Advertisement

ಬರಿದಾಗುತ್ತಿದೆ ಕೃಷ್ಣೆಯ ಒಡಲು ; ಕೃಷ್ಣೆಯನ್ನೇ ನಂಬಿದ ರೈತರಲ್ಲಿ ಆತಂಕ

06:14 PM Apr 09, 2022 | Team Udayavani |

ರಬಕವಿ-ಬನಹಟ್ಟಿ : ತಾಲೂಕಿನ ಹಿಪ್ಪರಗಿ ಸೇತುವೆ ಕೆಳಭಾಗದಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗುತ್ತಿದ್ದು, ನದಿ ಅಕ್ಕಪಕ್ಕದ ಜನರಿಗೆ ನೀರಿನ ಅಭಾವದ ಶಂಕೆ ಮೂಡಿ ಆತಂಕ ಪಡುವಂತಾಗಿದೆ.

Advertisement

ಕೃಷ್ಣೆಯನ್ನೇ ನಂಬಿದ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲೂಕಿನ ನೂರಾರು ಹಳ್ಳಿಗಳು ಸಾವಿರಾರು ಏಕರೆ ಜಮೀನಿಗೆ ಈ ನದಿಯೇ ಜೀವನದಿಯಾಗಿದೆ. ಇನ್ನೂ ಖಾಲಿಯಾಗುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಈ ಭಾಗದ ರೈತರಲ್ಲಿ ಆತಂಕದ ಚಾಯೆ ಮೂಡಿದೆ.

ಈಗತಾನೇ ಕಬ್ಬು ಕಟಾವು ಮುಗಿದು ಕುಳೆ ಬೆಳೆಗಳು ಚಿಗುರುತ್ತಿವೆ. ಈಗ ನದಿಯಲ್ಲಿ ನೀರು ಕಡಿಮೆಯಾದರೆ ಬೆಳೆಗಳು ಒಣಗುತ್ತವೆ ಎಂಬ ಭಯ ಶುರುವಾಗಿದೆ. ಆದರೆ ಅಧಿಕಾರಿಗಳು ಹೇಳುವಂತೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಯಾವುದೇ ಅಭಾವವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಬೆಸಿಗೆಯಲ್ಲಿನ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಈಗ ತೆನೆಗಟ್ಟುತ್ತಿವೆ ಈಗ ನೀರಿನ ತೊಂದರೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.

ಹಿಪ್ಪರಗಿ ಸೇತುವೆಯ ಒಟ್ಟು ನೀರಿನ ಸಾಮರ್ಥ್ಯ 6 ಟಿಎಂಸಿ. ಆದರೆ ಈಗ 5.16 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಸೇತುವೆ ಮೇಲ್ಬಾಗದ ಜನರಿಗೆ ಬೇಸಿಗೆ ಮುಗಿಯುವ ವರೆಗೂ ನಿರಿನ ಅಭಾವವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿ ವಿಠ್ಠಲ ನಾಯಕ್.

ಇದನ್ನೂ ಓದಿ : ಕೆನಡಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಸಾವು

Advertisement

ಜಲಾಶಯದ ಮುಂಬದಿಯಲ್ಲಿ ನೀರು ಖಾಲಿಯಾದ ಕಾರಣ ಈ ಭಾಗದ ಹಳ್ಳಿಗಳ ರೈತರು ಜಲಾಶಯದಿಂದ 1 ಟಿಎಂಸಿ ಯಷ್ಟಾದರೂ ನೀರನ್ನು ಕೆಳಾಬಾಗಕ್ಕೆ ಬಿಡಲು ಮನವಿ ಮಾಡಲಾಗಿದೆ. ನೀರು ಬಿಟ್ಟರೆ ಅದು ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೂ ಹೋಗಿ ಸಂಗ್ರಹವಾಗುತ್ತದೆ. ಇದರಿಂದ ಈ ಭಾಗದ ರೈತರಿಗೂ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ತುಬಚಿ ಗ್ರಾಮದ ರೈತರಾದ ಸುರೇಶಗೌಡ ಪಾಟೀಲ.

ರಬಕವಿ ಬನಹಟ್ಟಿ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್‌ವೆಲ್ ಇರುವ ಮಹೀಷವಾಡಗಿ ಸೇತುವೆಯಲ್ಲಿ ಎರಡು ಟಿಎಂಸಿ ನೀರು ಸಂಗ್ರಹವಿದ್ದು, ಬೇಸಿಗೆ ಕಾಲ ಮುಗಿಯುವವರೆಗೂ ಈ ಬಾರಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next