Advertisement

Krishnam Pranaya Sakhi: ಕೃಷ್ಣ 25ರ ಸಂಭ್ರಮ; ಚಿತ್ರ ಗೆದ್ದಿದೆ, ಕಲೆಕ್ಷನ್‌ ಹೇಳಲ್ಲ..

02:02 PM Sep 12, 2024 | Team Udayavani |

ಒಂದು ಚಿತ್ರ ಜನಮೆಚ್ಚುಗೆಯ ಜೊತೆಗೆ ಚಿತ್ರಮಂದಿರಗಳಲ್ಲಿ ಎರಡು, ಮೂರು ವಾರ ಪ್ರದರ್ಶನವಾದರೆ ಅದೊಂದು ಯಶಸ್ಸು ಹಾಗೂ ಉತ್ತಮ ಬೆಳವಣಿಗೆ ಎನ್ನಬಹುದು. ಕಳೆದ ಆಗಸ್ಟ್‌ನಲ್ಲಿ ತೆರೆಕಂಡಿದ್ದ “ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಈಗಾಗಲೇ 25 ದಿನಗಳನ್ನು ಮುಗಿಸಿ, ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

Advertisement

ಇತ್ತೀಚೆಗೆ ಈ ಖುಷಿಯನ್ನು ಚಿತ್ರತಂಡ ಸಂಭ್ರಮಿಸಿತು. ನಾಯಕ ನಟ ಗಣೇಶ್‌, (Ganesh) ನಟಿಯರಾದ ಮಾಳವಿಕಾ ನಾಯರ್‌, ಶರಣ್ಯಾ ಶೆಟ್ಟಿ, ಉಳಿದ ಕಲಾವಿದರಾದ ರಂಗಾಯಣ ರಘು, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ಗಿರಿ ಶಿವಣ್ಣ ಮುಂತಾದವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರ 25ದಿನ ಪೂರೈಸಿದ ಹಿನ್ನೆಲೆ, ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ, ತಂತ್ರಜ್ಞರಿಗೆ ಸ್ಮರಣಿಕೆ ನೀಡಿ  ಅಭಿನಂದಿಸಲಾಯಿತು. ನಂತರ ಎಲ್ಲರೂ ತಮ್ಮ ಅನುಭವ, ಚಿತ್ರದ ಯಶಸ್ಸಿನ ಬಗ್ಗೆ ಮಾತು ಹಂಚಿ ಕೊಂಡರು.

ಚಿತ್ರದ ಕಲೆಕ್ಷನ್‌ ಬಗ್ಗೆ ಕೇಳಿದಾಗ, “ಇನ್ನೂ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ವಾಗುತ್ತಿದೆ. ಹಾಗಾಗಿ ಸ್ಪಷ್ಟ ಲೆಕ್ಕ ಬರಬೇಕಿದೆ’ ಎಂಬುದು ತಂಡದ ಉತ್ತÃ

ಶ್ರೀನಿವಾಸ್‌ ರಾಜು ನಿರ್ದೇಶನದ ಈ ಚಿತ್ರ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಸಫ‌ಲ ವಾಗಿದೆ. ಜೊತೆಗೆ ಅರ್ಜುನ್‌ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಹಾಡು ಗಳು, ಅದರಲ್ಲೂ “ದ್ವಾಪರ’ ಹಾಡು ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರವನ್ನು ಪ್ರಶಾಂತ್‌ ಆರ್‌ ರುದ್ರಪ್ಪ ನಿರ್ಮಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.