Advertisement

ಕೃಷ್ಣಾ ನದಿ ದುರಂತ:ದೋಣಿ  ಸಂಚಾರಕ್ಕೆ ಪರವಾನಗಿ ಇರಲಿಲ್ಲ

06:10 AM Nov 14, 2017 | Team Udayavani |

ಅಮರಾವತಿ: ಆಂಧ್ರಪ್ರದೇಶದ ವಿಜಯವಾಡ ಸಮೀಪ ಕೃಷ್ಣಾ ನದಿಯಲ್ಲಿ ಭಾನುವಾರ ಸಂಭವಿಸಿದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ದೋಣಿ ನಡೆಸುವಾತನಿಗೆ ಪರವಾನಗಿ ಇರಲಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಜತೆಗೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅದರ ನಿರ್ವಾಹಕನನ್ನು ಬಂಧಿಸಲಾಗಿದೆ. ಈ ನಡುವೆ, ದುರಂತದಲ್ಲಿ ಅಸುನೀಗಿದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ ಮೂರು ದೇಹಗಳಿಗಾಗಿ ಶೋಧ ನಡೆದಿದೆ. ಈ ಪೈಕಿ ದೋಣಿಯ ಸಿಬ್ಬಂದಿಯೂ ಇದ್ದಾರೆ.  ಅಸುನೀಗಿದವರ ಪೈಕಿ 9 ಮಹಿಳೆಯರು, ಹದಿ ಹರೆಯದ ಬಾಲಕ ಸೇರಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ ವರದಿ ಮಾಡಲು ಹೋದ ಮಾಧ್ಯಮಗಳ ವಿರುದ್ಧ ಅಧಿಕಾರಿಯೊಬ್ಬ ದರ್ಪದಿಂದ ನಡೆದುಕೊಂಡ ಘಟನೆಯೂ ನಡೆದಿದೆ.

Advertisement

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿ, ಹೆಚ್ಚು ಜನರನ್ನು ಸಾಗಿಸಬೇಕು ಎಂದು ನಿರ್ವಾಹಕ ಆಶೆಯೇ ದುರಂತಕ್ಕೆ ಕಾರಣ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ಹಿರಿಯ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನೊಳಗೊಂಡ ತಂಡ ತನಿಖೆ ನಡೆಸಲಿದೆ. ಪಿಎಂ ಮೋದಿ ಕೂಡ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next