Advertisement
ಕೃಷ್ಣಾ ಸೋಬ್ತಿ ಸೃಷ್ಟಿಸಿದ್ದು ಹತ್ತಾರು ಕೃತಿಗಳು ಮಾತ್ರ. ಆದರೆ, ಎಲ್ಲವೂ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಹದ್ದು, ಎಂಟೆದೆಯ ಕಥಾಪಾತ್ರಗಳು, ಕೆಲವಂತೂ ಆ ಕಾಲಕ್ಕೆ ಬಂಡಾಯ ಅನ್ನಿಸುವಂತಹದ್ದು. ಸಣ್ಣ ಕಥೆಗಳಿಂದ ತಮ್ಮ ಸಾಹಿತ್ಯ ಜೀವನವನ್ನು ಶುರು ಮಾಡಿದ ಸೋಬ್ತಿ ಟಿಬೆಟಿನ ಧರ್ಮಗುರುಗಳ ಕಥೆಯಾದ ಲಾಮಾ, ನಫೀಸ, ಭಾರತ-ಪಾಕಿಸ್ತಾನ ವಿಭಜನೆಯೊಳಗೊಂಡ ಕಥೆ ಸಿಕ್ಕಾ ಬದಲ್ ಗಯಾ, ಬಾದಲೊಂ ಕೇ Nರೆ ಗಳೇ ಮುಖ್ಯವಾದ ಸಣ್ಣಕಥೆಗಳು. ಅಲ್ಲದೇ ಹಲವು ಪ್ರಶಸ್ತಿ ವಿಜೇತ ಕಾದಂಬರಿಗಳನ್ನೂ ಬರೆದರು. ಸೋಬಿ¤ ಹಶ್ಮತ್ ಎನ್ನುವ ಹೆಸರಿನಲ್ಲೂ ಬರೆದರು, ಹಮ್ ಹಶ್ಮತ್ ಅವರ ಸ್ನೇಹಿತರ ಮತ್ತು ಇತರ ಲೇಖಕರ ಕುರಿತು ಬರೆದ ಲೇಖನಗಳ ಸಂಕಲನವಾಗಿದೆ.
Related Articles
.
.
ಕೃಷ್ಣಾ ಸೋಬಿ¤ 1925, ಫೆಬ್ರವರಿ 18ರಂದು ಈಗ ಪಾಕಿಸ್ಥಾನದಲ್ಲಿರುವ ಪಂಜಾಬ್-ಗುಜರಾತಿನಲ್ಲಿ ಜನಿಸಿದ್ದು, ಭಾರತ, ಪಾಕಿಸ್ತಾನ ವಿಭಾಗವಾಗುತ್ತಿದ್ದಂತೆ ಹೊಸ ದೆಹಲಿಗೆ ವಲಸೆ ಬಂದರು, ಅಲ್ಲಿಂದಲೇ ಶುರುವಾಯಿತು ಸೋಬಿ¤ಯ ಸಾಹಿತ್ಯ ಕೃಷಿ. ಕೃಷ್ಣಾ ಸೋಬಿ¤ಯ ಕುಟುಂಬದವರು ಭಾರತ- ಬ್ರಿಟಿಷ್ ಸರಕಾರಿ ಕೆಲಸದಲ್ಲಿದ್ದರೆ, ಸೋಬಿ¤ ಎರಡು ವರ್ಷ ರಾಜಸ್ತಾನದ ರಾಜನ ಮೊಮ್ಮಗನ ಸೇವೆಯಲ್ಲಿದ್ದರು. ಸೋಬಿ¤ಗೀಗ 93 ವರ್ಷ. ನವದೆಹಲಿಯಲ್ಲಿ ಗಂಡ ಶಿವನಾಥನೊಂದಿಗಿ¨ªಾರೆ. ಸೋಬಿ¤ ಶಿವನಾಥರನ್ನು ಮದುವೆಯಾದದ್ದೇ ತಮ್ಮ 70ನೆಯ ವಯಸ್ಸಿನಲ್ಲಿ.
Advertisement
ಸೋಬಿ¤ ಹಿಂದಿ, ಉರ್ದು ಮತ್ತು ಪಂಜಾಬಿ ಶೈಲಿಯನ್ನು ಅರಗಿಸಿಕೊಂಡು ತಮ್ಮದೇ ಹೊಸ ಶೈಲಿಯನ್ನು ಅಳವಡಿಸಿಕೊಂಡರು, ನಿರೂಪಣ ಶೈಲಿಯೂ ಭಿನ್ನ. ಭಾರತ-ಪಾಕಿಸ್ತಾನ ವಿಭಜನೆ, ಬದಲಾಗುತ್ತಿರುವ ಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧ, ಕಳೆದುಹೋಗುತ್ತಿರುವ ಮಾನವ ಮೌಲ್ಯ ಎಲ್ಲವೂ ಸೋಬಿ¤ ತಮ್ಮ ಕೃತಿಗಳಿಗೆ ಆರಿಸಿದ ವಿಷಯಗಳು. ಅವರ ಹಲವು ಕೃತಿಗಳು ಇಂಗ್ಲೀಷ್ ಮತ್ತು ಉರ್ದುವಿನಲ್ಲೂ ಲಭ್ಯ, ಇನ್ನೂ ಕೆಲವು ಕೃತಿಗಳು ಸ್ವೀಡಿಶ್ ಮತ್ತು ರಷ್ಯನ್ ಭಾಷೆಗೂ ಭಾಷಾಂತರಿಸಲ್ಪಟ್ಟಿವೆ. ಸೋಬಿ¤ಯವರ ಕೃತಿಗಳಲ್ಲಿ ಪ್ರಾಂತೀಯ ಭಾಷೆಯ ಸೊಗಡು ಮುಖ್ಯ ಆಕರ್ಷಣೆ ಯÇÉೊಂದು. ಆದರೆ, ಇದೇ ಅವರ ಕೃತಿಗಳ ಭಾಷಾಂತರಕ್ಕೆ ತಂದೊಡ್ಡುವ ಸವಾಲು.
ಲೇಖಕಿಯರ ಜಗಳಸೋಬಿ¤ ಮತ್ತು ಸೋಬಿ¤ಯ ಕೃತಿಗಳ ವಿಚಾರ ಬಂದಾಗ ಅವರ ಕಾದಂಬರಿ ಝಿಂದಗಿ ನಾಮ ದ ಹುಟ್ಟು, ಬೆಳವಣಿಗೆಯ ಬಗ್ಗೆ ಬರೆಯದಿದ್ದರೆ ಹೇಗೆ. ಈ ಕಾದಂಬರಿಯ ಮೊದಲ ಹೆಸರು ಚನ್ನಾವಾಗಿತ್ತು. ಇದನ್ನು ಮೊದಲಿಗೆ 1952ರಲ್ಲಿ ಪ್ರಕಟಣೆಗೆ ಕೊಟ್ಟಾಗ ಅಲಹಾಬಾದಿನ ಮುದ್ರಕರು ಕಾದಂಬರಿಯ ಬಾಷೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದರು, ಇದನ್ನು ಅರಿತ ಸೋಬಿ¤ ಕಾದಂಬರಿಯ ಪ್ರಕಟಣೆಯನ್ನು ನಿಲ್ಲಿಸಿದರು. ಪುನಃ ಕಾದಂಬರಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿ, ಝಿಂದಗಿನಾಮ-ಝಿಂದಾ ರುಕ್ ಎಂದು ಹೊಸ ನಾಮಕರಣ ಮಾಡಿ 1979ರಲ್ಲಿ ಪ್ರಕಟಿಸಿದರು. ಝಿಂದಗಿನಾಮ 1990ರ ಸುಮಾರಿನ ಪಂಜಾಬಿನ ಹಳ್ಳಿಯ ಜನಜೀವನದ ಸುತ್ತ ಹೆಣೆದ ಕಥಾಹಂದರವಾಗಿದ್ದು, ಇದರಲ್ಲಿ ಸೋಬಿ¤ಯ ರಾಜಕೀಯ ಹಾಗೂ ಸಾಮಾಜಿಕ ಕಳಿಕಳಿಯು ಎದ್ದು ಕಾಣಿಸುತ್ತದೆ, ಇದಕ್ಕೆ 1980ರಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು. ಝಿಂದಗಿನಾಮ-ಝಿಂದಾ ರುಕ್ ಪ್ರಕಟಣೆಗೊಂಡ ಕೆಲವೇ ವರ್ಷಗಳಲ್ಲಿ ಇನ್ನೊಬ್ಬ ಪ್ರಖ್ಯಾತ ಹಿಂದಿ ಸಾಹಿತಿ ಅಮೃತಾ ಪ್ರೀತಮ… ಹರದತ್ ಕಾ ಝಿಂದಗಿನಾಮ ಎಂಬ ಕೃತಿಯನ್ನು ಹೊರತಂದರು. ಅಲ್ಲಿಂದ ಶುರುವಾಯಿತು, ಹಿಂದಿಯ ಇಬ್ಬರು ಮಹಾ ಸಾಹಿತಿಗಳ ಜಟಾಪಟಿ, ಅಮೃತಾ ಪ್ರೀತಮ್ ತಮ್ಮ ಕಾಪಿರೈಟ್‌ನ್ನು ಮುರಿದರೆಂದು, ತಮ್ಮ ಕೃತಿಯ ಶೀರ್ಷಿಕೆಯನ್ನು ಉಪಯೋಗಿಸಿದರೆಂದು ಸೋಬಿ¤ ಕೋರ್ಟಿನ ಮೆಟ್ಟಿಲನ್ನು ಹತ್ತಿದರು, ಕೇಸು ಬರೋಬ್ಬರಿ 26 ವರ್ಷಗಳ ಕಾಲ ಕೋರ್ಟಿನಲ್ಲಿತ್ತು, ಈ ಮಧ್ಯೆ ಕೋರ್ಟಿನಲ್ಲಿ ಅಮೃತಾ ಪ್ರೀತಮ್ ಮತ್ತು ಸೋಬಿ¤ಯ ಮೂಲಕೃತಿಗಳಿಟ್ಟ ಪೆಟ್ಟಿಗೆಯೇ ಮಂಗಮಾಯವಾಯಿತು. ಮುಂದೆ ಕೋರ್ಟ್ ಅಮೃತಾ ಪ್ರೀತಮ್ ಪರವಾಗಿ ತೀರ್ಪು ಕೊಟ್ಟಾಗ ಅಮೃತಾ ಪ್ರೀತಮ್ ತೀರಿಕೊಂಡು ವರ್ಷ ಆರು ಕಳೆದಿತ್ತು. – ಗೀತಾ ಕುಂದಾಪುರ