Advertisement

Chikkodi: ಅಪಾಯದ ಹಂತಕ್ಕೆ ತಲುಪಿದ ಕೃಷ್ಣಾ ನದಿ… ಜಿಲ್ಲಾಡಳಿತದಿಂದ ಹೈ ಅಲರ್ಟ್

11:47 AM Jul 29, 2024 | Team Udayavani |

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಎರಡು ದಿನ ತಗ್ಗಿದ್ದ ಮಳೆ ಸೋಮವಾರ ಬೆಳಿಗ್ಗೆ ಮತ್ತೆ ಆರಂಭವಾಗಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ 2.92 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಮೂಲಕ ಡೇಂಜರ ಹಂತ ತಲುಪಿದೆ.

Advertisement

ಈಗಾಗಲೇ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ. ಕಾಗವಾಡ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಆಯ್ದ ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ಸರ್ಕಾರ ಕಾಳಜಿ ಕೇಂದ್ರ ಆರಂಭ ಮಾಡಿ ಸಂತ್ರಸ್ತರಿಗೆ ಸೌಕರ್ಯ ಒದಗಿಸಿದೆ. ಆದರೆ ಇನ್ನೂ ಹೆಚ್ಚಿನ ನೀರು ಬಂದರೆ ನದಿ ತೀರದ ವ್ಯಾಪ್ತಿಯ ಗ್ರಾಮ ಗ್ರಾಮಗಳನ್ನೇ ಸ್ಥಳಾಂತರ ಮಾಡುವತ್ತ ಜಿಲ್ಲಾಡಳಿತ ಸಿದ್ದತೆಯಲ್ಲಿದೆ.

ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ ಮೂಲಕ ಕೃಷ್ಣಾ ನದಿಗೆ 2.47 ಲಕ್ಷ ನೀರು ಬರುತ್ತಿದೆ. ವೇಧಗಂಗಾ ಮತ್ತು ದೂಧಗಂಗಾ ನದಿ ಮೂಲಕ 49 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಒಟ್ಟಾರೆ 2.97 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ ಕೃಷ್ಣಾ ನದಿಗೆ 2.90 ಲಕ್ಷ ಕ್ಯೂಸೆಕ್ ನೀರು ಬಂದರೆ ಅದು ಡೇಂಜರ ಹಂತ ಎಂದು ಪರಿಗಣಿಸಿದೆ. ಈಗ ನದಿ ಡೇಂಜರ ಹಂತಕ್ಕೆ ಬಂದಿದೆ. 3 ಲಕ್ಷ ಕ್ಕೂ ಅಧಿಕ ನೀರು ಬಂದರೆ ಸ್ಥಳಾಂತರ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜಾಗಲಿದೆ.

ಇದನ್ನೂ ಓದಿ: ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ 10ನೇ ದಿನಕ್ಕೆ; ಕರ್ನಾಟಕ ಕರಾವಳಿಗೆ ಅಪಾಯವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next