ಬಂಟ್ವಾಳ: ಸಜೀಪಮೂಡ- ಅಮೂrರು ಗ್ರಾಮವನ್ನು ಬೆಸೆಯುವ ದೃಷ್ಟಿ ಯಿಂದ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿರು ಸೇತುವೆ ಹಾಗೂ ಕಿಂಡಿ ಅಣೆಕಟ್ಟು (ಬ್ರಿಡ್ಜ್ ಕಂ ಬ್ಯಾರೇಜ್) ನಿರ್ಮಾಣವಾಗಿದ್ದು, ಪ್ರಸ್ತುತ ಸಂಪರ್ಕಕ್ಕೆ ಅವಕಾಶ ಸಿಗುವ ಜತೆಗೆ ಅಣೆಕಟ್ಟಿಗೆ ಹಲಗೆ ಅಳವಡಿಕೆಯಿಂದ ಭಾರೀ ನೀರು ನಿಂತಿದೆ.
ಸಣ್ಣ ನೀರಾವರಿ ಇಲಾಖೆಯ ಒಂದು ಕೋ.ರೂ. ವೆಚ್ಚದಲ್ಲಿ ಅಮೂrರು ಗ್ರಾಮದ ಕೃಷ್ಣಾಪುರದಲ್ಲಿ ಕಳೆದ ಬೇಸಗೆಯಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಈ ವರ್ಷ ಮೊದಲ ಬಾರಿಗೆ ಹಲಗೆ ಅಳವಡಿಸಲಾಗಿದೆ. ಕಳೆದ 2 ತಿಂಗಳ ಹಿಂದೆ ಇಲ್ಲಿ ಹಲಗೆ ಹಾಕಲಾಗಿದ್ದು, ಕಳೆದ 15 ದಿನಗಳ ಹಿಂದೆ ಮಳೆ ಬಂದ ಸಂದರ್ಭದಲ್ಲಿ ಒಮ್ಮೆ ನೀರನ್ನು ಹೊರ ಬಿಡಲಾಗಿತ್ತು.
3.25 ಮೀ. ಎತ್ತರಕ್ಕೆ ಪಿಲ್ಲರ್ ಅಳವಡಿಕೆ :
ಸುಮಾರು 27.10 ಮೀಟರ್ ಅಗಲದ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸ ಲಾಗಿದ್ದು, 3.25 ಮೀ. ಎತ್ತರಕ್ಕೆ ಪಿಲ್ಲರ್‌ಗಳ ಅಳವಡಿಸಲಾಗಿದೆ. ಪ್ರಸ್ತುತ ಇಲ್ಲಿ ಹಲಗೆಯ ಬದಲು ಪೈಬರ್ ತಂತ್ರಜ್ಞಾನದ ಹಲಗೆ(ಎಫ್‌ಆರ್‌ಪಿ)ಯನ್ನು ಅಳವಡಿಸಿರುವುದು ವಿಶೇಷವಾಗಿದೆ. ಸ್ಥಳೀಯರೇ ಈ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಹಾಗೂ ತೆಗೆಯುವ ಕೆಲಸ ಮಾಡಿದ್ದಾರೆ.
ಸರಕಾರವು ನೀರಿನ ಅನುಕೂಲತೆಯ ಜತೆಗೆ ಜನರಿಗೆ ಸಂಪರ್ಕಕ್ಕೂ ಅನು ಕೂಲವಾಗುವ ದೃಷ್ಟಿಯಿಂದ ಇಂತಹ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿದ್ದು, ಪ್ರಸ್ತುತ ಕೃಷ್ಣಾಪುರದಲ್ಲಿ ಮೊದಲ ವರ್ಷದಲ್ಲಿ ಹಲಗೆ ಹಾಕಲಾಗಿದೆ. ಹಲಗೆ ಹಾಕಿದ ಬಳಿಕ ನೀರಿನ ಸಂಗ್ರಹವೂ ಉತ್ತಮವಾಗಿದ್ದು, ಕೃಷಿಕರಿಗೆ ಅನು ಕೂಲವಾಗಲಿದೆ.
-ಶಿವಪ್ರಸನ್ನ, ಸ. ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.