Advertisement

ಯುವಕರಿಂದ ಕೃಷ್ಣಾ ನದಿ ತೀರ ಸ್ವಚ್ಛತಾ ಕಾರ್ಯ

06:01 PM Feb 15, 2022 | Shwetha M |

ಆಲಮಟಿ: ಈ ಭಾಗದ ಆರಾಧ್ಯ ದೈವ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದ ಜಾತ್ರೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ದಂಡೆಯಲ್ಲಿನ ಕಲ್ಮಷವನ್ನು ತೆಗೆದು ನದಿ ತೀರ ಸ್ವಚ್ಛಗೊಳಿಸಲಾಯಿತು.

Advertisement

ಬಾಗಲಕೋಟೆಯ ಸಂಕಲ್ಪ ಸೇವಾ ಪ್ರತಿಷ್ಠಾನ ಹಾಗೂ ಯಲಗೂರದ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯ ವತಿಯಿಂದ ಸ್ವಚ್ಛತಾ ಕಾರ್ಯಹಮ್ಮಿಕೊಳ್ಳಲಾಗಿತ್ತು.

ಫೆ. 19ರಂದು ಆಂಜನೇಯ ಕಾರ್ತಿಕೋತ್ಸವ ನಡೆಯಲಿದೆ. ಯಲಗೂರೇಶ್ವರ ದೇವಸ್ಥಾನದ ಭಕ್ತರು ರಾಜ್ಯ, ಅಂತಾರಾಜ್ಯ ಸೇರಿದಂತೆ ವಿವಿಧೆಡೆ ಭಕ್ತರು ಆಗಮಿಸಿ ಕೃಷ್ಣಾ ನದಿಯಲ್ಲಿ ಮಿಂದೆದ್ದು ನದಿಯಿಂದ ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕುತ್ತಾರೆ. ಭಕ್ತರ ಅನುಕೂಲಕ್ಕಾಗಿ ನದಿ ತೀರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ನದಿ ತೀರವನ್ನು ಸ್ವತ್ಛಗೊಳಿಸಲಾಗಿದ್ದರೂ ಮತ್ತೆ ನದಿಯಲ್ಲಿ ಹರಿದು ಬಂದಿರುವ ಕಸ ಕಡ್ಡಿಗಳು, ಭಕ್ತರು ಬೀಸಾಡಿದ ಬಟ್ಟೆಗಳು ಜಮೆಯಾಗಿದ್ದವು. ನದಿ ದಡದಲ್ಲಿರುವ ಬಟ್ಟೆ ಬದಲಾಯಿಸುವ ಕೋಣೆಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಬಣ್ಣ ಹಚ್ಚಲಾಯಿತು.

ಕೆಲವು ಕಡೆಗಳಲ್ಲಿ ಡಸ್ಟ್‌ ಬಿನ್‌ಗಳನ್ನು ಇಟ್ಟು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಅಳವಡಿಸಲಾಯಿತು. ಕೃಷ್ಣೆಯಲ್ಲಿ ಸ್ನಾನ ಮಾಡಿ ಪಾಪವನ್ನಷ್ಟೇ ಬಿಟ್ಟು ಹೋಗಿ, ಬಟ್ಟೆಯನ್ನಲ್ಲ ಎಂಬಿತ್ಯಾದಿ ಜಾಗೃತಿಯ ನಾಮಫಲಕವನ್ನು ಅಳವಡಿಸಲಾಯಿತು. ಬಾಗಲಕೋಟೆಯ ನರಸಿಂಹ ಆಲೂರ, ಭಾಸ್ಕರ ಮನಗೂಳಿ, ಕಿರಣ ಕುಲಕರ್ಣಿ, ಶಿವಾನಂದ ಕೆಂಚಣ್ಣವರ, ಭೀಮಾಶಂಕರ ನಾಡಗೌಡ, ಸುನೀಲ ನಾಗರಾಳ, ಯಲಗೂರದ ಬದರಿನಾಥ ಚಿಮ್ಮಲಗಿ, ಗೋಪಾಲ ಗದ್ದನಕೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next