ಮಂಗಳೂರು: ಸುರತ್ಕಲ್ ಕೃಷ್ಣಾಪುರದಲ್ಲಿ ಶನಿವಾರ ರಾತ್ರಿ ನಡೆದ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿ ಕುಮಾರ್ ತಿಳಿದ್ದಾರೆ.
ಬಂಧಿತನನ್ನು ಸುರತ್ಕಲ್ ಕಾಟಪಳ್ಳದ ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಎಂದು ಗುರುತಿಸಲಾಗಿದೆ.
ಈ ಮೂಲಕ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಪಾತ್ರವನ್ನು ಬಹಿರಂಗ ಪಡಿಸಿಲ್ಲ.
ಇದನ್ನೂ ಓದಿ:ಚೆಂಡೆ ವಾದನ ಬಡಿಯುತ್ತಾ ಮದುವೆ ಮಂಟಪಕ್ಕೆ ಬಂದ ವಧು: ವಿಡಿಯೋ ವೈರಲ್
ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಂಗಡಿ ಕೃಷ್ಣಾಪುರ ನಿವಾಸಿ ಶೈಲೇಶ್ ಯಾನೇ ಶೈಲೇಶ್ ಪೂಜಾರಿ (21), ಉಡುಪಿ ಹೆಜಮಾಡಿ ನಿವಾಸಿ ಸವೀನ್ ಕಾಂಚನ್ ಯಾನೇ ಮುನ್ನ (24), ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಎಂಬವನ್ನು ಸೋಮವಾರ ಬಂಧಿಸಲಾಗಿತ್ತು.