Advertisement
ಭಾನುವಾರ ಉದಯವಾಣಿ ಪತ್ರಿಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರು ಕ್ರಮೇಣವಾಗಿ ಇಳಿಮುಖವಾಗುತ್ತಿದ್ದಂತೆ ನಾಲ್ಕೈದು ಕುಟುಂಬಗಳ ಸದಸ್ಯರು ಗ್ರಾಮಕ್ಕೆ ಮರಳಿ ಮನೆಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು.
Related Articles
Advertisement
ಕೃಷ್ಣಾ ನದಿಗೆ ಪ್ರವಾಹ ಉಂಟಾದ ಕೂಡಲೇ ನದಿ ಈ ಗ್ರಾಮವನ್ನು ಸುತ್ತುವರೆಯುತ್ತದೆ. ಗ್ರಾಮದ ಅನೇಕ ಮನೆಗಳು ನೀರಿನಲ್ಲಿ ನಿಲ್ಲುತ್ತವೆ.
2004 ರಿಂದ ಇಲ್ಲಿಯವರೆಗೆ ಈ ಗ್ರಾಮದ ಜನರು ಶಾಶ್ವತ ನೆಲೆಗಾಗಿ ಹೋರಾಡುತ್ತಿದ್ದಾರೆ. ಆದರೆ ಹಲವಾರು ಸಮಸ್ಯೆಗಳಿಂದಾಗಿ ಈ ಗ್ರಾಮ ಸ್ಥಳಾಂತರವಾಗುತ್ತಿಲ್ಲ. ನಾವು ಕೇಳಿದ ಸ್ಥಳದಲ್ಲಿಯೇ ನಮಗೆ ಜಾಗವನ್ನು ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 2009 ರಲ್ಲಿ ಇಲ್ಲಿಯ ಮನೆಗಳಿಗೆ ಪರಿಹಾರ ಧನ ನೀಡಲಾಗಿದೆ. ಆದರೆ ಮನೆಗಳನ್ನು ಕಟ್ಟಿಕೊಳ್ಳಲು ಸ್ಥಳವನ್ನು ನೀಡಿಲ್ಲ.
ನಮಗ ಒಂದು ಶಾಶ್ವತ ಜಾಗಾ ಕೊಡ್ರಿ ಪತ್ರಾಸ ಶೆಡ್ ಮಾಡಿಕೊಂಡು ಇರತಿವ್ರಿ ಎನ್ನುತ್ತಿದ್ದಾರೆ. 2019 ರಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಈ ಗ್ರಾಮದ ಮನೆಗಳು ಒಂಭತ್ತು ದಿನಗಳ ಕಾಲ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದ್ದವು. ಪ್ರವಾಹಕ್ಕೆ ಮತ್ತೆ ಮನೆಗಳು ಹಾಳಾಗುತ್ತವೆ ಎಂದು ಇಲ್ಲಿಯವರೆಗೂ ಅವುಗಳನ್ನು ರಿಪೇರಿ ಮಾಡಿಕೊಂಡಿಲ್ಲ. ಗೋಡೆಗಳು ಮತ್ತು ಮೇಲ್ಛಾವಣಿಗಳು ಬಿದ್ದ ಮನೆಯಲ್ಲಿಯೇ ಜನರು ವಾಸಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ