿಯರ್,ಕಬಿನಿ ಜಲಾಶಯ ಭದ್ರಾ ಜಲಾಶಯ ಭರ್ತಿಗೆ 24 ಅಡಿ ಬಾಕಿ
ಶಿವಮೊಗ್ಗ: ಮಲೆನಾಡು ಹಾಗೂ ಬಯಲುಸೀಮೆ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ನೀರಿನ ಮಟ್ಟ ಏರುತ್ತಲಿದ್ದು ಮೂರು ವರ್ಷದಿಂದ ನೀರಿಲ್ಲದೆ ಫಸಲು ತೆಗೆಯಲಾಗದ ರೈತರಲ್ಲಿ ಈ ಬಾರಿ ಸಂತಸ ಮೂಡಿಸಿದೆ.
2014ರಲ್ಲಿ ಈ ಅಣೆಕಟ್ಟು ಭರ್ತಿಯಾಗಿತ್ತು. ಅಲ್ಲಿಂದ ಮೂರು ವರ್ಷ ಬರ ಎದುರಾಗಿತ್ತು. 2017ರಲ್ಲಿ 172 ಅಡಿವರೆಗೂ ಭರ್ತಿಯಾಗಿತ್ತು. 24 ಅಡಿ ಬಾಕಿ: ಜುಲೈ 13ರ ಅಂಕಿ- ಅಂಶದ ಪ್ರಕಾರ ಪ್ರಸ್ತುತ ಡ್ಯಾಂನಲ್ಲಿ 41 ಟಿಎಂಸಿ (164.6 ಅಡಿ) ನೀರಿದೆ. ಪೂರ್ಣ ಸಾರ್ಮರ್ಥ್ಯ 71 ಟಿಎಂಸಿ(186 ಅಡಿ). 13.832 ಟಿಎಂಸಿ ಡೆಡ್ ಸ್ಟೋರೇಜ್. ಒಟ್ಟು 28935 ಕ್ಯೂಸೆಕ್ ಒಳ ಹರಿವು ಇದ್ದು, 1679 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನದಲ್ಲಿ 18 ಟಿಎಂಸಿ ನೀರಿನ ಸಂಗ್ರಹ ಇತ್ತು. ಭದ್ರಾ ಡ್ಯಾಂನಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟರೆ ಮಾತ್ರ ನದಿ ಪಾತ್ರದ ಜನರಿಗೆ ತೊಂದರೆಯಾಗಲಿದೆ. ಮಳೆ ಅವಘಡಗಳನ್ನು ಎದುರಿಸಲು ಜಿಲ್ಲಾ ಧಿಕಾರಿ ಎಂ. ಲೋಕೇಶ್ ಈಗಾಗಲೇ ಸೂಚನೆ ನೀಡಿದ್ದಾರೆ. ಭದ್ರಾ
ಗರಿಷ್ಠ ಮಟ್ಟ 186ಅಡಿ
ಇಂದಿನ ಮಟ್ಟ 164.6ಅಡಿ
ಒಳಹರಿವು 28935ಕ್ಯು
ಹೊರಹರಿವು 1679ಕ್ಯು ಮಳೆಯಾಗುತ್ತಿರುವುದರಿಂದ ಎಡ ನಾಲೆಗೆ ನೀರು ಬಿಟ್ಟಿಲ್ಲ. ಬಲದಂಡೆ ನಾಲೆಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಡ್ಯಾಂ ಈ ತಿಂಗಳು ತುಂಬಬಹುದು. ಈ ಬಾರಿ ಬೇಸಿಗೆ ಬೆಳೆಗೂ ನೀರು ಬಿಡಬಹುದು.
– ಮಂಜುನಾಥ್
ಎಇಇ, ಭದ್ರಾ ಡ್ಯಾಂ ತುಂಗಭದ್ರಾ ಭರ್ತಿಗೆ 13 ಅಡಿ ಬಾಕಿ
ಬಳ್ಳಾರಿ: ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ 59.452 ಟಿಎಂಸಿ ನೀರು ಸಂಗ್ರಹವಿದೆ. ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ 59542 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 160 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮುಂದೆಯೂ ಒಳಹರಿವು ಇದೇ ಪ್ರಮಾಣವನ್ನು ಕಾಯ್ದುಕೊಂಡಲ್ಲಿ ಮುಂದಿನ 8 ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಪ್ರಸ್ತುತ ಜಲಾಶಯ ಭರ್ತಿಗೆ 13 ಅಡಿ ಮಾತ್ರ ಬಾಕಿಯಿದೆ.
ತುಂಗಭದ್ರಾ ಜಲಾಶಯದಿಂದ ಆರಂಭದಿಂದಲೂ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿತ್ತು. ಬಳ್ಳಾರಿ ಭಾಗದಲ್ಲಿ ಕೆಲವೊಮ್ಮೆ ಮೂರು ಬೆಳೆ ತೆಗೆದಿರುವ ಉದಾಹರಣೆಗಳೂ ಇವೆ.
ಆದರೆ, ಕಳೆದ 4 ವರ್ಷ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಒಂದು ಬೆಳೆಗೂ ಸಮರ್ಪಕ ನೀರು ಹರಿಸುವುದು ಕಷ್ಟವಾಗಿತ್ತು. ಈ ಬಾರಿ ಜೂ.2 ರಿಂದಲೇ ಮುಂಗಾರು ಹಂಗಾಮು ಉತ್ತಮ ಆರಂಭ ಪಡೆದಿದ್ದು, ಕಳೆದ 45 ದಿನಗಳಲ್ಲಿ 60 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಯದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಹರಿಸಿಲ್ಲ. ತುಂಗಭದ್ರಾ
ಗರಿಷ್ಠ ಮಟ್ಟ 1633ಅಡಿ
ಇಂದಿನ ಮಟ್ಟ 1620.45ಅಡಿ
ಒಳಹರಿವು 59542ಕ್ಯು
ಹೊರಹರಿವು 160ಕ್ಯು ಯಗಚಿ ತುಂಬುವುದು ಡೌಟ್
ಹಾಸನ: ಹೇಮಾವತಿ ಜಲಾನಯದ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿದು ಜಲಾಶಯ ಭರ್ತಿಯಾಗಿದ್ದರೂ ಹಾಸನ ಜಿಲ್ಲೆಯ ಮತ್ತೂಂದು ಪ್ರಮುಖ ಜಲಾಶಯ ಯಗಚಿ, ಈವರೆಗೆ ಶೇ.50ರಷ್ಟೂ ಭರ್ತಿಯಾಗಿಲ್ಲ.
ಬೇಲೂರು ಬಳಿ ನಿರ್ಮಿಸಿರುವ ಯಗಚಿ ಜಲಾಶಯ 2016 ರಿಂದ ಇದುವರೆಗೂ ಭರ್ತಿಯಾಗಿಲ್ಲ. ಗರಿಷ್ಠ 3.60 ಟಿಎಂಸಿ ಸಂಗ್ರಣಾ ಸಾಮರ್ಥಯದ ಜಲಾಶಯದಲ್ಲಿ ಈ ವರೆಗೆ ಕೇವಲ 1.72 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು 874 ಕ್ಯೂಸೆಕ್ ಇದ್ದು, ಜಲಾಶಯದಲ್ಲಿ 960.30 ಮೀಟರ್‌ವರೆಗೆ ನೀರಿದೆ. ವಾಣಿ ವಿಲಾಸ ಸಾಗರದಲ್ಲಿ
ಕೇವಲ 0.09 ಟಿಎಂಸಿ ನೀರು
ಚಿತ್ರದುರ್ಗ: ರಾಜ್ಯದ ಪ್ರಮುಖ ಡ್ಯಾಂಗಳಲ್ಲೊಂದಾದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಏಪ್ರಿಲ್ ತಿಂಗಳಲ್ಲಿ 0.09 ಟಿಎಂಸಿ (ಅರ್ಧ ಅಡಿ) ನೀರು ಹರಿದು ಬಂದಿದ್ದು ಬಿಟ್ಟರೆ ಈವರೆಗೆ ಹನಿ ನೀರು ಡ್ಯಾಂಗೆ ಬಂದಿಲ್ಲ.
ಕಳೆದ ವರ್ಷ 0.68 ಟಿಎಂಸಿ ನೀರು ಅಂದರೆ ನಾಲ್ಕೂವರೆ ಅಡಿ ಮಾತ್ರ ಬಂದಿತ್ತು. ಜು.13ರಂದು ನೀರಿನ ಮಟ್ಟ 61.30 ಅಡಿಗಳಿದೆ. 60 ಅಡಿಗೆ ಡೆಡ್ ಸ್ಟೋರೇಜ್ ಇದ್ದು, ಆ ನೀರನ್ನು ಯಾವುದೇ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ಮಾಹಿತಿ: ಶರತ್ ಭದ್ರಾವತಿ, ನಂಜುಂಡೇಗೌಡ, ಮಂಡ್ಯ ಮಂಜುನಾಥ್, ಹರಿಯಬ್ಬೆ ಹೆಂಜಾರಪ್ಪ, ವೆಂಕೋಬಿ ಸಂಗನಕಲ್ಲು, ಜಿ.ಎಸ್.ಕಮತರ, ಎಸ್.ಕೆ. ಲಕ್ಷ್ಮೀಪ್ರಸಾದ್, ಗಿರೀಶ್ ಹುಣಸೂರು.